Wednesday, August 14, 2013

ದೇವರ ಮಾತು ಒಂದನೇ ಅಧ್ಯಾಯ



(ಇದು ನಮ್ಮ ಆದಿ ಶಙ್ಕರಾಚಾರ್ಯರು ಸಂಸ್ಕೃತಲ್ಲಿ ಬರದ ಗೀತಾ ಭಾಷ್ಯವ ಓದಿ ತಿಳುದಿಕ್ಕಿ ಬರದ್ದದು)


1. ಆರ್ಜುನನ ಬೇಜಾರ ಹೇಳಿ ಹೆಸರಿಪ್ಪ ಒಂದನೆ ಅಧ್ಯಾಯ.
1.1 ಧರ್ಮದ ಜಾಗೆಯಾದ ಕುರುಕ್ಷೇತ್ರಲ್ಲಿ, ಲಡಾಯಿಮಾಡುಲೆ ನಿಂದುಗೊಂಡಿಪ್ಪ ಎನ್ನ ಮಕ್ಕಳುದೆ ಪಾಂಡುವಿನ ಮಕ್ಕಳುದೆ ಎಂತಮಾಡಿದವು ಸಂಜಯ?
1.2 ಸಂಜಯ ಹೇಳಿದಙ್
ಲಾಯಕಾಗಿ ನಿಲ್ಲುಸಿಗೊಂಡಿಪ್ಪ ಪಾಂಢವರ ಸೈನ್ಯವ ಕಂಡಪ್ಪಗ ದುರ್ಯೋಧನ, ಲಢಾಯಿ ಮಾಡುಲೆ ಅವಕ್ಕೆಲ್ಲಾ ಹೇಳಿಕೊಟ್ಟ ಆಚಾರ್ಯ ದ್ರೋಣನ ಹತ್ತರೆ ಕೇಳಿದ
1.3
ನೋಡಿ ಗುರುಗಳೆ, ನಿಂಗಳ ಶಿಷ್ಯನಾದ ದ್ರುಪದರಾಜನ ಬುದ್ದಿವಂತ ಮಗ ಈಗ ನಮ್ಮ ಶತ್ರು ಪಂಗಡವಾದ ಪಾಂಡವರ ದೊಡ್ಡ ಸೈನ್ಯವ ಎಷ್ಟು ಲಾಯಕಲ್ಲಿ ಸಾಲು ಸಾಲಾಗಿ ನಿಲುಸಿದ್ದ ಹೇಳಿ ನೋಡಿ.
1.4 ಇಲ್ಲಿ ಈಗ, ಲಡಾಯಿ ಮಾಡುವುದಲ್ಲಿ ಎಕ್ಸಪೆರ್ಟುಗಳಾದ, ಆರ್ಜುನನ ಹಾಂಗುದೆ ಭೀಮನ ಹಾಂಗುದೆ ಇಪ್ಪ, ವಿರಾಟರಾಜ, ದ್ರುಪದ ರಾಜ ಹೆಳಿ ತುಂಬಾ ಜನಂಗೊ ಬೈಂದವು (ಇವು ಆನು ಗ್ರೇಶಿದಾಂಗಲ್ಲ).
1.5 ದೃಷ್ಟಕೇತು,ಚೇಕಿತಾನ,ಕಾಶಿರಾಜ ಪುರುವಿನ ಗೆದ್ದವ, ಕುಂನ್ತಿ ಭೋಜ, ಶೈಬ್ಯ ಇವು ಎಲ್ಲಾರುದೆ ಮನುಷ್ಯರಲ್ಲಿ ಗಟ್ಟಿ ಇಪ್ಪವು.
1.6 ಯುದ್ದದ ವೀರ ಯುಧಾಮನ್ಯು, ಉತ್ತಮೌಜನುದೆ ಲಡಾಯಿಲಿ ಎನು ಕಮ್ಮಿಯಲ್ಲ. ಸುಭದ್ರೆಯ ಮಗ, ದ್ರೌಪದನ ಮಗನ ಮಕ್ಕೊ ಇವು ಒಬ್ಬೊಬ್ಬನುದೆ ಮಹಾರಥಿಗೊ.
1.7 ನಮ್ಮಲ್ಲಿ ಆರೆಲ್ಲಾ ಪ್ರಧಾನಿಗಳಾಗಿ ಸೈನ್ಯವ ನಡೆಶುಲಿದ್ದವೋ  ನಿಂಗೊಗೆ ಗೊಂತಪ್ಪಲೆ ಬೇಕಾಗಿ ಆನು ಆವರ ಹೆಸರು ಹೇಳುತ್ತೆ
1.8  ಒಬ್ಬ ನಿಂಗಳೆ ಮತ್ತೆ ಭೀಷ್ಮ, ಮತ್ತೆ ಕರ್ಣ, ಮತ್ತೆ ಯುದ್ದಲ್ಲಿ ಜಯಿಸುವ ಕೃಪ, ಆಶ್ವತ್ಥಾಮಾ, ವಿಕರ್ಣ, ಸೋಮದತ್ತನ ಮಗನಾದ ಭೂರಿಶ್ರವಸ್ಸು, ಜಯದ್ರಥ
1.9 ಮತ್ತೆ ಎನಗೆ ಹೇಳಿ ಜೀವಬಿಡುಲುದೇ ತಯಾರಾಗಿ ಇಪ್ಪ ತುಂಬ ಸೈನಿಕರು ಆರಸರು ಇದ್ದವು ಆವು ಎಲ್ಲ ತರ ತರದ ಬಿಲ್ಲು ಬಾಣ , ಕತ್ತಿ ಇತ್ಯಾದಿ ಆಯುಧ ಇಪ್ಪವುದೆ ಮತ್ತೆ ಜಗಳ ಮಾಡುದರಲ್ಲಿ ಉಶಾರಿಯುದೆ.
1.10 ಭೀಷ್ಮ ಮುಂದೆ ಇಪ್ಪ ನಮ್ಮ ಸೈನ್ಯ ದೊಡ್ಡಮಾದರುದೆ ಯುದ್ದಕ್ಕೆ ಸಾಲದೋ ಹೇಳಿ. ಭೀಮ ಮುಂದೆ ಇಪ್ಪ ಆವರ ಸೈನ್ಯ ಯುದ್ದಮಾಡುಲೆ ಸಾಕಪ್ಪಷ್ಟಿದ್ದು ಹೆಳಿಯು ತೋರುತ್ತಪ್ಪ.
1.11 ನಿಂಗೊ ಎಲ್ಲಾವರುದೆ ಎಲ್ಲಾ ಹೊಡೆಗಳಲ್ಲಿಯೂ ಸರಿಯಾಗಿ ಬೇಕದ ಹಾಂಗೆ ನಿಂದುಗೊಂಡು ಭೀಷ್ಮರನ್ನೆ ರಕ್ಷೆ ಮಾಡೆಕ್ಕದ.
1.12  ಆ ದುರ್ಯೋಧನಂಗೆ ಸನ್ತೋಷ ಮಾಡಿಗೊಂಡು ಕುರುಜನ ರಲ್ಲಿ ಒರುಷ ಆದವನು, ಆಜ್ಜನು ಆದ ಭೀಷ್ಮ ಸಿಂಹದ ಬೊಬ್ಬೆಯಾಂಗಿಪ್ಪ ಶಬ್ವವಿಪ್ಪ ಶಂಖ  ದೊಡ್ಡಕ್ಕೆ ಉರುಗಿಯೆ ಬಿಟ್ಟ
1.13 ಆಂಬಗ ಆದರ ಒಟ್ಟಿಂಗೊಟ್ಟಿಂಗೆ ಬೇರೆ ಶಂಖ, ಚೆಂಡೆ, ಜಾಕಟೆ , ಕೊಳಲು ಇತ್ಯಾದಿ ಹಲವಾರು ವಾದ್ಯಂಗೊ ಆವಕ್ಕವಕ್ಕೆ ಬಾಯಿಗೆ ಬಂದಾಂಗೆ ಉರುಗಿ ಒಟ್ಟಾರೆ ಭಯಂಕರ ಬೊಬ್ಬೆ ಆತದು.
1.14 ಅಂಬಗಾತು, ಬೆಳಿ ಕುದುರೆಗಳ ಕಟ್ಟಿದ ಒಳ್ಳ ಗಾಡಿಲಿ ನಿಂದುಗೊಂಡು ಮಾಧವನುದೆ ಪಾಂಡವನುದೆ ದಿವ್ಯವಾದ ಶಂಖಂಗ್ಗಳ ಉರುಗಿದವು.
1.15 ಶ್ರೀ ಕೃಷ್ಣ ಪಾಂಚಜನ್ಯ ಹೇಳುವ ಶಂಕ ಉರುಗಿದ, ಆರ್ಜುನ, ದೆವರುಗೊ ಕೊಟ್ಟದು ಹೇಳುವ ಶಂಖ ಉರುಗಿದ, ಭೀಮ ಪೌಣ್ಡ್ರ ,
1.16. ಕುಂತಿಯ ಮಗನಾದ , ಯುಧಿಷ್ಟಿರ (ತನ್ನ ದರ್ಮ್ಮ ಯುದ್ಧಲ್ಲಿ ಸ್ಥಿರವಾದವ) ಆನನ್ತ ವಿಜಯ ( ಏವಾಗಂಗುದೆ ನೆಲೆ ನಿಂಬ) ಹೇಳುವ ಹೆಸರಿಪ್ಪ ಶಂಖವುದೆ, ನಕುಲ – ಸುಘೋಷ – (ಒಳ್ಳೆ ಶಬ್ದ ಇಪ್ಪದು), ಸಹದೇವ – ಮಣಿಪುಷ್ಪ ಹೇಳುವ ಶಂಖವುದೆ ಉರುಗಿದವು.
1.17 ತುಂಬಾ ಒಳ್ಳೆದಾದಾ ಬಿಲ್ಲು ಇಪ್ಪ ಕಾಶಿರಾಜ, ದೊಡ್ಡ ಗಾಡಿ ಇಪ್ಪ ಶಿಖಂಡಿ, ದೃಷ್ಟದ್ಯುಮ್ನ ,ವಿರಾಟ, ಒಂದರಿಯುದೇ ಸೋಲದ್ದ ಸಾತ್ಯಕಿ,ದ್ರುಪದ, ದ್ರುಪದನ ಮಗ, ದೊಡ್ಡ ಕೈಗೊ ಇಪ್ಪವನಾದ ಸುಭದ್ರೆಯ ಮಗ ಅಬಿಮನ್ಯು, ಇವು ಎಲ್ಲೋರುದೆ ಶಂಖಂಗಳ ಉರುಗಿದವು.
1.18 ಎಲ್ಲಾ ದಿಕ್ಕುಗಳನ್ನು ತುಂಬಿದ ಆ ಬೊಬ್ಬೆ ಆಕಾಶದಲ್ಲಿಯುದೆ ಭೂಮಿಲಿಯುದೆ ಪ್ರತಿಧ್ವನಿಯಾಗಿ ಧೃತರಾಷ್ಟ್ರನ ಮಕ್ಕಳ ಪಂಗಡದವರ ಎದೆಗಳನ್ನು ಸಿಗುದೇ ಬಿಟ್ಟತ್ತು.
1.19 ಏ ಧೃತರಾಷ್ಚ್ರ ರಾಜಾ,  ಅದರ ನಂತರ ಆಯುಧ ಪ್ರಯೋಗಮಾಡುಲಿಪ್ಪ ಸಮಯ ಬಂದಪ್ಪಗ, ಅಲ್ಲಿ ನಿಂದುಗೊಂಡಿತ್ತಿದ್ದ ಧೃತರಾಷ್ಟ್ರನ ಮಕ್ಕಳ ಪಂಗಡವ ನೋಡಿ ಧ್ವಜದಲ್ಲಿ ಮಂಗ ಇಪ್ಪ ಅರ್ಜುನ ಅವನ ಬಿಲ್ಲು ಎತ್ತಿ ಹಿಡುಕ್ಕೊಣ್ಜು ಶ್ರೀ ಕೃಷ್ಣನತ್ತರೆ ಹೀಂಗೆ ಹೇಳಿದ.
ಅರ್ಜುನ ಹೇಳಿದ
1.20  ಕೃಷ್ಣಾ, ಎನ್ನ ಗಾಡಿಯ ಒಂದರಿ ಎರಡು ಪಂಗಡದ ಎಡೆಲಿ ನಿಲುಸುತ್ತೆಯ............
1.21 ಅಲ್ಲಿ ನಿಂದು ನೋಡಿದರೆ ಆನು ಆರತ್ತರೆಲ್ಲಾ ಯುದ್ದ ಮಾಡೆಕ್ಕಾವುತ್ತೀಗ ಹೇಳಿ ಸರಿಯಾಗಿ ಗೊಂತಕ್ಕು ಎನ್ನೆಟ್ಟಿಂಗೆ ಆರೆಲ್ಲಾ ಇದ್ದವು ಹೇಳಿಯು ಗೊಂತಕ್ಕದ.
1.22 ದುರ್ಬುದ್ಧಿಯಿಪ್ಪ ಧೃತರಾಷ್ಚ್ರನ ಮಗ ದುರ್ಯೋಧನ ಮಾಡುವ ಈ ಲಡಾಯಿಲಿ ಅವಂಗೆ ಮೆಚ್ಚುವಾಂಗೆ ಜಗಳ ಮಾಡುಲೆ ಬಂದವು ಆರೆಲ್ಲಾ ಹೇಳಿ ಒಂದರಿ ನೋಡಿಗೊಳ್ತ್ತೆ.
ಸಂಜಯ ಹೇಳಿದ -
1.23,24,25 ಏ ದೃತರಾಷ್ಟ್ರ ರಾಜನೆ, ಒರಕ್ಕಿಂದ ಎದ್ದ ಅರ್ಜುನ ಅಷ್ಟು ಹೇಳಿಯಪ್ಪಗ, ಭೀಷ್ಮ, ದ್ರೋಣ ಇತ್ಯಾದಿ ಮಹಾರಥಂಗೊ ಇಪ್ಪ ಎರಡು ಪಂಗಡದವರ ನಡುಗೆ ಗಾಡಿಯ ನಿಲುಸಿಕ್ಕಿ, ಕೃಷ್ಣ , ಪಾರ್ಥ್ತ, ಇಗ ನೋಡು ಕೌರವಂಗಳ ಹೇಳಿ ಹೇಳಿದ.
1.26 ಅಂಬಗ ಅರ್ಜುನ ಅಲ್ಲಿ, ಎರಡು ಪಂಗಡಂಗಳಲ್ಲಿಯುದೆ ನಿಂದುಗೊಂಡಿಪ್ಪ,  ಅಪ್ಪಂದಿರನ್ನು,ಅಜ್ಜನ್ದಿರನ್ನು,ಮಾವನ್ದಿರನ್ನು,ಮಾಷ್ಚ್ರಕ್ಕಳನ್ನು,ಅಣ್ಣ ತಮ್ಮನ್ದಿರನ್ನು,ಮ್ಕಳನ್ನು,ಪುಳ್ಳ್ಯಕ್ಕಳನ್ನು,ದೋಸ್ತಿ ಇಪ್ಪವರನ್ನು,ಒಟ್ಟಿಂಗೆ ಶಾಲೆಗೆ ಹೋದವರನ್ನು,ಮಾವನವರುಗಳನ್ನು ಕಣ್ಡ. (ಎಲ್ಲಾ ಬಂದುಗಳ ಕಣ್ಟ ಹೇಳಿ ತಾತ್ಪರ್ಯ)
1.27 ಅಲ್ಲಿ ನಿಂದುಗೊಣ್ಡಿಪ್ಪ ಬೇಕಾದವರ ಎಲ್ಲಾ ನೋಡಿ ಆ ಅರ್ಜುನ, ಅವರ ಹತ್ತರೆ ಇಪ್ಪ ತುಂಬಾ ದಯೇಯಿನ್ದ ಬೇಜಾರು ಮಾಡಿಗೊಂಡು ಹೀಂಗೆ ಹೇಳಿದ.
ಅರ್ಜುನ ಹೇಳಿದ
1.28 ಕೃಷ್ಣಾ , ಲಡಾಯಿ ಮಾಡುಲೆ ಹೇಳಿ ಬಂದು ನಿಂದುಗೊಣ್ಡಿಪ್ಪ ಈ ಎನ್ನ ಬೇಕಾದವರ ಎಲ್ಲಾ ನೋಡುವಾಗ, ಎನಗೆ ಶರೀರವೇ ನಡುಗುತ್ತು, ಮೋರೆ ಎಲ್ಲಾ ಒಣಗುತ್ತು.
1.29 ಶರೀರಲ್ಲಿ ಬೆಗರುಲೆ ಸುರುವಾಯಿದು ಅದು ಮಾಂತ್ರ ಅಲ್ಲಾ, ರೋಮ ಎಲ್ಲಾ ಎದ್ದು ನಿಲ್ಲುತ್ತಾ ಇದ್ದು.
1.30 ಎನ್ನ ಬಿಲ್ಲು (ಗಾಣ್ಡೀವ) ಈಗ ಕೈಯ್ಯಿನ್ದ ಜಾರಿ ಬೀಳುಗು. ಚೋಲಿ ಎಲ್ಲಾ ಕಿಚ್ಚಿಲ್ಲಿ ಹೊತ್ತುವಾಂಗೆ ಆವುತ್ತಾ ಇದ್ದು. ಎನಗೆ ನಿಂಬಲೇ ಎಡಿತ್ತಿಲ್ಲೇಳಿ, ತಲೆ ಎಲ್ಲಾ ಸುತ್ತುತ್ತಾ ಇದ್ದು.
1.30 ಸರಿಯಲ್ಲದ್ದ ಶಕುನಂಗೊ ಒಂದೊಂದೇ ಆಗಿ ಕಾಣುತ್ತಾ ಇದ್ದೂ.
1.31 ನವಗೆ ಬೇಕಾದವರ ಎಲ್ಲ ಯುದ್ದಲ್ಲಿ ಕೊಂದಿಕ್ಕಿ ಎಂತ ಒಳ್ಳೆದುದೇ ಅಪ್ಪಲಿಲ್ಲೆ.
1.32 ಎನಗೆ ಗೆಲ್ಲುಲು ಬೇಡ, ಊರೂ ಬೇಡ, ಅದರಿಂದ ಇಪ್ಪ ಸುಖವುದೇ ಬೇಡ. ಅಲ್ಲ, ರಾಷ್ಷ್ರ ಎನ್ತಗಿಪ್ಪದೂಳಿ, ಈ ತುಂಬಾ ಇಪ್ಪ ಸಂಪತ್ತು ಸುಖ ಎನ್ತಗೇ ಹೇಳಿ ಆನು ಕೇಳುದು ಕೃಷ್ಣ.
1.33 ಆರಿಂಗೆಲ್ಲಾ ಬೇಕಾಗಿ ನಾವು ಈ ರಾಷ್ಟ್ರ, ಸಂಪತ್ತು, ಸುಖ ಎಲ್ಲ ಬೇಕು ಹೇಳಿ ಗ್ರೇಶಿದ್ದೋ ಅವು ಅದರೆಲ್ಲಾ ಬಿಟ್ಟು ಇಲ್ಲಿ ಲಡಾಯಿ ಮಾಡುಲೆ ಬೈಂದವು.
1.34 ಎಂಗಳ ಎಲ್ಲಾ ಕಲಿಶಿದವು, ಅಪ್ಪನ ಸ್ಥಾನಲ್ಲಿ ಇಪ್ಪವು, ಅಜ್ಜನ್ದಿರು, ಮಾವನ್ದಿರು, ಮಕ್ಕೊ, ಪುಳ್ಳ್ಯಕ್ಕೊ, ಬಾವನ್ದಿರು, ಅಳಿಯನ್ದಿರು,ಹಾಂಗೆ, ಬಾಕಿ ಬೇಕಾದವು ಎಲ್ಲಾ ಇದ್ದವಿಲ್ಲಿ.
1.35 ಎನ್ನ ಇವು ಸೇರಿ ಕೊಂದರು ಇವರ ಎಲ್ಲ ಕೊಲ್ಲುಲೆ ಆನಿಲ್ಲೆ. ಮೂರು ಲೋಕ ಕೊಡುತ್ತೆ ಹೇಳಿದರು ಎನಗೆ ಇವರ ಎಲ್ಲಾ ಕೊಲ್ಲುಲೆ ಎಡಿಯ ಮತ್ತಲ್ಲದೋ ಈ ಊರಿಂಗೆ ಬೇಕಾಗಿ ಆನು ಕೊಲ್ಲುದು.
1.36 ದೊಡ್ಡಪ್ಪ ಧೃತರಾಷ್ಚ್ರನ ಮಕ್ಕಳ ಎಲ್ಲಾ ಕೊಂದು ಎಂಗೊಗೆನ್ತ ಪುಣ್ಯ ಸಿಕ್ಕುಲಿದ್ದು..... ಅವು ತಪ್ಪು ಮಾಡಿದವಾದರುದೆ ಅವರ ಎಲ್ಲಾ ಕೊಂದರೆ ಎಂಗೊಗೆ ಪಾಪ ಬಕ್ಕು.
1.37 ಹಾಂಗಾದ ಕಾರಣ ಎಂಗಳ ಬೇಕಾದವಾದ, ದೊಡ್ಡಪ್ಪನ (ಧೃತರಾಷ್ಟ್ರನ) ಮಕ್ಕಳ ಕೊಲ್ಲುಲೆ ಎಂಗೊ ಇಲ್ಲೆ. ಸ್ವನ್ತ ಬಂದುಗಳ ಕೊನ್ದಿಕ್ಕಿ ಎಂಗೊಗೆ ಹೇಂಗೆ ಸನ್ತೋಷಲ್ಲಿ ಇಪ್ಪಲೆ ಎಡಿಗು , ಕೃಷ್ಣ.... (ನೀನೇ ಹೇಳು.)
1.38 ಹಣ, ಸಂಪತ್ತು, ರಾಷ್ಟ್ರ, ಇದರ ಎಲ್ಲ ಕಾರಣ ವಾಗಿ ಇವಕ್ಕೆ ಕುಲವನ್ನೇ ಇಲ್ಲದ್ದೆ ಮಾಡುವ ಈ ಯುದ್ದ ಸರಿಯಲ್ಲಾ ಹೇಳಿ ತೋರದ್ದರುದೆ, ಕುಲವ ಇಲ್ಲದ್ದೆ ಮಾಡುವ ಯುದ್ದ ತಪ್ಪು ಹೇಳಿ ಗೊಂತಿಪ್ಪ ಎಂಗೊ , ಈ ಪಾಪ ಕೆಲಸನ್ದ ಹೇಂಗಾದರೂ ಜಾರುಲಿಪ್ಪ ದಾರಿ ನೋಡದೇ ಇಪ್ಪದು ಹೇಂಗೆ.........
1.39    ಮನೆತನ ಇಲ್ಲದ್ದೇ ಆದರೆ ಅವು ಮಾಡುವ ಕೆಲಸಂಗೊ ಮನೆತನವ ಹೊಂದಿಗೊಣ್ಡಿಪ್ಪ ಎಲ್ಲವುದೆ ಇಲ್ಲದ್ದೇ ಆವುತ್ತಲ್ಲದಾ
ಮಾತ್ರ ಅಲ್ಲ ತಪ್ಪು , ಆಧರ್ಮ ಇದೆಲ್ಲಾ ಹೆಚ್ಚಕ್ಕುದೆ.
1.40 ಸತ್ಯ , ನೀತಿ, ಒಳ್ಳೆದು ಇದೆಲ್ಲಾ ಇಲ್ಲದೇ ಆದರೆ , ಹೆಮ್ಮಕ್ಕೊಗೆ ಸರಿಯಾದ ದಾರಿಲಿ ಜೀವಿಸುಲೆ ಕಷ್ಟ ಅಕ್ಕು. ಅವು ಬೇರೆ ಜನರ ಮದುವೆ ಮಾಡೇಕ್ಕಕು, ಅದರಿಂದ ನಮ್ಮ ಮನೆತನದ ರೀತಿಗೊ ಗೊಂತಿಲ್ಲದ್ದ ಅಲ್ಲದ್ದರೆ ಮಾಡುಲೆಡಿಯದ್ದ ಮಕ್ಕೊ ಹುಟ್ಟುಗು.
1.41 ಅವು ನಾವು ಮಾಡಿಗೊಣ್ಡು ಬಪ್ಪ ಕಾರ್ಯ ಕರ್ಮಂಗ ಎಲ್ಲಾ ಬಾಡದ್ದೇ ಇಕ್ಕು. ಅಂಬಗ ತಿಥಿ, ದೇವಕಾರ್ಯ , ಇತ್ಯಾದಿಗೊ ಎಲ್ಲಾ ಬಿಟ್ಟು ಹೋಗಿ, ಮದಲೇ ತೀರಿ ಹೋದವಕ್ಕೆಲ್ಲಾ ಕಷ್ಟ ಆಗಿ ತೀರುಗು. ಅವು ನರಕಕ್ಕೆ ಬೀಳುಗು.
1.42 ಬೇರೇ ಬೇರೇ ಜಾತಿಯವು ಮದುವೆ ಆದಾಗ ಅವಕ್ಕಪ್ಪ ಮಕ್ಕೊಗೆ ಏವ ಜಾತಿದುದೆ ಮಾಡಿಗೊಣ್ಡು ಬನ್ದನ್ತಾ ಕೆಲಸಂಗೊ ಧರ್ಮಕಾರ್ಯ ಇದೆಲ್ಲಾ ತಪ್ಪಿ ಹೋವುತ್ತು. ಅದರಿಂದ ಲೋಕಲ್ಲಿಯೇ ದೊಡ್ಡ ತೊಂದರಗೊ ಮೂಡಿ ಬತ್ತು.
1.43 ಲೋಕಲ್ಲಿ ಒಂದೊದು ಕುಲ , ಮನೆತನ ಮಾಡಿ ಬಂದ ಕೆಲಸ ಸರಿಯಾಗಿ ಮಾಡುಲೆ ಜನ ಇಲ್ಲದ್ದ ಕಾಲ, ಜನರ ಜೀವಿತ ಕಷ್ಟವಾಗಿ ಬಿಡುತ್ತು ಹೇಳಿ ಆನು ಹೇಳುದು ಕೇಳಿದ್ದೆ.
1.44 ರಾಷ್ಟ್ರವ ಕೈವಶ ಮಾಡುವ ಯೋಚನೆಲಿ, ಎಷ್ಟು ತಪ್ಪು ಮಾಡುಲೆ ಹೊರಟಿದ್ದೆಯೊ ಎಂಗೊ ಹೇಳಿ ಈಗ ತೋರುತ್ತು. ಸ್ವನ್ತ ಜನರನ್ನೆ ಕೊಲ್ಲುಲೆ ಹೆರಟದಲ್ಲದೋಳಿ.
1.45 ಆಯುಧಂಗೊ ಹಿಡುಕ್ಕೊಣ್ಡಿಪ್ಪ ಧೃತರಾಷ್ಚ್ರನ ಮಕ್ಕೊ ಆಯುಧವೇ ಹಿಡಿಯದ್ದ, ಎದುರುಸದ್ದ ಎನ್ನ ಕೊನ್ದರುದೇ ಎನಗೆ ಸನ್ತೋಷವೇ.
ಸಂಜಯ ಹೇಳಿದ
1.46 ಅರ್ಜುನ ಹೀಂಗೆ ಕೂಗಿಗೊಂಡು ಬೇಜಾರವಾದ ಮನಸ್ಸು ಇಪ್ಪವ ಆಗಿ, ಬಾಣ ಬಿಲ್ಲು ಎಲ್ಲಾ ಕೆಳ ಹಾಕಿ ರಥಲ್ಲಿ ಅತ್ತೆ ಕೂದೇ ಬಿಟ್ಟ.
ಹೀಂಗೆ ಅರ್ಜುನನ ಬೇಜಾರು ಹೇಳುವ ಒಂದನೇ ಅದ್ಧ್ಯಾಯ ಮುಗುದತ್ತು.
 

No comments:

Post a Comment