ದೇವರ ಮಾತು ಹತ್ತನೇ ಅಧ್ಯಾಯ
10.1 ಗಟ್ಟಿಮುಟ್ಟಾದ ಕೈಗೊ ಇಪ್ಪ ಅರ್ಜುನಾ, ಪ್ರೀತಿ ಇಪ್ಪನಾದ ನಿನಗೆ
ಒಳ್ಳೆದಾಯೆಕ್ಕು ಹೇಳಿ ತೋರುವದರಿಂದ ಇನ್ನು ಕೆಲವು ಮುಖ್ಯವಾದ ಸಂಗತಿಗಳ ನಿನಗೆ ಕಲಿಶುತ್ತೆ,
ಗವನಮಾಡಿ ಕೇಳು.
10.2 ಎನ್ನ ಸುರುವಿನ ಬಗ್ಗಿಪ್ಪ ತಿಳುವಳಿಕೆ ದೇವರ್ಗೊಕ್ಕು ಇಲ್ಲೆ
ತಪಸ್ಸು ಮಾಡುವನ್ಥಾ ಋಷಿಗೊಕ್ಕುದೆ ಇಲ್ಲೆ, ಎಂತಾಳಿದರೆ ಆನು ಅವಕ್ಕೆಲ್ಲಾ ಮದಲೆ ಇಲ್ಲಿಪ್ಪವ.
10.3 ಆನು ಹುಟ್ಟದ್ದವನುದೇ, ಸುರುವಿಲ್ಲದ್ದವನುದೇ ಲೋಕಕ್ಕೆಲ್ಲಾ
ದೇವರುದೇ ಆಗಿದ್ದೆ. ಹೀಂಗಿಪ್ಪ ಎನ್ನ ಸಂಗತಿಯ ತಿಳುದಿಪ್ಪ, ಮನುಷ್ಯರಲ್ಲಿ ತಪ್ಪುತಿಳುವಳಿಕೆ
ಇಲ್ಲದ್ದವನಾದ ಒಬ್ಬ ಎಲ್ಲಾ ಪಾಪಂಗಳಿಂದಲುದೇ ಬಚವಾವುತ್ತ.
10.4,10.5 ಜೀವಿಗೊಕ್ಕೆ ಮುಂದೆ ಹೇಳುವಂಥಾ ಎಲ್ಲಾ ಭಾವಂಗಳುದೇ
ಎನ್ನಿಂದಲೇ ಸಿಕ್ಕುವದು. ಅದೇವದೆಲ್ಲಾ ಹೇಳಿದರೆ ಬುದ್ದಿ, ಗೊಂತುಮಾಡುವ ಶೇಷಿ, ತಪ್ಪಲ್ಲದ್ದ
ತಿಳುವಳಿಕೆ, ಕಾವಲಿಪ್ಪ ಶಕ್ತಿ (ಕ್ಷಮೆ), ಇಪ್ಪದರ ಮಾಂತ್ರ ಹೇಳುವ ಶಕ್ತಿ (ಸತ್ಯ), ಕಣ್ಣು
ಕಾಲುಗಳ ನಿಯಂನ್ತ್ರಿಸುವ ಶಕ್ತಿ (ದಮ), ಮನಸ್ಸಿನ ಅಡಗಿಸಿಮಡುಗುವ ಶಕ್ತಿ (ಶಮ), ಸೌಖ್ಯವಾಗಿಪ್ಪ
ರೀತಿ (ಸುಖ), ಬೇಜಾರು (ದುಃಖ), ಮಾಡುಲಿಪ್ಪ ಶಕ್ತಿ (ಭವ), ಇಲ್ಲದ್ದೆ ಮಾಡುವ ಶಕ್ತಿ (ಅಭಾವ),
ಹೆದರಿಕೆ, ಧೈರ್ಯ, ಬೇರಾರನ್ನುದೆ ಉಪದ್ರಮಾಡದ್ದ ರೀತಿ (ಅಹಿಂಸೆ), ಎಲ್ಲೋರನ್ನುದೇ ಒಂದೇ ಹಾಂಗೆ
ನೋಡುವ ರೀತಿ (ಸಮತ್ವ), ಆಗಾಗ ಸಿಕ್ಕುದರಲ್ಲಿ ಸನ್ತೋಷ (ತುಷ್ಟಿಃ), ಕಠಿನಾಧ್ವಾನ ಮಾಡುಲಿಪ್ಪ ಶಕ್ತಿ
(ತಪಸ್ಸು), ತನ್ನತ್ತರಿಪ್ಪ ವಸ್ತುಗಳ ಅದು ನಿಜವಾಗಿ ಬೇಕಾದವಕ್ಕೆ ಕೊಡುವದು (ದಾನ), ಒಳ್ಳೆ
ಹೆಸರು (ಸತ್ಕೀರ್ತಿ), ಹಾಳು ಹೆಸರು (ದುಷ್ಕೀರ್ತಿ), ಹೀಂಗಿಪ್ಪ ಹಲವಾರು ಗುಣಂಗೊ ಎಲ್ಲಾ
ದೇವರತ್ತರಿಂದಲೇ ಜೀವಿಗೊಕ್ಕೆ ಸಿಕ್ಕುವದು.
10. 6 ಜಮದಗ್ನಿ, ವಸಿಷ್ಠ, ಕಾಶ್ಯಪ ಇತ್ಯಾದಿ ಏಳು ಋಷಿಗಳುದೇ, ಸನಕ,
ಸನನ್ದ, ಸನತ್ಕಾರ, ಸನಾತನ ಹೇಳಿ ನಾಕು ಮುನಿಕಳುದೆ, ಮನು ಇತ್ಯಾದಿ ರಾಜಂಗಳುದೇ ಎಲ್ಲಾ
ಎನ್ನತ್ತರಿಂದಲೇ ಬನ್ದದು. ಈಗ ಇಪ್ಪ ಮನುಷ್ಯರೆಲ್ಲಾ ಅವರಿಂದ ಆದ ಪರಂಪರೆಯೇ.
10.7 ಈ ಹೇಳಿದಂಥಾ ಎನ್ನಿಂದಲೇ ಬನ್ದಂಥಾ ಸುರುವಾಣ ಮನುಷ್ಯರನ್ನುದೇ
(ವಿಭೂತಿಗೊ), ಆನು ತಿಳಿಶಿದಂಥಾ ಗುಣಂಗಳನ್ನುದೇ
(ಯೋಗಂಗೊ) ಸರಿಯಾಗಿ ಆರು ಗೊಂತು ಮಾಡುತ್ತನೋ ಅವ ಒಂದರಿಯುದೇ ಆಡದ್ದಂಥಾ ಯೋಗಲ್ಲಿ ಸೇರಿದವನಾವುತ್ತ.
10.8 ಬುದ್ಧಿವಂತರಾಗಿಪ್ಪವು ಆನು ಎಲ್ಲದರದ್ದುದೇ ಒರತೆ, ಎನ್ನಲ್ಲಿಯೇ
ಎಲ್ಲಾ ನೆಲೆ ನಿಂದುಗೊಂಡಿಪ್ಪದು ಹೇಳಿ ತಿಳುದು ಪ್ರೀತಿಯಿಂದ ಎನ್ನ ಪೂಜೆ ಮಾಡುತ್ತವು.
10.9 ಎನ್ನನ್ನೇ ಮನಸ್ಸಿಲ್ಲಿ ಗ್ರೇಶಿಗೊಂಡು (ಗ್ರೇಶಿಸುತ್ತಾ)
ಎನ್ನಲ್ಲಿಯೇ ಜೀವ ಬಿಡ್ಡುಗೊಂಡು ಬಹ್ಹಂಗೊಂಬ್ಬ ಬೋಧನೆ ಮಾಡುತ್ತಾ ಎನ್ನ ಕಥೆಗಳನ್ನೇ ದಿನನಿತ್ಯಾ
ಹೇಳುತ್ತಾ ಸಂತೋಷವಾಗಿ ಜೀವಿಸುತ್ತವು.
10.10 ಏವಗಳುದೇ ಎನ್ನತ್ತರೆ ಸಂಪರ್ಕ ಮಡಿಕ್ಕೊಂಡು ಪ್ರೀತಿಯಿಂದ
ಭಜಿಸುವ ಅವಕ್ಕೆ ಆನು ಒಪ್ಪಬುದ್ದಿಯ ಕೊಡುತ್ತೆ. ಆ ಒಪ್ಪ ಬುದ್ದಿಂದಲಾಗಿ ಅವಕ್ಕೆ ಎನ್ನತ್ತರಂಗೆ
ಬಪ್ಪಲೆಡಿತ್ತು. (ಎನ್ನತ್ತರಂಗೆ ಬಪ್ಪಲೆಡಿವಂಥಾ ಒಪ್ಪಬುದ್ದಿಯ ಆನು ಅವಕ್ಕೆ ಕೊಡುತ್ತೆ)
10.11 ಹಾಂಗೆ
ಜೀವಿಸುವ ಅವರತ್ತರೆ ಅನುಕಂಪೆ ಇಪ್ಪದರಿಂದಲಾಗಿ ಅವರ ಬುದ್ದಿಲಿ ಆನೇ ಒಂದು ಒಳ್ಳೆ ಬೆಣುಚ್ಚಿಇಪ್ಪ
ತಿಳುವಳಿಕೆಯ ದೀಪದಾಂಗೆ ಇದ್ದುಗೊಂಡು ಅವಕ್ಕೆ ತಿಳುವಳಿಕೆ ಇಲ್ಲದ್ದದರಿಂದಲಾಗಿ ಬಪ್ಪ ಕಸ್ಥಲೆಯ
(ಇಲ್ಲಿ ಕಸ್ಥಲೇ ಹೇಳಿದರೆ ಜೀವಿತ ಹೇಳಿ ಶಂಕರಾಚಾರ್ಯರು) ಇಲ್ಲದ್ದಾಂಗೆ ಮಾಡುತ್ತೆ.
ಅರ್ಜುನ ಹೇಳಿದಙ್
10.12-13 ನೀನು
ತುಂಬಾ ದೊಡ್ಡ ದೇವರು ನೀನು ಕಡೇಯಾಣ ಆಶ್ರಯ ಪವಿತ್ರವಾದವ ತುಂಬಾ ಮೇಲಾಣ ತತ್ವವೆ. ತುಂಬಾ ಬಾಳತನ
ಇಪ್ಪವನುದೇ ವಿಶಿಷ್ಟವಾದವನುದೇ ಸುರುವಾಣ ದೇವರುದೇ ಹುಟ್ಟದ್ದವನುದೇ ಎಲ್ಲಾಜಾಗೆಲಿಯೂ ಇಪ್ಪವನುದೇ
ಹೇಳ್ಯೆಲ್ಲಾ ಎಲ್ಲಾ ಋಷಿ ದೇವಋಷಿಯಾದ ನಾರದಂದೆ ಅಸಿತಂದೆ ದೇವಲಂದೆ ವ್ಯಾಸಂದೆ ಈಗ ನೀನು
ಸ್ವಯವುದೇ ಹೇಳುತ್ತಿದ್ದೆ.
10.14 ನೀ ಹೇಳುವ ಈ ಸಂಗತಿಯೆಲ್ಲಾ ನಿಜವೇ ಹೇಳಿ ಆನು ಸಿಶ್ಚಯಿಸುತ್ತಾ
ಇದ್ದೆ. ದೇವರ್ಕ್ಕಗೋ ರಾಕ್ಷಸಂಗಕ್ಕೋ ನಿನ್ನ ನಿಜವಾದ ಸತ್ಯ ಗೊಂತಿಲ್ಲೆ.
10.15 ದೇವರ್ಕ್ಕೊಗೆ ದೇವರಾದ, ಬದಲಿಗೊಂಡಿಪ್ಪಂಥಾ ಲೋಕದ ಆಡಳಿತೆ
ಮಾಡುವವನಾದ, ಇಪ್ಪದರ ಎಲ್ಲಾ ದೇವರಾದ, ಇಪ್ಪದರ ಎಲ್ಲ ಉಂಟು ಮಾಡಿದವನಾದ ಪುರುಷೋತ್ತಮಾ ನಿನ್ನ
ಬಗ್ಗೆ ನಿನಗೇ ಗೊಂತು.
10.16 ಯಾವದೆಲ್ಲಾ ಪ್ರತ್ಯೇಕ ರೂಪಂಗಳ ಧರಿಸಿಗೊಂಡು ಸೀನು ಈ ಲೋಕಲ್ಲಿ
ಇಪ್ಪದೂ ಹೇಳಿಪ್ಪ ಸಂಗತಿಯ ನೀನು ಎನಗೆ ಒಂದರಿ ಹೇಳಿಕೊಡೆಕ್ಕು. ಆ ಸಂಗತಿಯ ಈಡೀ ಹೇಳಿ ಕೊಡೆಕ್ಕು.
10.17 ಎಲ್ಲಾ ಹೊಂದಿಗೊಂಡಿಪ್ಪವನಾದ ಎ ಕಿಟ್ಟಣ್ಣಾ, ನಿನ್ನ ಏವಗಳುದೇ
ಮನಸ್ಸಿಲ್ಲಿ ಎವದೆಲ್ಲಾ ರೂಪಂಗಳಲ್ಲಿ ಎನಗೆ ಗ್ರೇಶುಲಕ್ಕು ಹೇಳಿ ಕಲಿಶೆಕ್ಕು.
10.18 ನಿನಗೆಂತೆಲ್ಲಾ ಬಲ ಇದ್ದು ಹೇಳುವದರನ್ನುದೇ ನೀನೇವದೆಲ್ಲಾ
ವಿಶೇಷ ರೂಪಲ್ಲಿಪ್ಪದೂ ಹೇಳುವದರನ್ನುದೇ ಬಿಡೂಸೀ ಹೇಳು ಆನು ಕೇಳುತ್ತೆ. ಅದು ಕೇಳದ್ದೆ ಎನಗೆ ತೃಪ್ತಿ
ಆವುತ್ತಿಲ್ಲೆ.
ದೇವರು ಹೇಳಿದವು
10.19 ಸರಿ ಹೇಳುತ್ತೆ. ಕೆಲವು ಮುಖ್ಯವಾದದರ ಮಾಂತ್ರ ಹೇಳುತ್ತೆ
ಅಲ್ಲದ್ದೆ ಎಲ್ಲವೂ ಹೇಳುಲೆ ನಿಂದರೆ ಅದು ಮುಗಿವದೂ ಹೇಳಿ ಇಲ್ಲೆ.
10.20 ಒಪ್ಪಕುಂಞ್ಞಿಯಾಗಿ ಕೇಳುವವನೇ, ಎಲ್ಲಾ ಜೀವಂಗಳ ಒಳಗೂ ಇಪ್ಪ
ಆತ್ಮ ಆನೇ ಬೇರೆ ಆರೂ ಅಲ್ಲ. ಜೀವಿಗಳ ಸುರುವುದೆ ಆನೇ, ನಡುವುದೆ ಆನೇ, ಕಡೆಯುದೇ ಆನೇ.
10.21 ಹನ್ನೆರಡು ಆದಿತ್ಯಂಗಳಲ್ಲಿ ಆನು ವಿಷ್ಣ ಹೇಳಿ ಹೆಸರಿಪ್ಪ
ಆದಿತ್ಯ. ಬೆಣುಚ್ಚಿ ಇಪ್ಪ ವಸ್ತುಗಳಲ್ಲಿ ಕಿರಣಂಗೊ ಇಪ್ಪ ರವಿ ಆನೇ. ಎಳು ಮರುತ್ತುಗಳಲ್ಲಿ ಆನು ಮರೀಚಿ. ಇರುಳಪ್ಪಗ ಆಕಾಶಲ್ಲಿ ಮಿಣಿ ಮಿಣಿ ಹೇಳಿ
ಬೆಣುಚ್ಚಿ ಕೊಡುವ ವಸ್ತುಗಳಲ್ಲಿ ಆನು ಬಂದ್ರಙ್.
10.22 ವೇದಂಗಳಲ್ಲಿ ಆನು ಸಾಮವೇದ, ದೇವರುಗಳಲ್ಲಿ
ಆನು ಇಂದ್ರಙ್, ಶರೀರೀವಯವಂಗಳಲ್ಲಿ ಆನು ಮನಸ್ಸು, ಜೀವಿಗಳಲ್ಲಿ ಗೊಂತುಮಾಡುವಂಥಾ ಶಕ್ತಿ ಆನು.
10.23 ರುದ್ರಂಗಳಲ್ಲಿ ಆನು ಶಂಕರಙ್, ಯಕ್ಷ ರಕ್ಷಸ್ಸು ವರ್ಗದ
ಜೀವಿಗಳಲ್ಲಿ ಆನು ಕುಬೇರಙ್, ಎಂಟು ವಸುಗೊ ಇಪ್ಪದರಲ್ಲಿ ಆನು ಅಗ್ನಿ , ಕುತ್ತಕ್ಕಿಪ್ಪ
ಗುಡ್ಡೆಗಳಲ್ಲಿ ಆನು ಮೇರು ಪರ್ವತ.
10.24 ಪುರೋಹಿತರಲ್ಲಿ ಮುಖ್ಯನಾದ ವಸಿಷ್ಠ ಆನೇ. ಸೇನಾನಿಗಳಲ್ಲಿ ಆನೇ
ಶಿವನ ಮಗನಾದ ಸ್ಕಂದ. ನೀರು ತುಂಬಿಗೊಂಡಿಪ್ಪ ಹಳ್ಳಂಗಳಲ್ಲಿ ಸಮುದ್ರ ಆನೇ ಆಗಿದ್ದೆ.
10.25 ಮಹಾಋಷಿಗಳಲ್ಲಿ ಭೃಗು ಮಹರ್ಷಿ ಆನೇ, ಭಾಷೆಯ ಪದಂಗಳಲ್ಲಿ ಓಂ
ಕಾರ ಪದ ಆನೇ, ಯಜ್ಢಂಗಳಲ್ಲಿ ಮನ್ತ್ರ ಜಪ ಎಂಬ
ಯಜ್ಞ ಆನೇ, ಗುಡ್ಡೆಗಳ್ಲಲಿ ಹಿಮಾಲಯ ಆನೇ ಆಗಿದ್ದೆ.
10.26 ಎಲ್ಲಾ ಮರಂಗಳಲ್ಲಿಯೂ ಮುಖ್ಯವಾದ ಅಶ್ವತ್ಥ ಆನೇ, ದೇವ
ಋಷಿಗಳಲ್ಲಿ ನಾರದ ಆನೇ, ಗಂಧರ್ವಂಗಳಲ್ಲಿ ಚಿತ್ರರಥಙ್ ಆನೇ, ಸಿದ್ದಂಗಳಲ್ಲಿ ಕಪಿಲ ಮುನಿ ಆನೇ
ಆಗಿದ್ದೆ.
10.27 ಕುದುರೆಗಳಲ್ಲಿ ಅಮೃತ ಮಥನದ ಸಮಯ ಮೂಡಿ ಬಂದ ಉಚ್ಛೈಶ್ರವಸ್ಸು
ಆನೇ, ಆನೆಗಳಲ್ಲಿ ಐರಾವತ ಆನೇ. ಮನುಷ್ಯರಲ್ಲಿ ಅವರ ನೇತೃಸ್ಥಾನದಲ್ಲಿಪ್ಪವನು ಆನೇ.
10.28 ಆಯುಧಂಗಳಲ್ಲಿ ವಜ್ರುಯುಧ ಆನೇ, ದನಗಳಲ್ಲಿ ಆನೇ ಕಾಮಧೇನು. ಮಕ್ಕಳ
ಹುಟ್ಟುಸುಲಿಪ್ಪ ವಿವಿಧ ಸಹಾಯಕರವಾದ ಸಂಗತಿಗಳಲ್ಲಿ ಕಾಮದೇವ ಆನೇ. ಸರ್ಪಂಗಳಲ್ಲಿ ವಾಸುಕಿ ಆನೇ.
10.29 ನಾಗಂಗಳಲ್ಲಿ ಅನಂತ ಆನೇ. ನೀರಲ್ಲಿಪ್ಪವರಲ್ಲಿ ಆನೇ ವರುಣ.
ಪಿತೃಗಳಲ್ಲಿ ಅರ್ಯಮಾ ಹೇಳುವವನು ಆನೇ. ಶಿಕ್ಷೆಮಾಡುವದರಲ್ಲಿ ಆನೇ ಯಮ.
10.30 ದೈತ್ಯಂಗಳಲ್ಲಿ ಪ್ರಹ್ಳಾದ ಆನೇ. ಲೆಕ್ಕ ಹಾಕುಲೆ ಉಪಯೋಗಿಸುವ
ಕೆಣಿಗಳಲ್ಲಿ ಆನೇ ಸಮಯ. ಮೃಗಂಗಳಲ್ಲಿ ಸಿಂಹ ಮತ್ತೆ ಹಕ್ಕಿಗಳಲ್ಲಿ ಗರುಡ ಆನೇ ಆಗಿದ್ದೆ.
10.31 ತೊಳವ ವಸ್ತುಗಳಲ್ಲಿ ಗಾಳಿ ಆನೇ. ಆಯುಧ ಹಿಡಿವವರಲ್ಲಿ ರಾಮ
ಆನೇ. ಮೂನುಗಳಲ್ಲಿ ಮಕರ ಮೀನು ಆನೇ. ಒರತೆಗಳ ಎಡೆಲಿ ಗಂಗಾನದಿ ಆನೇ.
10.32 ಪ್ರಪಂಚ ಸುರು ಆಗಿ ನೆಲೆ ನಿಂಬ ಸಂಗತಿಗೆ ಸರ್ಗ ಹೇಳಿ ಹೆಸರು.
ಆ ಸರ್ಗದ ಸುರುವುದೆ ನಡುವುದೆ ಕಡೇಯುದೆ ಆನೇ. ತಿಳುವಳಿಕೆಗಳಲ್ಲಿ ಆತ್ಮದ ಬಗ್ಗಿಪ್ಪ ತಿಳುವಳಿಕೆ,
ಅತ್ತೆ ಇತ್ತೆ ಸಂಗತಿಗಳ ಹೇಳಿ ಹೋಂಟಿ ಹೋರುದರಲ್ಲಿ ವಾದ ಹೇಳುವ ಸಂಗತಿ ಆನೇ.
10.33 ಅಕ್ಷರಂಗಳಲ್ಲಿ ಅಕಾರ ಆನೇ. ಸಮಾಸಂಗಳ ಎಡೆಲಿ ದ್ವಂದ್ವ ಆನೇ.
ಹಾಳಾಗದ್ದದರಲ್ಲಿ ಕಾಲ ಆನೇ. ಕೆಲಸಂಗಳ ಫಲ ಕೊಡುವದರಲ್ಲಿ ನಾಕು ಮೋರೆ ಇಪ್ಪ ಬ್ರಹ್ಮನುದೇ ಆನೇ
ಆಗಿದ್ದೆ.
10.34 ಎಲ್ಲಾ ಹಾಳುವಾಡುವದರಲ್ಲಿ ಮರಣ ಆನೇ. ಉಂಟು ಮಾಡುವದರಲ್ಲಿ
ಹುಟ್ಟು ಹೇಳುವ ಸಂಗತಿ ಆನೇ. ಸ್ತ್ರೀ ಲಂಗ ಪದಂಗಳಲ್ಲಿ ಕೀರ್ತಿ, ಶ್ರೀ, ವಾಕ್ ಹೇಳುವ ಪದ,
ಸ್ಮೃತಿ , ಮೇಧಾ, ಧೃತಿ, ಕ್ಷಮಾ ಇತ್ಯಾದಿ ಸ್ತ್ರೀ ಲಿಂಗ ವಚನಂಗಳುದೇ ಆನೇ.
10.35 ಸಾವವೇದಲ್ಲಿಪ್ಪ ಪದ್ಯಂಗಳಲ್ಲಿ ಬೃಹತ್ ಸಾಮ ಹೇಳಿ ಹೆಸರಿಪ್ಪ
ಪದ್ಯ ಆನೇ. ವೇದ ಮಂತ್ರಂಗಳ ಫಟಿಸಿದ ರೀತಿಗಳಲ್ಲಿ ಗಾಯತ್ರೀ ಛಂದಸ್ಸು ಆನೇ.
10.36 ಅತ್ತೆ ಇತ್ತೆ ಮೋಸಮಾಡುವ ರೀತಿಗಳಲ್ಲಿ ಜೂಜಾಟ ಆನೇ. ಒಳ್ಳೆ
ತೇಜಸ್ಸಿಪ್ಪವರ ತೇಜಸ್ಸು ಆನೇ. ಗೆಲ್ಲು ಆನೇ. ಕಠಿನಾಧ್ವಾನ ಮಾಡುವವರ ಅಧ್ವಾನವುದೇ ಆನೇ. ಒಳ್ಳೆ
ಜನಂಗಳ ಒಳ್ಳೆ ಗುಣವುದೇ ಆನೇ.
10,37 ಯಾದವಕುಲದವರಲ್ಲಿ
ಆನೇ ಶ್ರೀ ಕೃಷ್ಣ. ಪಾಣ್ಡವರಲ್ಲಿ ಅರ್ಜುನ ಆನೇ. ವೇದವ ಮನನ ಮಾಡುವ ಹವ್ಯಾಸ ಇಪ್ಪವರಲ್ಲಿ ಆನೇ
ವೇದವ್ಯಾಸ. ಕವಿಗಳ್ಲಲಿ ಉಶನಸ್ಸು ಹೇಳಿ ಹೆಸರಿಪ್ಪ (ಶುರ್ಕಾಚಾರ್ಯ ಆಡ) ಕವಿಯುದೇ ಆನೇ.
10.38 ಶಿಕ್ಷೆಗಳಲ್ಲಿ ದಣ್ಡ ಶಿಕ್ಷೆ ಆನೇ. ಜಯಿಸುಲೆ
ಆಗ್ರಹಿಸುವವರಲ್ಲಿಪ್ಪ ನೀತಿಬೋಧವು ಆನೇ. ಗುಟ್ಟು ಮಡಿಕ್ಕೊಂಡಿಪ್ಪವರ ಮೌನವಪದೇ ಆನೇ. ತಿಳುವಳಿಕೆ
ಇಪ್ಪವರ ತಿಳಿವುದೆ ಆನೇ.
10.39 ಎಲ್ಲಾ ಜೀವಿಗಳದ್ದುದೇ ಬುತ್ತು ಎವದೋ ಅದು ಆನೇ ಅರ್ಜುನಾ.
ಹಂದುದೂ ಹಂದ್ದದ್ದದೂ ಆಗಿಪ್ಪ ಎಂತೆಲ್ಲಾ ಇ ಲೋಕಲ್ಲಿದ್ದೋ ಆನಿಲ್ಲದ್ದೆ ಅದಿಲ್ಲೆ ಹೇಳಿ ನಿನಗೆ
ತಿಳುಕ್ಕೊಂಬಲಕ್ಕು.
10.40 ಇದೆಲ್ಲಾ ನಿನಗೆ ಗೊಂತಪ್ಪಲೇ ಹೇಳಿ ಸಣ್ಮವಾಗಿ ಆನೀಗ
ಹೇಳಿದ್ದದು. ಎನ್ನ ವಿಶೇಷವಾದ ರೂಪಂಗೊಕ್ಕುದೇ ಅವತಾರಂಗೊಕ್ಕುದೇ ಅಳತೆಯೇ ಇಲ್ಲೆ.
10.41 ಯಾವದೆಲ್ಲಾ ಗೆಲವಿಪ್ಪದಾಗಿ ತುಂಬಾ ವಿಶೇಷವಾಗಿ ಇದ್ದೋ
ಅದೆಲ್ಲಾ ಎನ್ನದ್ದೇ ತೇಜಸ್ಸಿನ ಅಂಶಂದ ಆದ್ದದೂ ಹೇಳಿ ತಿಳಿವಲಕ್ಕು.
10.42 ಮತ್ತೆ ಇದರ ಬಗ್ಗೆಲ್ಲಾ ಹೆಚ್ಚು ಗೊಂತುಮಾಡಿಕ್ಕಿ ನಿನಗೆಂತಪ್ಪಲಿದ್ದು
ಅರ್ಜುನಾ. ಎನ್ನ ಒಂದು ಅಂಶಂದ ಆನು ಈ ಜಗತ್ತಿನನ್ನೇ ಇಡೀ ಹಬ್ಬಿಗೊಂಡಿದ್ದೆ. (ದೇವರು ತನ್ನ ಒಂದಂಶಂದ
ಜಗತ್ತಿನ ಬೇಕಾದಾಂಗೆ ಪರಿಪಾಲನೆ ಮಾಡುತ್ತವು)
ಹೀಂಗೆ ದೇವರ ಮಾತುಗಳ ಹತ್ತನೇ ಅಧ್ಯಾಯ ಇಲ್ಲಿಗೆ ಇಡೀ ಆತು.
No comments:
Post a Comment