Wednesday, September 11, 2013

ದೇವರ ಮಾತಿನ ಸಾರಾಂಶಂಗೊ (ಭಗವದ್ ಗೀತೆಯ ಸಾರ) - 1

ನಾವೆಲ್ಲಾ ಭಗವದ್ ಗೀತೆಯ ಸಂದೇಶ ಹೇಳಿ ಹೆಸರು ಹಾಕಿದ ಕಲೆಂಡರ್ ನೋಡಿಪ್ಪೋಂ. ಆತರ ಹಲವಾರು ಸಂದೇಶ ಭಗವದ್ ಗೀತೆಲಿ ಇದ್ದು. ಇಂತಾದ್ದು ಒಂದೇ ಹೇಳಿ ಅಲ್ಲ. ಅರ್ಜುನ ಕೃಷ್ಣನ ಮಾತಿಲ್ಲಿ ನಮ್ಮ ಜೀವಿತದ ಹಲವಾರು ವಿಷಯಂಗೊ ಕಾಂಬಲಕ್ಕು.
ಅದರಲ್ಲಿ ಒಂದನೇ ಅಧ್ಯಾಯ ಓದಿದ ಎನಗೆ ತೋರಿದ ಮುಖ್ಯ ಸಾರ ಆನಿಲ್ಲಿ ಬರವದು.
ನಮ್ಮ ಬೇಕಾದವು - ಮನೆಯವೋ, ಬನ್ದುಗಳೋ, ನಮ್ಮ ಚಡ್ಡೀ ದೋಸ್ತುಗಳೋ, ಪರಿಚಯ ಇಪ್ಪವೋ, ಒಂದೇ ಸಂಸ್ಥೆಲಿ ಕೆಲಸ ಮಾಡುವವೋ ಆಗಲಿ ಸಮಾಜಕ್ಕೆ ದೋಷಕರವಾದ ಅಧಾರ್ಮಿಕ ಕೆಲಸಂಗಳ ಮಾಡುತ್ತವು ಹೇಳಿದ್ದರೆ ನಾವು ಅವಕ್ಕೆ ಸಲಹೆ  ಕೊಡುಲಾಗ. ಇದು ಇಂದು ಭಾರತಲ್ಲಿ ಮುಖ್ಯವಾಗಿ ನಡವ ಒಂದು ವಿಷಯ. ತಪ್ಪು ಮಾಡುವವು ಮೋಸ ಮಾಡುವವು ನಮ್ಮ ಜಾತಿ, ಪಾರ್ಟಿ ಇತ್ಯಾದಿ ಬಂದಂಗಳಲ್ಲಿಪ್ಪವಾದರೆ ನಾವು ಅದರ ಕಂಡಿದಿಲ್ಲೆ ಕೇಳಿದ್ದಿಲ್ಲೆ ಹೇಳಿ ಭಾವಿಸುವದೇ ವಿಷಯ. ಈ ಸಂಗತಿಗೆ ದೇವರು ತುಂಬಾ ಖಂಡನೆ ಮಾಡಿದ್ದವು. ಹಾಂಗೆ ಇಪ್ಪವರೊಟ್ಟಿಂಗೆ ಒಂದರಿಯುದೇ ದೇವರ ಕೃಪೆ ಇರ ಹೇಳಿ ಭಗವದ್ ಗೀತೆಲಿ ದೇವರು ತಿಳಿಶುವದು. ಸಮಾಜಕ್ಕೆ ಮೋಸ ಅಪ್ಪಂಥಾ ಸಂಗತಿಗಳ ಮಾಡುವವರ ದೇವರು ಆತತಾಯಿನಃ ( ತುಂಬಾ ಪಾಪಿಷ್ಛರು) ಹೇಳಿ ದಿನುಗೋಳಿದ್ದವು. ಆದ್ದರಿಂದ ಇದು ನಾವು ಗೀತೆಯೆ ಒಂದನೇ ಸಾರವಾಗಿ ತೆಕ್ಕೊಳ್ಳೆಕ್ಕು. ಸಮಯ ಸನ್ದರ್ಭೋಚಿಕತವಾಗಿ ಯುಕ್ತಿಸಹವಾಗಿ ಈ ಸಂಗತಿಯ ಆಲೋಚನೆ ಮಾಡಿ ಪ್ರವರ್ತಿಸುದೇ ನವಗೆ ಶ್ರೇಯಸ್ಕರ. ಸಮಾಜಲ್ಲಿ ಅಪ್ಪ ತಪ್ಪುಗಳ ತಿದ್ದೆಕ್ಕಾದರೆ ನವಗದಕ್ಕಿಪ್ಪ ಶಕ್ತಿ ಸುರುವಿಂಗೆ ಬೇಕು. ಅದಕ್ಕೆ ನಾವೆಲ್ಲಾ ಅರ್ಜುನನ ಹಾಂಗೆ ಕಾಯ ಮನೋ ಬಲಂಗಳಿಂದ ತಪಸ್ಸಿನಿಂದ ಬಲವಂಥರಾಯೆಕ್ಕು. ಮಹಾಭಾರತ ಯುದ್ದದ ಮದಲೇ ಅರ್ಜುನ ಹಲವಾರು ವಿದ್ಯೆಗಳ ಕಲುತ್ತು, ಶಿವದೇವರ ತಪಸ್ಸಿಂದ ಒಲಿಸಿ ಪಾಶುಪತಾಸ್ತ್ರ ಪಡದ್ದದೆಲ್ಲಾ ಇಲ್ಲಿ ನವಗೆ ಅನುಕರಣೀಯ. ಜೀವಿತ್ಲಲಿ ಏವಗಾದರುದೇ ಧರ್ಮಾಧರ್ಮ ವಿವೇಚನೆ ನವಗುದೇ ಮಾಡೆಕ್ಕಕ್ಕು ಹೇಳಿ ನೆಂಪಿಲ್ಲಿ ಮಡಗಿ ಕಠಿನವಾದ ತಪಸ್ಸು ಮಾಡುವದೇ ನಮ್ಮ ಸುರುವಾಣ  ಕೆಲಸ.
ಶುಭವಾಗಲಿ

No comments:

Post a Comment