Wednesday, August 14, 2013

ದೇವರ ಮಾತು - ಮೂರನೆ ಅಧ್ಯಾಯ 3rd Chapter of The Divine Message



ದೇವರ ಮಾತು  - ಮೂರನೆ ಅಧ್ಯಾಯ
3.1 ಏ ತಪ್ಪು ಮಾಡುವವರ ಶಿಕ್ಷಿಸುವವನೆ (ಜನಾರ್ದನಾ), ಕೆಲಸಮಾಡುವದರಿಂದಲುದೆ ಒಳ್ಳೆದು ದೆವರಬಗ್ಗೆ , ಲೋಕದಬಗ್ಗೆ ಮತ್ತೆ ಅವನವನ ಬಗ್ಗೆ ತಿಳಿದು ಆತ್ಮನಲ್ಲಿ ಬುದ್ದಿಯ ನಿಲುಸುತ್ತಾ ಇಪ್ಪದು ಹೇಳಿ ನಿನ್ನ ಅಭಿಪ್ರಾಯ. ಹಾಂಗಾದರೆ ಮತ್ತೆ ಘೋರಮಾದ ಈ ಲಡಾಯಿ ಮಾಡುಲೆ ಎನ್ನತ್ತರೆ ಎಂತಗೆ ಹೇಳುತ್ತಾ ಇದ್ದೆ ಕೇಶಿಯ ಕೊಂದವನೇ (ಕೇಶವಾ) ?
3.2 ಸಂಶಯ ಅಪ್ಪಾಂಗಿಪ್ಪ ನಿನ್ನ ಮಾತುಗಳ ಕೇಳಿ ಎನ್ನ ಬುದ್ದಿ ಅಲ್ಲಿಯು ಅಲ್ಲ ಇಲ್ಲಿಯೂ ಅಲ್ಲ ಹೇಳುವಾಂಗಾಯಿದು. ಹಾಂಗಾಗಿ ಸರಿಯಾಗಿ ತೀರುಮಾನಮಾಡಿ, ಎನಗೆ ಒಳ್ಳೆದಪ್ಪನ್ಥಾ ಒಂದು ಸಂಗತಿಯ ಹೇಳು ನೋಡುತ್ತೆ.
ದೇವರು ಹೇಳಿದವು
3.3  ಏ ಪಾಪ ಮಾಡದ್ದವನೆ (ಅನಘ), ಈಗ ರಜ್ಜ ಮದಲೆ ಆನು ಹೇಳಿದ ಎರಡು ಜೀವಿತ ರೀತಿಗೊ ಎಂತೆಲ್ಲಾಳಿದರೆ, ಈ ಲೋಕಲ್ಲಿ ದೇವರ ಬಗ್ಗೆ (ಆತ್ಮನ ಬಗ್ಗೆ) ಎಲ್ಲಾ ಸರಿಯಾದ ತಿಳುವಳಿಕೆ ಬನ್ದನ್ಥವಕ್ಕೆ ಸತ್ಯವನ್ನೇ ಗ್ರೇಶುತ್ತಾ (ಧ್ಯಾನ ಮಾಡಿಗೊಂಡು) ಇದ್ದರೆ ಸಾಕು ಮುಕ್ತಿ ಸಿಕ್ಕುಗು ಹೇಳಿಯುದೆ ಹಾಂಗೆ ಅಷ್ಟು ತಿಳುವಳಿಕೆ ಇಲ್ಲದ್ದವಕ್ಕೆ ಎನಗೆ ಅದು ಬೇಕು ಎನಗೆ ಇದು ಬೇಕು ಹೇಳುವದಿಲ್ಲದ್ದೆ ತಾನು ಮಾಡೆಕ್ಕಾದ ಕೆಲಸಂಗಳ ಮಾಡಿಗೊಂಡೇ ಇರೆಕ್ಕು, ಅದರಿಂದಲಾಗಿ ಮನಸ್ಸು ಶುದ್ಧವಾಗಿ ಮುಂದಂಗ್ಗೆ ಒಳ್ಳೆದಾವುತ್ತು ಹೇಳಿಯುದೆ.
3.4 ಬರೇ ಕೆಲಸಂಗಳ ಮಾಡದ್ದೆ ಕೂಪದರಿಂದಾಗಿ ಆರಿಂಗುದೆ ತಿಳುವಳಿಕೆ (ಆತ್ಮನ ಬಗ್ಗೆ , ತನ್ನ ಬಗ್ಗೆ ಇತ್ಯಾದಿ ಜ್ಞಾನಂಗೊ) ಸಿಕ್ಕುತ್ತಿಲ್ಲೆ. ಮನಸ್ಸು ಚೊಕ್ಕ ಆಗದ್ದೆ (ಶುದ್ದ ಆಗದ್ದೆ) ಕೆಲಸಂಗಳ ಬಿಟ್ಟದರಿಂದಾಗಿ (ಸನ್ಯಾಸ) ಮಾಂತ್ರ ಒಬ್ಬಂಗುದೇ ಎವಾಗಳು ಇಪ್ಪನ್ಥಾ ಮನಸ್ಸಮಾಧಾನ ಸಿಕ್ಕುತ್ತಿಲ್ಲೆ. (ಸಮಾಧಿಯ ಪಡೆತ್ತಾ ಇಲ್ಲೆ)
3.5 ಒಂದರಿಯುದೇ ಒಂದು ನಿಮಿಷ ಸಾನುದೆ ಹುಟ್ಟಿದವ (ತಿಳುವಳಿಕೆ ಇಪ್ಪವ ಆಗಲಿ ಇಲ್ಲದ್ದವ ಆಗಲಿ) ಕೆಲಸ ಮಾಡದ್ದೆ ಇರುತ್ತಾ ಇಲ್ಲೆ. ಎಂತಾಳಿದರೆ ಸ್ವತಃ ಬಪ್ಪನ್ಥಾ ಎನಗದು ಬೇಕು, ಎನಗಿದು ಪ್ರೀತಿ, ಎನಗಿದು ಅಪ್ಪಲೇ ಆಗ ಹೇಳಿ ಎಲ್ಲಾ ಇಪ್ಪಂತಾ ವಿಚಾರಂಗಳಿಂದಲಾಗಿ ಆರೋ ಕಟ್ಟಿ ಹಾಕಿ ಕೆಲಸ ಮಾಡುಸುವ ಹಾಂಗೆ ಎಲ್ಲೋರುದೆ ಎಂತೆಲ್ಲಾದರುದೆ (ಒಂದಲ್ಲದ್ದರೊಂದು) ಮಾಡುತ್ತಾ ಇರುತ್ತವು.
3.6 ಕೆಲಸಮಾಡುಲಿಪ್ಪನ್ಥಾ ಅವಯವಂಗಳ (ಕೈ ಕಾಲು ಕಣ್ಣು ಬಾಯಿ ಇತ್ಯಾದಿಗಳಾದ ಕರ್ಮೇಂದ್ರಿಯಂಗಳ) ಅಡಗಿಸಿಕಕ್ಕಿಯುದೆ ಆರು ಮನಸ್ಸಿಲ್ಲಿ ಬೇರೆ ಬೇರೆ ವಿಚಾರ ಮಾಡುತ್ತಾ ಇರುತ್ತನೋ.,  ಕಣ್ಡದರ, ಕೇಳಿದ್ದದರ , ಕಾಣೆಕ್ಕಾದ್ದದರ , ಕೇಳೆಕ್ಕಾದ್ದದರ ಹೇಳಿ ಹಲವಾರು ಸಂಗತಿಗಳಲ್ಲಿ ಇದ್ದುಗೊಂಡಿಪ್ಪವನ ಇಲ್ಲದ್ದದರಲ್ಲೇ ಜೀವಿಸುಸವ (ಮಿಥ್ಯಾಚಾರ ) ಹೇಳಿ ದಿನುಗೋಳೆಕ್ಕು. (ಇದ್ದು ಹೇಳಿ ತೋರುವದರಲ್ಲಿ ಆದರೆ ಇಲ್ಲದ್ದದರಲ್ಲಿ ಜೀವಿಸುವವ)
3.7 (ಆದರೆ) ಆರು ಕೈಕಾಲುಗಳ ಮನಸ್ಸಿನಿಂದ ವಶಪಡುಸಿಗೊಂಡು ಎಂತರಲ್ಲಿಯೂ ಅಂಟದ್ದೇ ಕೈಕಾಲುಗಳಿಂದ ಕೆಲಸವ ದೇವರಿಂಗೆ ಸಮರ್ಪಣವಾಗಿ ಮಾಡುತ್ತನೋ ಎಂತರಲ್ಲಿಯೂ ಆಗ್ರಹ ಇಲ್ಲದ್ದ ಅವ ಶ್ರೇಷ್ಠನಾದವ. (ಕರ್ಮಯೋಗ ಹೇಳಿ)
3.8 ದಿನಸರಿ ಮಾಡೆಕ್ಕಾದ ಕೆಲಸಂಗಳ ನೀನು ಮಾಡು, ಎಂತಾಳಿದರೆ ಕೆಲಸ ಮಾಡದ್ದೆ ಇಪ್ಪದರಿಂದ ಮಾಡುವದೆ ಹೆಚ್ಚಿಗೆ ಒಳ್ಳೆದು. ಕೆಲಸ ಮಾಡದ್ದೆ ಇದ್ದರೆ ನಿನಗೆ ನಿನ್ನ ಮೆಯ್ಯ ಸಾನೂ ಪರಿಪಾಲಿಸುಲೆ ಎಡಿಯ ಅಲ್ಲದಾ. (ಹಾಂಗಾಗಿ ಕೆಲಸ ಮಾಡುಲಕ್ಕು.)
3.9 ಈ ಲೋಕಲ್ಲಿ ಇಪ್ಪ ಜನರಿಗುದೆ ತನಗುದೆ ಒಳ್ಳೆದಪ್ಪಂನ್ಥಾ ಸತ್ಕರ್ಮಂಗೊ(ಒಳ್ಳೆ ಕೆಲಸಂಗೊ) ಅಲ್ಲದ್ದೆ ಅವನವನ ಸನ್ತೋಷಕ್ಕೆ ಬೇಕಾಗಿ ಮಾಂತ್ರ ಮಾಡುವ ಕೆಲಸಂಗಳಿಂದಲಾಗಿ ಜನಂಗೊ ಈ ಜಗತ್ತಿಲ್ಲಿ ಕಟ್ಟಿ ಹಾಕಿದವರಾಂಗೆ ಆಗಿ ಬಿಡುತ್ತವು. ಹಾಂಗಾಗಿ ಕೆಲಸಂಗಳಲ್ಲಿ ತನ್ನ ಕಟ್ಟಿ ಹಾಕಿ ಕೊಳ್ಳದ್ದೆ ಕೆಲಸವ ಲಾಯಕವಾಗಿ ಮಾಡು ಕುನ್ತಿಯ ಮಗನೇ.......
3.10 ಜೀವಿಗಳ ಹುಟ್ಟುಸುವ ಸಮಯಲ್ಲಿ ಪ್ರಜಾಪತಿ (ಜೀವಿಗಳ ಜನ್ಮವ ನಿಯಂತ್ರಿಸುವ ದೇವರ ಅಂಶ) ಅವಕ್ಕಿಪ್ಪ ಕೆಲಸವನ್ನುದೆ ಹುಟ್ಟುಸಿದ್ದ. ಹಾಂಗೆ ಜನರನ್ನು ಅವಕ್ಕಿಪ್ಪ ಕೆಲಸಂಗಳನ್ನು ಹುಟ್ಟುಸಿಕ್ಕಿ ಹೇಳಿದ ಈ ಕೆಲಸಂಗಳಿಂದ ನಿಂಗೊ ಇನ್ನೂ ಇನ್ನೂ ಕುಲವ ದೊಡ್ಡಮಾಡಿ, ಈ ಕೆಲಸವೇ ನಿಂಗೊಗಿಪ್ಪ ಕಾಮಧೇನು (ಗ್ರೇಶಿದ್ದದರ ಕೊಡುವ ದನ).
3.11 ಕೆಲಸಂದಲಿಂದಾಪಿ ದೇವರ್ಗಳ ಸನ್ತೋಷ ಪಡುಸಿ. ಸನ್ತೋಷ ಪಟ್ಟ ಆ ದೇವರ್ಕ್ಕೊ ನಿಂಗಳನ್ನುದೆ ಸನ್ತೋಷ ಪಡುಸಲಿ. ಹಾಂಗೆ ಅತ್ತೆ ಇತ್ತೆ (ಪರಸ್ಪರ) ಸನ್ತೋಷ ಪಡುಸುತ್ತಾ ಸಹಾಯಮಾಡುತ್ತಾ ತುಂಬಾ ಒಳ್ಳೆಯ ಶ್ರೇಯಸ್ಸಿನ ತೆಕ್ಕೊಳ್ಳಿ.
3.12 ಒಳ್ಳೆ ಯಾಗ ಪೂಜೆ ಧಾರ್ಮಿಕವಾದ ಲೋಕಕ್ಕೆ ಮಾಡುವ ಕೆಲಸಂಗಳಿಂದ ಸನ್ತೋಷ ಪಟ್ಟ ದೇವರ್ಕ್ಕೊ ನಿಂಗೊಗೆ ತುಂಬಾ ಸಂಪತ್ತು ಕೊಡುತ್ತವು. ಅವು ಕೊಟ್ಟ ಸಂಪತ್ತಿನ ಎಲ್ಲಾರಿಂಗುದೆ ಹಂಚಿ ತಿನ್ನೆಕ್ಕು (ಮರಂಗೊಕ್ಕೆ, ಜೀವಿಗೊಕ್ಕೆ, ಪಾಪದವಕ್ಕೆ, ಹೇಳಿ ). ಹಾಂಗೆ ಹಂಚದ್ದೆ ಆರು ಅನುಭವಿಸುತ್ತನೋ ಅವ ಶತ ಕಳ್ಳನೇ ಆವುತ್ತ.
3.13 ಅರ್ಹತೆ ಇಪ್ಪವಕ್ಕೆ ಕೊಟ್ಟಮತ್ತೆ (ಯಾಗ, ಪೂಜೆ, ಪುನಸ್ಕಾರ, ಭಿಕ್ಷೆ, ದಾನ, ಸಾಮೂಹಿಕ ಹಿತಕಾರ್ಯಂಗೊ ಹೇಳಿ ಹಲವಾರು ಯಜ್ಞಂಗೊ) ಬಾಕಿ ಇಪ್ಪದರ ಅನುಭವಿಸುವ ಒಳ್ಳೆಜನ ಎಲ್ಲಾ ಪಾಪಂಗಳಿಂದಲೂ ಬಚವಾವುತ್ತವು. ಅದಲ್ಲಾ ಬರೇ ತನಗೆ ಮಾಂತ್ರ ಹೇಳಿ ಆರು ಊಟ ಬೇಯಿಸುತ್ತವೋ ಅವು ಪಾಪಿಕಳಾಗಿ ಪಾಪವನ್ನೇ ತಿನ್ನುತ್ತವು.
3.14 ಅಶನಂದಲಾಗಿ ಜೀವಿಗೊ ಉತ್ಪತ್ತಿಯಾವುತ್ತವು. ಮಳೆನ್ದಲಾಗಿ ಅಶನ ಉತ್ಪತ್ತಿಯಾವುತ್ತು. ಸತ್ಕರ್ಮಂಗೊ ಮಾಡುವದರಿಂದಲಾಗಿ ಮಳೆ ಬತ್ತು. ಕೆಲಸಂಗಳಿಂದ ಯಾಗ, ದೇವಕಾರ್ಯ ಇತ್ಯಾದಿ ಒಳ್ಳೆ ಸಂಗತಿಗಳ ಮಾಡುಲಾವುತ್ತು. ಕೆಲಸ ಹೇಳುದು ತಿಳುವಳಿಕೆಯಿಂದಲಾಗಿ ಉಂಟಪ್ಪದು. ತಿಳುವಳಿಕೆ ದೇವರಿಂದ ಉದ್ಭವ ಅಪ್ಪದು. ಈ ದೇವರನ್ನು ಯಜ್ಞಾದಿಗಳಿಂದ ತಿಳುವಲಕ್ಕು) (ಹಾಂಗೆಲ್ಲಾ ಸಂಗತಿ ಆದಕಾರಣ ಸತ್ಕರ್ಮಂಗಳಿಂದಲಾಗಿ ದೇವರನ್ನು ಗೊಂತು ಮಾಡಿ ದೇವರತ್ತರಂಗೆ ಹೋಪಲಕ್ಕು ಹೇಳಿ ತಾತ್ಪರ್ಯ.)
3.15 ಏ ಅರ್ಜುನಾ, ಹೀಂಗೆ ತಿರುಗಿಗೊಂಡೇ ಇಪ್ಪನ್ಥಾ ಚಕ್ರವನ್ನು ನೋಡಿ ಕಲುತ್ತು ಅದರ ಆರು ಅನುಸರಣೆ ಮಾಡುತ್ತವಿಲ್ಲೆಯೋ ಜೀವಿತವೇ ಪಾಪವಾದಂಥಾ, ತನ್ನ ಕಣ್ಣು , ಕೆಮಿ ಬಾಯಿ, ನಾಲಗೆ, ಇವಕ್ಕೆ ಎಲ್ಲಾ ಬೇಕಾದ ಹಾಂಗೆ ಜೀವಿಸುವ ಅವ ಎಂತಗೇಳಿಲ್ಲದ್ದೆ ಜೀವಿಸುತ್ತಾ. (ಎಂತ ಪ್ರಯೋಜನ ಇಲ್ಲದ್ದೆ ಜೀವಿಸುತ್ತಾ).
3.16 ಆದರೆ ಏವ ಒಬ್ಬ ಮನುಷ್ಯ ತನ್ನನ್ನು ಪ್ರೀತಿಸುವವ ಆಗಿಯುದೆ ,ತನ್ನಲ್ಲಿಯೇ ತೃಪ್ತಿ ಪಡುವವ ಆಗಿಯುದೆ, ತನ್ನಲ್ಲಿಯೇ ಸನ್ತೋಷ ಇಪ್ಪವ ಆಗಿಯುದೇ ಇದ್ದನೋ ಅವಂಗೆ ಮಾಡೆಕ್ಕಾದ್ದದು ಹೇಳಿ ಎಂತದೂ ಇಲ್ಲೆ.
3.17 ಹಾಂಗಿಪ್ಪವಂಗೆ ಕೆಲಸ ಮಾಡಿದ್ದದರಿಂದಾಗಿ ಎಂತ ಪ್ರಯೋಜನವು ಇಲ್ಲೆ., ಕೆಲಸ  ಮಾಡದೇ ಇಪ್ಪದರಿಂದಲಾಗಿ ಎಂತ ತೊಂದರೆಯೂ ಇಲ್ಲೆ. ಅವಂಗೆ ಎಂತ ಸಂಗತಿಗಾಗಿಯುದೆ ಏವ ಜೀವಿಯನ್ನು ಆಶ್ರಯಿಸೇಕ್ಕಾದ್ದದಾಗಿಯೂ ಇಲ್ಲೆ.
(ನೀನು ಆ ಅವಸ್ಥೆಗೆ ಎತ್ತಿದ್ದಿಲ್ಲೆ ಆತಾ, ಹಾಂಗಾಗಿ)
3.18 ಹಾಂಗಾಗಿ ಕೆಲಸಂದಲಾಗಿ ಆಯೆಕ್ಕಾದ ಸಂಗತಿಲಿ ತಾತ್ಪರ್ಯ ಇಲ್ಲದ್ದೆ ಏವಾಗಳುದೆ ಮಾಡೆಕ್ಕಾದ ಕೆಲಸಂಗಳ ಬೇಕಾದರೀತಿಲಿಯೇ ಮಾಡುತ್ತಾ ಇದ್ದುಗೊ. ಎಂತಗೆ ಹೇಳಿರೆ ಆಯೆಕ್ಕಾದ ಸಂಗತಿಲಿ (ಫಲಲ್ಲಿ) ಮನಸ್ಸಿನ ಅಂಟಿಸಿಗೊಳ್ಳದ್ದೆ ಕೆಲಸವ ಮಾಡುವ ಮನುಷ್ಯ (ಮನಸ್ಸು ಶುದ್ದ ಅಪ್ಪದರಿಂದಲಾಗಿ) ಕಡೇಯಾಣದ್ದರ ಅಲ್ಲದ್ದರೆ ತುಂಬಾ ಉತ್ತಮವಾದದರ (ಮೋಕ್ಷವ, ದೇವರ) ಪಡೆತ್ತ.
3.19  ಜನಕರಾಜ ಮುಂತಾದ ಮದಲೆ ಇತ್ತಿದ್ದವು (ಫಲಲ್ಲಿ ಆಸಕ್ತಿ ಇಲ್ಲದ್ದೆ ಮಾಡಿದ) ಕೆಲಸಂದಲಾಗಿಯೇ ಸಿದ್ಧಿಯ (ದೇವರ ಬಗ್ಗೆ ಇಪ್ಪ ತಿಳುವಳಿಕೆಯ) ಪಡದ್ದವು. ಸಜ್ಜನರ ಸಂರಕ್ಷಣೆ ಆವುತ್ತು ಹೇಳುವ ಪ್ರಯೋಜನಕ್ಕಾಗಿ ಆದರುದೆ ನೀನು ಕೆಲಸ ಮಾಡುಲೇ ಬೇಕು.
3.20 ಶ್ರೇಷ್ಠನಾದವ ಎಂತೆಲ್ಲಾ ಸಂಗತಿಗೊ ಹೇಂಗೆಲ್ಲಾ ರೀತಿಲಿ ಜೀವಿತಲ್ಲಿ ಮಾಡುತ್ತನೋ ಅದರನ್ನೇ ನೋಡಿ ಇನ್ನಿತರ ಜನಂಗೊ ಆಚರಿಸುತ್ತವು.   ಅವ ಎಂತರ ಎಲ್ಲ (ಪುಸ್ತಕವೋ, ರೀತಿಗಳೋ, ಗುರು ವಾಕ್ಯವೋ) ಪ್ರಮಾಣವಾಗಿ ತೆಕ್ಕೊಳ್ಳುತ್ತನೋ ಇತರರುದೆ ಅದರನ್ನೇ ಪ್ರಮಾಣವಾಗಿ ತೆಕ್ಕೊಳ್ಳುತ್ತವು.
3.21 ಎನಗೆನ್ತ ಕೆಲಸ ಮಾಡೆಕ್ಕಾದ್ದದಾಗಿ ಇಲ್ಲೆ ಅರ್ಜುನಾ.... ಎಂತಾಳಿದರೆ ಮೂರು ಲೋಕಂಗಳಲ್ಲಿಯೂ ಆನು ಪಡೆಯದ್ದದಾಗಿಯೋ, ಪಡೇಕಾದ್ದದಾಗಿಯೋ ಎಂತದೂ ಇಲ್ಲೆ. ಆದರುದೇ ಆನು ಕೆಲಸ ಮಾಡುತ್ತಾ ಇರುತ್ತೆ.
3.22 ಎಂತಾಳಿದರೆ ಅರ್ಜುನಾ, ಒಂದರಿಯಾದರೂ ಆನು ಕೆಲಸಂಗಳ ಮಾಡದ್ದೆ ಇದ್ದರೆ, ಎಲ್ಲಾ ಮನುಷ್ಯರುದೆ ಎಲ್ಲಾ ಸಂಗತಿಲಿಯುದೇ ಎನ್ನ ರೀತಿಯನ್ನೇ ಜೀವಿತಲ್ಲಿ ಅನುಸರಿಸುತ್ತವು.
3.23 ಆನು ಕೆಲಸ ಮಾಡದ್ದೆ ಇದ್ದರೆ ಈ ಲೋಕಲ್ಲಿ ಇಪ್ಪ ಜನ ಎಲ್ಲಾ ಧರ್ಮ ಕಮ್ಮಿ ಅಪ್ಪದರಿಂದಾಗಿ ಹಾಳಾಗಿ ಹೋಕು. ಅವರವರ ಕೆಲಸ ಗೊಂತಿಲ್ಲದ್ದ ಜನ ಇಪ್ಪ ಲೋಕಲ್ಲಿ ಜನರ ಜೀವಿತವೇ ಕಷ್ಟಲ್ಲಿ ಆಗಿ (ಎನ್ನಂದಾಗಿಯೇ ಅವು ಹಾಳಕ್ಕು).
3.24 ಏ ಭಾರತ ದೇಶಲ್ಲಿ ಹುಟ್ಟಿದವನೆ, ಆತ್ಮನ ಬಗ್ಗೆ ತಿಳುವಳಿಕೆ ಇಲ್ಲದ್ದ ಸಾಧಾರಣ ಜನ  ಹೇಂಗೆ ಕೆಲಸದಿಂದಲಾಗಿ ಆಯೆಕ್ಕಾದ ಸಂಗತಿಲಿ (ಫಲಲ್ಲಿ) ತುಂಬಾ ತಾತ್ಪರ್ಯ ಪಟ್ಟುಗೊಂಡು ಕೆಲಸ ಮಾಡುತ್ತವೋ, ಅದೇತರ ದೇವರ ಬಗ್ಗೆ, ಆತ್ಮನ ಬಗ್ಗೆ ತಿಳುವಳಿಕೆ ಇಪ್ಪವ ಕೆಲಸದಿಂದ ಆಗೆಕ್ಕಾದ ಸಂಗತಿಗಳಲ್ಲಿ (ಫಲಲ್ಲಿ) ಎಂತದೇ ತಾತ್ಪರ್ಯ ಇಲ್ಲದ್ದೆ  ಜನಂಗಳ ಒಳ್ಳೆದಕ್ಕಾಗಿ ತಾನು ಮಾಡೆಕ್ಕಾದ ಕೆಲಸಂಗಳ ಮಾಡೆಕ್ಕದ.
3.25 ತಿಳುವಳಿಕೆ ಇಪ್ಪವ, ಕೆಲಸಲ್ಲಿಯು ಅದರ ಫಲಲ್ಲಿಯೂ ಅಂಟಿಗೊಂಡು ಫಲ ಸಿಕ್ಕೆಕ್ಕೇ ಹೇಳಿ ಆಗ್ರಹಿಸಿಗೊಂಡು ಇಪ್ಪನ್ಥಾ ತಿಳುವಳಿಕೆ ಇಲ್ಲದ್ದ ಜನರಲ್ಲಿ ಸಂಶಯವ ಉಂಟುಮಾಡಿಲಿಲ್ಲೆ. ಆದರೆ ತಾನುದೆ ಕೆಲಸಂಗಳ ಒಳ್ಳೆ ರೀತಿಲಿ ಮಾಡುತ್ತಾ ಅವರತ್ತರುದೆ ಎಲ್ಲಾ ಒಳ್ಳೆ ಕೆಲಸಂಗಳ (ಸತ್ಕರ್ಮಂಗಳ) ಮಾಡುಸುತ್ತಾ ಇರೆಕ್ಕು.
3.26 ಈ ಜಗತ್ತಿನ ಪ್ರಭಾವ (ಮಾಯೆಯ ಪ್ರಭಾವ) ಶರೀರದ ಕೈ, ಕಾಲು, ಕಣ್ಣು, ಕೆಮಿ, ಇತ್ಯಾದಿ ಇಂದ್ರಿಯಂಗಳತ್ತರೆ ಕೆಲಸಂಗಳ ಮಾಡುಸುತ್ತಾ ಇರುತ್ತು. ಆದರೆ ತಿಳುವಳಿಕೆ ಇಲ್ಲದ್ದವ (ಆನು, ಎನ್ನಶಕ್ತಿ, ಎನಗೆ ಹೇಳುವ) ಅಹಂಕಾರದಿಂದ ತಪ್ಪುತಿಳುವಳಿಕೆ ಇಪ್ಪವನಾಗಿ ಆನೆ ಎಲ್ಲಾ ಮಾಡುವದು ಹೇಳಿಯೇ ಗ್ರೇಶುತ್ತಾ.
3.27 ಆದರೆ ಏ ಗಟ್ಟಿಮುಟ್ಟಾದ ಕೈಗೊ ಇಪ್ಪವನೇ (ಅರ್ಜುನಾ), (ಜಗತ್ತಿಲ್ಲಿ ಇಪ್ಪನ್ಥಾ ಹಲವಾರು ಸಂಗತಿಗಳನ್ನು, ಆ ಸಂಗತಿಗಳ ಹೊಂದಿಗೊಂಡಿಪ್ಪದು ಬರೇ ಕೈ ಕಾಲುಗೊ ಮುಂತಾದ ಶರೀರ ಅಂಗಂಗೊ ಮಾಂತ್ರ, ಅಲ್ಲದ್ದೆ ಆತ್ಮ ಅಲ್ಲ ಹೇಳಿಯೂ) ಯತಾರ್ಥವಾದ ತಿಳುವಳಿಕೆ ಇಪ್ಪವ, ಕಾಂಬದು , ಕೇಳುದು, ರುಚಿನೋಡುದು, ಇತ್ಯಾದಿ ಸಂಗತಿಗಳಲ್ಲಿ ಬರೇ ಶರೀರಾಂಗ ಮಾಂತ್ರ ಸೇರುತ್ತು ಆತ್ಮ ಸೇರುತ್ತಿಲ್ಲೆ ಹೇಳಿ ಗಟ್ಟಿಯಾಗಿ ತಿಳಿವದರಿಂದಲಾಗಿ - ಆನೇ ಎಲ್ಲಾ ಮಾಡುತ್ತಾ ಇದ್ದೆ -  ಹೇಳುವ ವಿಚಾರ ಮಾಡುತ್ತನೇ ಇಲ್ಲೆ. 
3.28 ಈ ಪ್ರಪಂಚದ ಶಕ್ತಿಯಿಂದಲಾಗಿ (ಮಾಯೆಯ ಶಕ್ತಿಯಿಂದಲಾಗಿ) ಸಾಧಾರಣ ಜನ ಅವರ ಕೈಗಾಲುಗಳಲ್ಲಿಯೂ ಕೈಕಾಲುಗಳಿಂದ ಮಾಡುವಂಥಾ ಕೆಲಸಂಗಳಲ್ಲಿಯೂ ತುಂಬಾ ಅಭಿಮಾನ ಮಾಡಿಗೊಳ್ಳುತ್ತವು. ಎಂತದೂ ತಿಳುವಳಿಕೆ ಇಲ್ಲದ್ದ ಬುದ್ದಿ ಕಮ್ಮಿಯಾದ ಅವಕ್ಕೆ ಎಲ್ಲಾ ತಿಳುವಳಿಕೆಯೂ ಇಪ್ಪವು ಎಂತಾರೆಲ್ಲಾ ಹೇಳಿಯೊ ಕೇಳಿಯೋ ಎಲ್ಲಾ ಸಂಶಯವ ಮಾಡುಲಾಗ.
3.29 ಎಲ್ಲಾ ಕೆಲಸಂಗಳನ್ನೂ ಎನಗೆ ಸಮರ್ಪಣೆ ಮಾಡಿ ಪರಮಾತ್ಮನನ್ನೇ ಗ್ರೇಶುತ್ತಾ (ಆನು ದೇವರು ಹೇಳಿದಾಂಗೆ ಕೆಲಸವ ಮಾಡುತ್ತಾ ಇದ್ದೆ ಹೇಳುವ ಭಾವಲ್ಲಿ) ಎಂತದೂ ಆಗ್ರಹಿಸದ್ದೆ, ಎನ್ನದು ಹೇಳಿ ಎಂತರನ್ನು ಗ್ರೇಶದ್ದೆ ಹೆದರಿಕೆ ಬೇಜಾರ ಇಂಥಾದ್ದದೆಲ್ಲಾ ಬಿಟ್ಟಿಕ್ಕಿ ಒಳ್ಳೆದಕ್ಕಾಗಿ ಲಡಾಯಿ ಮಾಡೂ.
3.30 ಎವ ವನುಷ್ಯರೆಲ್ಲಾ ಎನ್ನ ಮಾತಿನ ಗವನಿಸುತ್ತಾ, ಎನ್ನಲ್ಲಿಯೋ ಎನ್ನ ಮಾತಿಲ್ಲಿಯೋ ಅಸೂಯೆ ಇಲ್ಲದ್ದೆ (ತಪ್ಪು ಕಲ್ಪನೆ ಮಾಡದ್ದೆ) ಆನೀ ಹೇಳಿದ ಎನ್ನ ಅಬಿಪ್ರಾಯವ ಏವಾಗಳುದೇ ಅನುಸರಿಸಿ ಜೀವಿಸುತ್ತವೋ ಅವು ಕೂಡಾ ತಪ್ಪಾದ ಕೆಲಸಂಗಳಿಂದಲೂ ಅದರಿಂದಲಾಗಿ ಅಪ್ಪ ಪಾಪಂಗಳಿಂದಲೂ ಬಚವಾವುತ್ತವು.
3.31 ಆದರೆ ಆರು ಎನ್ನ ಈ ಉಪದೇಶ ರೂಪಲ್ಲಿಪ್ಪ ಅಭಿಪ್ರಾಯವ ನಿನ್ದೆ ಮಾಡಿಗೊಡು ತಪ್ಪಾಗಿ ತಿಳುಕ್ಕೊಂಡು ಆಚರಿಸುತ್ತವಿಲ್ಲೆಯೋ (ಅನುಸರಿಸಿ ಜೀವಿಸುತ್ತವಿಲ್ಲೆಯೋ ಅವು) ಎಂತ ತಿಳುವಳಿಕೆಯೂ ಇಲ್ಲದ್ದ, ಒಳ್ಳೆ ಒಂದು ಕಲೆಯೇ (ಚೈತನ್ಯವೇ) ಇಲ್ಲದ್ದಂಥಾ ಅವರ, ಅಳುದೇ ಹೋದವು ಹೇಳಿ ತಿಳುಕ್ಕೊಂಬಲಕ್ಕು.
3.32 ಆತ್ಮನ ವಿಷಯಲ್ಲಿ ತಿಳುವಳಿಕೆ ಇಪ್ಪವನುದೆ ಕೂಡಿ ಸ್ವನ್ತ ರುಚಿಗನುಸಾರವಾಗಿಯೇ ಪ್ರವರ್ತಿಸುತ್ತಾ ಇರುತ್ತಾ. ಎಂತಾಳಿದರೆ ಒಂದು ಪ್ರಾಣಿಗೂ ತಾನು ನಡೆದು ಬನ್ದನ್ಥಾ ಜೀವಿತ ರೀತಿಂದ ಹೆರ ಬಪ್ಪದೂ ಹೇಳುದೂ ಅಷ್ಟು ಸುಲಾಭ ಅಲ್ಲ. ಹಾಂಗಿಪ್ಪಗ ಕೈಕಾಲುಗಳ ನಿಯಂತ್ರಿಸಿದ್ದರಿಂದಾಗಿ ಎಂತ ಸಿಕ್ಕುತ್ತು..........? (ಮಾಯೆಲಿ ಜೀವಿಸುದು ಅನಿವಾರ್ಯವೇ ಹೇಳಿ ಅರ್ಥ)
3.33 ಅದಾದು ಕೈಕಾಲುಗಳಾದ ಇಂದ್ರಿಯಂಗಳಲ್ಲಿಯೂ ಕಾಂಬದು ಕೇಳುದು ಇತ್ಯಾದಿ ಸಂಗತಿಗಳಲ್ಲಿಯೂ ಬೇಕಾದಹಾಂಗಾದರೆ ಸನ್ತೋಷವುದೆ ವಿಪರೀತವಾದರೆ ಬೇಜಾರುದೆ ಇರುತ್ತು. ಆದರುದೆ ಆ ಎರಡು ಸಂಗತಿಗಳ ಅಧೀನ ನಾವು ಅಪ್ಪಲಿಲ್ಲೆ. ಎಂತಾಳಿದರೆ ಅವು ಮೋಕ್ಷ ಸಿಕ್ಕೆಕ್ಕು ಹೇಳಿ ಗ್ರೇಶುವವನ ಶತ್ರುಗೊ.         
3.34 ಬೇರೆಯವು ಮಾಡೆಕ್ಕಾದ ಕೆಲಸ (ಹಾಂಗೆ ಬೇರೆ ಜನರು ದೇವರ ಹೊಡಾಡುವ ರೀತಿ, ಪೂಜೆ , ಪುನಸ್ಕಾರ, ದೇವರ ಗ್ರೇಶುವ ರೀತಿ , ಜೀವಿತ ರೀತಿ ಇದೆಲ್ಲಾ ಹೊಂದಿದ ಧರ್ಮ) ಲಾಯಕವಾಗಿ ಮಾಡುವದರಿಂದಲೂ ತಾನು ಮಾಡೆಕ್ಕಾದ ಕೆಲಸ ರಜ್ಜ ತಪ್ಪಾದರೂ ಅಡ್ಡಿಯಿಲ್ಲೆ , ಮಾಡುವದೇ ಒಳ್ಳೆಯದು (ಅಥವಾ ಶ್ರೇಷ್ಠವಾದದ್ದು.). ಸ್ವನ್ತ ಕರ್ತವ್ಯಂಗಳ ಮಾಡುತ್ತಾ ಸಾಯುದು ಕೂಡಾ ಶ್ರೇಯಸ್ಸನ್ನು ಕೊಡುತ್ತು. ಆದರೆ ಬೇರೆಯವಕ್ಕೆ ಹೇಳಿದ ಕೆಲಸ ಹೆದರಿಕೆಯ ಅಷ್ಟೇ ಮಾಡುತ್ತು. (ತನ್ನ ಪರಂಪರೆಯಲ್ಲಿ ಹೇಳಿದ , (ತನಗೆ ಸಂತೃಪ್ತಿ ಕೊಡುವಂಥಾ, ತನಗೆ ಮಾಡುಲೆ ಎಡಿವಂಥಾ ಆಚಾರ,ಕೆಲಸ, ಪೂಜೆ, ಪುನಸ್ಕಾರ ಇದೆಲ್ಲವೇ ಒಬ್ಬಂಗೆ ಮುಖ್ಯವಾದ್ದದು. ಹೆಚ್ಚಿಗೆ ಫಲ ಸಿಕ್ಕುಗು ಹೇಳಿಯೋ, ಬೇರೆಯವರು ಪ್ರೇರಿಸುತ್ತವು ಹೇಳಿಯೋ ಸತ್ಯವ ತಿಳಿಯದ್ದೇ ಇತರ ಜನರ ದೇವರ ಪೂಜಾ ರೀತಿಗಳ ಮಾಡುದು, ತನ್ನ ಧರ್ಮವ ಬಿಡುದು ಇದೆಲ್ಲಾ ಸರಿಯಾದ ಕಾರ್ಯ ಅಲ್ಲ.)
ಅರ್ಜುನ ಕೇಳಿದ
3.35  ಏ ವೃಷ್ಣಿ ಎಂಬವನ ಪೀಲಿಗೆಲಿ ಹುಟ್ಟಿದವನಾದ ಕೃಷ್ಣಾ, ಹಾಂಗಾದರೆ ಈ ಜೀವ (ಪಾಪ ಮಾಡುಲೆ) ಆಗ್ರಹಿಸದ್ದರುದೆ ಆರ ಪ್ರೇರಣೆಯಿದಲಾಗಿ ಬಲವಾಗಿ ಮಾಡುಸುತ್ತಾ ಇಪ್ಪವನ ಹಾಂಗೆ ತಪ್ಪಾದ ಕೆಲಸಂಗಳ ಮಾಡುತ್ತಾ........ (ಹೀಂಗೆ ಮಾಡೆಕ್ಕು ಹೇಳಿ ಗ್ರೇಶದ್ದರುದೆ ಕೂಡಾ ಆರು ಹೇಳಿ ಮಾಡುಸುವ ಹಾಂಗೆ ತಪ್ಪಾದ ಕೆಲಸಂಗಳ ಮಾಡುತ್ತಾ ಇದ್ದಾ....)
ಶ್ರೀ ದೇವರು ಹೇಳಿದವು
3.36 ಆ ಪ್ರೇರಣೆಯ ಮಾಡುವವ, ರಜೋಗುಣಂದ ಹುಟ್ಟುವವನಾದ ಬೇಕು ಬೇಕು ಎಂಬ ತೋರಾಣವೇ (ಕಾಮವೇ) ಆ ಬೇಕೂ ಎಂಬ ತೋರಾಣವೇ ದೊಡ್ಡ ಕೋಪವಾಗಿಯುದೆ ಬದಲುತ್ತಾ. ಹಾಂಗೆ ಬದಲಿದ ಕಾಮ ಒಂದರಿಯುದೆ ಸಾಕಾಗದ್ದವನುದೆ (ಸಂತೃಪ್ತಿ ಇಲ್ಲದ್ದವನುದೆ) ದೊಡ್ಡ ದೊಡ್ಡ ತಪ್ಪುಗಳ ಮಾಡುವವನುದೆ ಕೂಡಾ ಆಗಿ ತೀರುತ್ತು.  ಇವನನ್ನು (ಈ  ಕಾಮವನ್ನು) ಮೋಕ್ಷಕ್ಕೆ ಇಪ್ಪ ಪ್ರಯತ್ನಲ್ಲಿ ವೈರಿಯಾಗಿಯೇ ತಿಳುಕ್ಕೊಳ್ಳೆಕ್ಕು.
3.37 ಹೇಂಗೆ ದೀಪದ ನಾಳ ಹೊಗೆಯಿಂದ ಮುಚ್ಚಿದಾಂಗಾವುತ್ತೋ, ಕನ್ನಾಟಿ ಹೊಡಿ ದೂಳಿಂದಲಾಗಿ ಮುಚ್ಚಿದಾಂಗಾವುತ್ತೋ, ಗರ್ಭವ ಗರ್ಭದ ಸುತ್ತು ಇಪ್ಪ ಚೋಲಿ ಮುಚ್ಚಿಗೊಂಡಿರುತ್ತೋ ಹಾಂಗೆ ಇದು (ತಿಳುವಳಿಕೆ ಅಥವಾ ಆತ್ಮಜ್ಞಾನ) ಬೇಕು ಬೇಕು ಹೇಳುವ ಆಗ್ರಹದಿಂದ ವುಚ್ಚಿದಹಾಂಗಿದ್ದು.
3.38 ಏ ಕುನ್ತಿಯ ಮಗನೇ, ಆತ್ಮನ ಬಗ್ಗೆ ಇರೆಕ್ಕಾದ ತಿಳುವಳಿಕೆ, ಎಷ್ಟುತಿಂದರೂ ಹೊಟ್ಟೆತುಂಬದ್ದನ್ಥಾ ಕಿಚ್ಚಿನಹಾಂಗಿಪ್ಪ ಆಗ್ರಹದ ರೂವತಾಳಿಗೊಂಡಿಪ್ಪ, ತಿಳುವಳಿಕೆ ಇಪ್ಪವನ ನಿತ್ಯ ವೈರಿಯಿಂದಲಾಗಿ ಮುಚ್ಚಿ ಮಡಿಗಿದ ಹಾಂಗಿದ್ದು. (ಆವರಣೆ ಮಾಡಿದ ಹಾಂಗಿದ್ದು.).
3.39 ಅವ (ಆ ಕಾಮ) ಇಪ್ಪ ಜಾಗೆಗೊ ಏವದು ಹೇಳಿ ಹೇಳಿಕೊಡುತ್ತೆ, ಕಣ್ಣು, ಕೆಮಿ, ಬಾಯಿ, ನಾಲಗೆ, ಚರ್ಮ, ಇತ್ಯಾದಿ ಶರೀರಾಂಗಂಗೊ, ಮನಸ್ಸು, ಬುದ್ದಿ ಇದೆಲ್ಲಾ ಅವನ ಅದಿಷ್ಠಾನಂಗೊ. ಇದರಿಂದಾ ಎಲ್ಲಾ ತಿಳುವಳಿಕೆ ಅಥವಾ ಜ್ಞಾನವ ಮುಚ್ಚಿ ಶರೀರಲ್ಲಿಪ್ಪ ಜೀವವ ಹೆಡ್ಡದೂಮನಾಂಗೆ ಮಾಡುತ್ತ.
3.40  ಏ ಭಾರತಲ್ಲಿ ಹುಟ್ಟಿದವರಲ್ಲಿ ಶ್ರೇಷ್ಠನಾದ ಅರ್ಜುನಾ, ಹಾಂಗಾದ್ದದರಿಂದಾಗಿ ನೀನು ಸುರುವಿಂಗೆ ಕೈಕಾಲುಗಳಾದ ಇಂದ್ರಿಯಂಗಳನ್ನು ಅಡಗಿಸಿಕ್ಕಿ ಹೇಳಿಕೇಳಿ, ಒದಿ ಗೊಂತಪ್ಪನ್ಥಾ ತಿಳುವಳಿಕೆ (ಜ್ಞಾನ) ಮತ್ತೆ ಸ್ವನ್ಥಾ ಅನುಭವನ್ದ ಸಿಕ್ಕುವ ತಿಳುವಳಿಕೆ (ವಿಜ್ಞಾನ) ಗಳನ್ನು ಹಾಳುಮಾಡುವ ಪಾಪದ ರೂಪಲ್ಲಿಪ್ಪ ಈ ಕಾಮವನ್ನು (ಬೇಕು ಬೇಕು ಹೇಳುವ ವಿಚಾರವನ್ನು) ತೆಗದುಹಾಕು. (ಬಿಟ್ಟೇಬಿಡು).
3.41 ಶರೀರದ ಹಲವಾರು ಅಂಗಗಳಿಂದ, ಮತ್ತೆ ಅನುಭವಿಸುವ ಸಂಗತಿಗಳಿಂದ ಎಲ್ಲಾ ಇಂದ್ರಿಯಂಗೊ (ಕಣ್ಣು, ಕೆಮಿ, ನಾಲಗೆ, ಚೋಲಿ, ಮೂಗು) ಇವುಗೊ ದೊಡ್ಡವು ಅಥವಾ ಮೇಲೆ ಇಪ್ಪವು. ಈ ಇಂದ್ರಿಯಂಗಳಿಂದ ಮೇಲೆ ಮನಸ್ಸು, ಮನಸ್ಸಿಂದಲು ಮೇಗೆ ಬುದ್ದಿ, ಯಾರು ಬುದ್ದಿಗಂದಲೂ ಮೇಲಿದ್ದನೋ, ಶಕ್ತಿಯಾಗಿದ್ದನೋ, ಬುದ್ದಿಗೆ ಸಾಕ್ಷಿಯಾಗಿದ್ದನೋ ಅವನೇ ಆತ್ಮ ಅಥವ ಜೀವ.
3.42 ಏ ದೊಡ್ಡ ಕೈಗೊ ಇಪ್ಪವನಾದ ಅರ್ಜುನಾ, ಹೀಂಗೆ ಬುದ್ದಿಗಿಂತಲೂ ಮೇಲ್ಮಟ್ಟಲ್ಲಿಪ್ಪನ್ಥಾ ಆತ್ಮನ ಗೊಂತುಮಾಡಿ ತನ್ನ ತಾನೇ ಅಡಗಿಸಿ (ನಿಂದಲ್ಲಿ ನಿಲುಸಿಕ್ಕಿ) ಜಯಿಸುಲೆ ಕಷ್ಟ ಇಪ್ಪನ್ಥಾ ಕಾಮದ (ಅದು ಬೇಕು ಇದು ಬೇಕು ಹೇಳುವ ವಿಚಾರವಾದ) ರೂಪ ತಾಳಿದ ಶತ್ರುವನ್ನು ಕೊಂದೇ ಬಿಡು.
-ಹೀಂಗೆ ಒಳ್ಳೆದಾದಂಥಾ ದೇವರ ಮಾತುಗಳಾದ ಗುರುವಿನ ಹಂತರಂದ ಸಿಕ್ಕುವಂಥಾ ತಿಳುವಳಿಕೆಗಳಲ್ಲಿ ದೇವರ ಬಗ್ಗೆ ಇಪ್ಪ ವಿದ್ಯೆಲಿ, ದೇವರ ಒಟ್ಟಿಂಗೆ ಸೇರುಲಿಪ್ಪ ಶಾಸ್ತ್ರಲ್ಲಿ, ಶ್ರೀ ಕೃಷ್ಣ ಮತ್ತೆ ಅರ್ಜುನ ಇವರ ಪಂಚಾಯತಿಗೆಗಳಲ್ಲಿ ಕೆಲಸಮಾಡಿಗೊಂಡೇ ಸಮಾಧಾನವ ಹೊಂದುವದು (ಕರ್ಮಯೋಗ) ಹೇಳಿ ಹೆಸರಿಪ್ಪ ಮೂರನೇ ಅಧ್ಯಾಯ ಮುಗುದತ್ತು-
(ಶಕ ವರ್ಷ 1934-ರ ಕಾರ್ತಿಕ ಮಾಸ 9 ರಂದು ಮಧ್ಯಾನ್ನ ನಂತರ 4.55ಗಂಟೆಗೆ , ಸಂಸ್ಕೃತಲ್ಲಿ ಭಗವದ್ ಗೀತಾ ಹೇಳಿಪ್ಪ ದೇವರ ಮಾತಿಂಗೆ ಆಶಾಕಿರಣ ಕೈಲಂಕಜೆ ಎಂಬ ಹವೀಕ ಬ್ರಾಹ್ಮಣ ಬರದ ದಕ್ಷಿಣ ಹವಿಗನ್ನಡದ ತರ್ಜಮೆಯ ಮೂರನೆ ಅಧ್ಯಾಯವುದೆ ಇಲ್ಲಿಗೆ ಮುಗುದತ್ತು) 

No comments:

Post a Comment