Wednesday, August 14, 2013

ದೇವರ ಮಾತು ಏಳನೇ ಅಧ್ಯಾಯ 7th Chapter of The Divine Message



ದೇವರ ಮಾತು ಏಳನೇ ಅಧ್ಯಾಯ
(ದೇವರು ಹೇಳಿದವು)
7.1 ಎನ್ನಲ್ಲಿಯೇ (ದೇವರಲ್ಲಿಯೇ) ಆಕೃಷ್ಟವಾದ ಮನಸ್ಸಿನ ಹೊಂದಿದವನಾಗಿ ಯೋಗಾಭ್ಯಾಸ ಮಾಡಿಗೊಂಡುದೆ, ಎನ್ನನ್ನೇ ಶರಣುಹೊಂದಿದವನಾಗಿ, ಎನೂ ಸಂಶಯಕ್ಕೆ ಎಡೆ ಇಲ್ಲದ್ದ ಹಾಂಗೆ ಇಡೀಯಾಗಿ ಹೇಂಗೆ ತಿಳಿವದು ಹೇಳಿ ನಿನಗೆ ಆನೀಗ ತಿಳಿಶುತ್ತೆ ಕೇಳು ಅರ್ಜುನಾ.
7.2 ಅನುಭವಿಸಿ ತಿಳಿವಲೆ ಅಪ್ಪನ್ಥಾ ದೇವರ ಬಗ್ಗಿಪ್ಪ ತಿಳುವಳಿಕೆಯ ನಿನಗೀಗ ಆನು ಏನೂ ವಿಷಯ ಬಾಕಿಯಾಗದ್ದ ಹಾಂಗೆ ತಿಳಿಶುತ್ತೆ. ಅದರ ತಿಳಿದರೆ ಮತ್ತೆ ಯಾವದೇ ವಿಷಯ ತಿಳಿವಲೆ ಹೇಳಿ ಉಳಿತ್ತಿಲ್ಲೆ .
7.3 ಸಾವಿರಕಟ್ಟುಲೆ ಮನುಷ್ಯರಲ್ಲಿ ಒಬ್ಬೊಬ್ಬ ಮಾಂತ್ರ ತನ್ನಬಗ್ಗುದೆ ದೇವರಬಗ್ಗುದೆ ಈ ಪ್ರಪಂಚದ ಬಗ್ಗುದೇ ಇಪ್ಪ ತಿಳುವಳಿಕೆಯಾದ ಆತ್ಮಜ್ಞಾನವ ಪಡವಲೆ ಯತ್ನಿಸುವದು. ಹಾಂಗೆ ಯತ್ನಿಸುವ ಸುಮಾರು ಜನರಲ್ಲಿ ಆರೋ ಒಬ್ಬ ಎನ್ನಬಗ್ಗೆ (ಆತ್ಮಜ್ಞಾನ) ಸರಿಯಾಗಿ ತಿಳಿತ್ತ.
7.4 ಎನ್ನ ಮಾಯಾ ಶಕ್ತಿ, ಮಣ್ಮು, ನೀರು, ಕಿಚ್ಚು, ಗಾಳಿ, ಕಾಲಿ ಜಾಗೆ (ಆಕಾಶ) , ಮನಸ್ಸು, ಬುದ್ದಿ, ಆನು ಆನು ಹೇಳುವ ವಿಚಾರ ಹಿಂಗೆ ಎಂಟಾಗಿ ಬಾಗ ಆಗಿಗೊಂಡಿಪ್ಪದು ಕ್ರಮ.
7.5 ಈ ಹೇಳಿದ ಪ್ರಕೃತಿ ಅಥವಾ ಮಾಯಾ ಶಕ್ತಿಗೆ ಅಪರ ಹೇಳಿ ಹೆಸರು. ಇದಲ್ಲದ್ದೆ ಇದರಿಂದ ಬೇರೆತರವಾದ ಒಂದು ಶಕ್ತಿಯುದೆ ಎನಗಿದ್ದು. ಅದಕ್ಕೆ ಪರ ಹೇಳಿ ಹೆಸರು. ಆ, ಪರಾ ಹೇಳಿಯು ಜೀವ ಹೇಳಿಯು ಹೆಸರಿಪ್ಪ ಶಕ್ತಿಯೇ ಈ ಬದಲಾವಣೆ ಅಪ್ಪ ಜಗತ್ತಿನ ತಾಂಗಿ ನಿಂಬದು. ಅದರನ್ನುದೇ ನೀನು ತಿಳುಕ್ಕೊ.
7.6 ಎಲ್ಲಾ ವಸ್ತುಗಳುದೆ (ಜೀವಇಪ್ಪದು ಮತ್ತೆ ಇಲ್ಲದ್ದದು ಇದೆರಡುದೇ) ಎನ್ನ ಈ ಎರಡು ತರ ಪ್ರಕೃತಿಗಳಿಂದಲೇ ಉತ್ಪನ್ನ ಅಪ್ಪದು.  ಹಾಂಗಾದ ಕಾರಣ ಎಲ್ಲಾ ಜಗತ್ತಿನ ವಸ್ತುಗಳುದೇ ಅಪ್ಪದಕ್ಕುದೇ ಇಲ್ಲದ್ದೇ ಅಪ್ಪದಕ್ಕುದೇ ಆನೇ ಕಾರಣ.
7.7 ಈ ಜಗತ್ತಿನ ಕಾರಣಕ್ಕೆ ಎನ್ನಿಂದ ಮೇಗೆ ಎಂತದುದೇ ಇಲ್ಲೆ ದನಂಜಯಾ.  ಈ ಲೋಕಲ್ಲಿಪ್ಪ ಎಲ್ಲಾ ಪದಾರ್ಥಂಗಳುದೇ ನೂಲಿಲ್ಲಿ ಮಣಿಗಳ ಸೇರುಸಿ ಮಾಲೆ ಮಾಡಿದ ಹಾಂಗೆ ಎನ್ನಲ್ಲಿ ಸೇರಿಗೊಂಡಿದ್ದು.
7.8 ಏ ಕುಂತಿಯ ಮಗನೇ, ನೀರಾಗಿಪ್ಪ ಮದಾರ್ಥಂಗಳಲ್ಲಿ ಅದರ ರುಚಿಯಾಗಿ ಆನೇ ಇಪ್ಪದು. ಚಂದ್ರ ಸೂರ್ಯ ಇವರಲ್ಲಿ ಬೆಣುಚ್ಚಿ ಆಗಿ ಆನೇ ಇಪ್ಪದು. ಎಲ್ಲಾ ವೇದಂಗಳಲ್ಲಿಯು ಓಂಕಾರವಾಗಿಪ್ಪದುದೇ ಆನೇ, ಆಕಾಶಲ್ಲಿ ಸಂಚರಿಸುವ ಶಬ್ದವುದೇ ಆನೇ, ಮನುಷ್ಯರಲ್ಲಿ ಅಧ್ವಾನ ಶೀಲತೆಯುದೇ ಆನೇ.
7.9 ಮಣ್ಣಿನ ಪರಿಮಳ ಗುಣ ಆನೇ, ಕಿಚ್ಚಿಲ್ಲಿಪ್ಪ ಬೆಶಿ ಮತ್ತೆ ಬೆಣುಚ್ಚಿ ಆನೇ, ಎಲ್ಲಾ ಪ್ರಾಣಿಗಳದ್ದುದೇ ಆಯುಸ್ಸುದೇ ಆನೇ, ತಪಸ್ಸು ಮಾಡುವವರಲ್ಲಿಪ್ಪ ತಪಶ್ಶಕ್ತಿಯುದೇ ಆನೇ.
7.10 ಎಲ್ಲಾ ಜೀವಜಾಲಂಗಳದ್ದುದೇ ಶಾಶ್ವತಮಾದ ಬಿತ್ತು ಆನೇ ಹೇಳಿ ನೀನು ತಿಳುಕ್ಕೊ ಪಾರ್ಥಾ, ಬುದ್ದಿ ಇಪ್ಪವರ ಬುದ್ದಿಯುದೇ ಆನೇ, ತೇಜಸ್ವಿಯಾಗಿಪ್ಪವರ ತೇಜಸ್ಸುದೇ ಆನೇ ಆಗಿದ್ದೆ.
7.11 ಬಲವಂತರಲ್ಲಿಪ್ಪ ಕಾಮ, ರಾಗ ಇವು ಬಿಟ್ಟಿಪ್ಪ ಬಲವುದೇ ಆನೇ. ಹಾಂಗೇ ಪ್ರಾಣಿಗಳಲ್ಲಿ ಧರ್ಮಕ್ಕೆ ಹೊಂದಿದಂಥಾ ಕಾಮವುದೇ ಆನೇ ಆಗಿದ್ದೆ.
7.12 ಸಾತ್ವಿಕ, ರಾಜಸಿಕ, ಮತ್ತೆ ತಾಮಸಿಕ ಹೀಂಗೆ ಮೂರು ತರ ಗುಣಂಗಳಿಂದ ಅಪ್ಪಂಥಾ ಸಕಲ ವಸ್ತುಗಳುದೇ ಎನ್ನಿಂದಲೇ ಉತ್ಪನ್ನ ಆವುತ್ತು ಹೇಳಿ ತಿಳಿಯೆಕ್ಕು. ಆದರೆ ಆನು ಅದರಲ್ಲಿ ಇಲ್ಲೆ ಅದೆಲ್ಲಾ ಎನ್ನಲ್ಲಿ ಇಪ್ಪದು.
7.13  ಹೀಂಗೆ ಮೂರು ರೀತಿಲಿಪ್ಪ ಗುಣಂಗಳತ್ತ್ರಂದ ಬಪ್ಪಂಥಾ ಹಲವಾರು ವಿಚಾರಂಗಳಿಂದಲಾಗಿಯೇ  ಸತ್ಯ ಮರೆದವರಾಂಗಿಪ್ಪ ಜನಂಗೊ ಇದರಿಂದ ಎಲ್ಲಾ ಬಿಟ್ಟು ಬೇರೆಯೇ ಆಗಿಪ್ಪ ಎನ್ನ ತಿಳಿತ್ತವಿಲ್ಲೆ.
7.14 ಎನ್ನದೇ ಭಾಗವಾದ ಈ ಲೋಕಸಂಗತಿಗಳಿಂದ ಹೆರಬಪ್ಪಲೆ ಅಷ್ಟು ಸುಲಾಬ ಅಲ್ಲ. (ಮಾಯೆ ದೇವರದ್ದೆ ಒಂದು ಶ್ಕತಿ ಅದರಿಂದ ಹೆರಬಪ್ಪಲೆ ಕಷ್ಟ) ಆದರೂ ಆರು ಎನ್ನನ್ನೇ ಭಕ್ತಿಯಿಂದ ಶರಣ ಹೊಂದುತ್ತವೋ ಆವು ಈ ಲೋಕಮಾಯೆಯಿಂದ ಬಚವಾವುತ್ತವು.
7.15 ಸಮೂಹಕ್ಕೆ ಹಾಳುಮಾಡುವಂಥಾ ಜೀವಿತರೀತಿ ಇಪ್ಪ ಕೆಳಮಟ್ಟಲ್ಲಿಪ್ಪ ಬುದ್ದಿಯಿಲ್ಲದ್ದ ಜನಂಗೊಕ್ಕೆ ಲೋಕವಿಚಾರ ಮಾಂತ್ರ ಇಪ್ಪದಿಂದಲಾಗಿ ಎನ್ನ ಪಡವಲಾವುತ್ತಿಲ್ಲೆ. ಅವು ಎನ್ನ ಶರಣ ಹೊಂದುತ್ತವಿಲ್ಲೆ.
7.16  ಸಮೂಹಲ್ಲಿ ನಾಲ್ಕು ತರದ ಸಜ್ಜನರು ಎನ್ನ ಆಶ್ರಯಿಸುತ್ತವು. ರೋಗ ಮುಂತಾದ ತೊಂದರೆಗಳಿಂದ ಕಷ್ಟಬಪ್ಪವು, ಲೋಕ, ದೇವರು ಇದರ ಹಿಂದಿಪ್ಪ ಗುಟ್ಟು ತಿಳಿವಲೆ ಜಿಜ್ಞಾಸೆ ಇಪ್ಪವರು, ಬೇರೆ ಬೇರೆ ತರದ ಸುಖಗಳ ಪಡವಲೆ ಆಗ್ರಹಿಸುವವರು ಮತ್ತೆ ಎಲ್ಲಾ ತಿಳುವಳಿಕೆಯು (ಆತ್ಮಜ್ಞಾನ ಇಪ್ಪವು) ಹೊಂದಿದವು ಹಿಂಗೆ ನಾಲ್ಕು ತರದವು ದೇವರ ಭಕ್ತರು.
7.17 ಹಾಂಗಿಪ್ಪ ನಾಕು ತರದ ಭಕ್ತರಲ್ಲಿ ಎನ್ನಲ್ಲಿಯೇ ಭಕ್ತಿ ಇಪ್ಪವನಾದ ತನ್ನನ್ನು ತಿಳಿದವನು (ಜ್ಞಾನಿ) ತುಂಬಾ ಶ್ರೇಷ್ಠ. ಎಂತಾಳಿದರೆ ಆ ಜ್ಞಾನಿಗೆ ಆನು ಹೇಳಿದರೆ ತುಂಬಾ ಪ್ರೀತಿ ಹಾಂಗೆ ಎನಗುದೆ ಅವಾ ಹೇಳಿದರೆ ಭಾರೀ ಪ್ರೀತಿ.
7.18 ಆ ನಾಕು ತರದ ಬಕ್ತರೆಲ್ಲರುದೇ ಒಳ್ಳೆ ಜೆನಂಗಳೇ ಸೈ. ಆದರೂ ಆತ್ಮನಬಗ್ಗೆ ತಿಳುದವನು (ಜ್ಞಾನಿ) ಆನೇ ಅಥವಾ ಎನ್ನಾಂಗೇ ಹೇಳಿ ಎನ್ನ ನಿಶ್ಟಯ. (ಜ್ಞಾನಿ ತನ್ನಿಂದ ಬೇರಲ್ಲ ಹೇಳಿ ದೇವರ ನಿಶ್ಟಯ). ಎಂತಾಳಿದರೆ ಅವ ಎನ್ನಲ್ಲಿಯೇ ಯಾವಾಗಳುದೇ ಮನಸ್ಸಿನ ಮಡುಗುತ್ತ ಹಾಂಗೇ ಎನ್ನನ್ನೇ ಮೇಲ್ಮಟ್ಟದ ನೆಲೆಗಿಪ್ಪ ದಾರಿಯಾಗಿ ಆಶ್ರಯಿಸಿಗೊಂಡಿದ್ದ.
7.19 ಹಲವಾರು ಜನ್ಮಂಗಳ ನಂತರ ತನ್ನಬಗ್ಗಿಪ್ಪ ತಿಳುವಳಿಕೆ (ಆತ್ಮಜ್ಞಾನ) ಬಂದ ಒಬ್ಬ ದೇವರ ಆಶ್ರಯಿಸುತ್ತಾ. ವಾಸುದೇವನೇ ಎನಗೆ ಎಲ್ಲವುದೇ ಹೇಳಿ ಜೀವಿಸುವ ಮಹಾತ್ಮನು ಸಮೂಹಲ್ಲಿ ತುಂಬವೇ ಕಮ್ಮಿ.
7.20 ಅವನವನಲ್ಲಿಪ್ಪ ಪ್ರಕೃತೀ ಶಕ್ತಿ, ಹೇಳಿ ಮಾಡುಸುವಹಾಂಗೆ  ಒಂದೊದಂದು ಆಗ್ರಹಗಳಿಂದ ಮನಸ್ಸು ತುಂಬಿದವರಾಗಿ ಆ ಆ ಸಂಗತಿಗಳ ಪಡವಲಿಪ್ಪ ಮಾರ್ಗಗಳಲ್ಲಿ ಸಹಾಯಮಾಡುವವರತ್ತರೆ ಶರಣಾಗತಿ ಹೊಂದುವವು ಸಾಧಾರಣ ಜನ. (ಅದು ದೇವರ್ಕ್ಕಳೇ ಆಗಿಪ್ಪಲೂ ಸಾಕು)
7.21 ಆರಿಂಗೆ ಎವ ವಿಷಯಲ್ಲಿ ಅಥವಾ ದೇವರ ಯಾವ ರೂಪದಲ್ಲಿ ಗಮನವಾಗಿ ಧ್ಯಾನಮಾಡುಲೆ ತೋರುತ್ತೋ ಅದಾದು ರೂಪಲ್ಲಿ ಅವಂಗೆ ಶ್ರದ್ದೆಯ ಆನು ಕೊಡುತ್ತೆ.
7.22 ಹಾಂಗೆ ಶ್ರದ್ಧೆಯಿಂದ ಪೂಜೆ ತಪಸ್ಸುಗಳ ಮಾಡಿ ಆ ದೇವರ ರೂಪದಿಂದ ಅವಂಗೆ ಬೇಕಾದ ಸಂಗತಿಗಳ ಸಿದ್ದಿ ಆವುತ್ತು. ಆ ದೇವತಾ ರೂಪಂಗಳ ಮುಖಾಂತರ ಸಿದ್ದಿಯ ಕೊಡುವದು ಆನೇ.
7.23 ಆದರೆ ಸಣ್ಣಬುದ್ದಿಯಿಪ್ವವಕ್ಕೆ ತೋರುವ ಸಂಗತಿಗಳ ಫಲ ಒಂದುದಿನ ಮುಗುದು ಹೋಪ ಹಾಂಗಿಪ್ಪದು. ಆ ದೇವ ರೂಪಂಗಳ ಹಿಂದೆ ಹೋಪವು ಅಲ್ಲಿಗೆತ್ತುತ್ತವು. ಎನ್ನ ಭಕ್ತಜನರು ಎನ್ನಲ್ಲಿಗೆ ಎತ್ತುತ್ತವು ಅಷ್ಟೇ ಅದರ ವ್ಯತ್ಯಾಸ.
7.24 ಏವಾಗಳೂ ಇಪ್ಪವನಾಗಿಯೂ ಎಲ್ಲಾದರಲ್ಲಿಯೂ ಮೇಲ್ಮಟ್ಟದವನಾಗಿಯು ಈ ಲೋಕದ ಸ್ವಭಾವವೇ ಇಲ್ಲದ್ದವನಾಗಿಯೂ ಇಪ್ಪ ಎನ್ನ ನಿಜವಾದಸತ್ಯವ ಗೊಂತಿಲ್ಲದ್ದ ಬುದ್ದಿಕಮ್ಮಿಯಾದವು ಲೋಕಲ್ಲಿ ಇಂಥಾ ರೂಪ ಹೇಳಿ ಇಲ್ಲದ್ದ ಎನ್ನ ಯಾವದಾದರೂ ರೂಪಲ್ಲಿ ಇಪ್ಪವನಾಗಿ ತಿಳಿತ್ತವು.
7.25 ಎನ್ನೋಟ್ಟಿಂಗೇ ಇಪ್ಪ ಮಾಯಾಶಕ್ತಿಯಿಂದ ಆನು ಸುತ್ತಿಗೊಂಡಿಪ್ಪದರಿಂದ ಎಲ್ಲರಿಗೂ ಎನ್ನ ಗೊಂತಾಗ. ಒಂದರಿಯೂ ಹುಟ್ಟದ್ದವನಾದ ಯಾವಾಗಳೂ ಬದಲದ್ದವನಾದ ಎನ್ನ ಹೀಂಗಿಪ್ಪ ಕಮ್ಮಿಬುದ್ದಿ ಇಪ್ಪವಕ್ಕೆ ತಿಳಿತ್ತಿಲ್ಲೆ.
7.30 ಇಲ್ಲಿ ಜೀವಿಸಿ ಕಳುದು ಹೋದ , ಈಗ ಜೀವಿಸುವ ಹಾಂಗೇ ಇನ್ನು ಜೀವಿಸುಲಿಪ್ಪ ಎಲ್ಲಾ ಜೀವಿಗಳನ್ನುದೇ ಎನಗೆ ಗೊಂತಿದ್ದು. ಆದರೆ ಎನ್ನ ಹಾಂಗೆ ಎಲ್ಲಾರಿಂಗುದೆ ಗೊಂತಿಲ್ಲೆ.
7.31 ಶರೀರವಹೊಂದಿಗೊಂಡು ಹುಟ್ಟುವಗಳೇ ಬೇಕು ಬೇಡಾ ಹೇಳಿಪ್ಪ ಎರಡುತರ ಶಕ್ತಿಗಳಿಂದ ಕಟ್ಟಿಹಾಕಿದವರಾಗಿ ಹುಟ್ಟುವ ಜನಂಗೊಕ್ಕೆ ಚಿಂತಾಶಕ್ತಿಯಿರುತ್ತಿಲ್ಲೆ.
7.32 ಸುಮಾರು ಪುಣ್ಯಕೆಲಸಂಗಳ ಎಲ್ಲಾ ಮಾಡಿ ಪಾಪ ವೆಲ್ಲಾ ಇಲ್ಲದ್ದೇ ಆದ ದೃಢವ್ರತಲ್ಲಿಪ್ಪವಕ್ಕೆ ಮಾಂತ್ರ ಎನ್ನ ಭಜಿಸುಲೆಡಿಗಷ್ಟೆ.
7.33 ವರ್ಷಆಗಿ ತೊಂಡ ತೊಂಡಿ ಆಗಿ ಸತ್ತುಹೋಪ ಜೀವನದಿಂದ ಬಚವಪ್ಪಲೆ ಬೇಕಾಗಿ ಎನ್ನ ಆಶ್ರಯಿಸಿ ಆರು ಶ್ರಮಿಸುತ್ತವೋ ಅವು ಆ ಮುಖ್ಯವಾದ ಬ್ರಹ್ಮನ ಬಗ್ಗೆ ತಿಳುವಳಿಕೆ ಬಪ್ಪಲಿಪ್ಪ ಸಾಧನೆಗಳ ತಿಳಿದು ಬ್ರಹ್ಮನಬಗ್ಗೆ ತಿಳಿತ್ತವು.
7.34 ಅಧಿಬೂತ, ಅಧಿದೈವ ಅಧಿಯಜ್ಞ ಇದರ ಒಟ್ಟಿಂಗಿಪ್ಪವನಾದ ಎನ್ನ ಗೊಂತಿಪ್ಪ ಜನಂಗೊ ಯಾವಾಗಳು ಎನ್ನ ಸರಿಯಾಗಿ ತಿಳಿವಕಾರಣ ಸಾವಗ ಕೂಡಾ ಎನ್ನ ಗ್ರೇಶುತ್ತವು.
ಹೀಂಗೆ  ಶ್ರೀಕೃಷ್ಣ ಅರ್ಜುನರ ಮಾತುಗಳಾದ ದೇವರೊಟ್ಟಿಂಗೆ ಸೇರುವ ಶಾಸ್ತ್ರಲ್ಲಿ ದೇವರಬಗ್ಗಿಪ್ಪ ತಿಳುವಳಿಕೆಲಿ, ಗುರುವಿನತ್ತರಂದ ಸಿಕ್ಕುವ ವಿದ್ಯೆಯಾದ ದೇವರ ಮಾತುಗಳಲ್ಲಿ ಅಪುರೂಪವಾದ ತಿಳುವಳಿಕೆ ಹೇಳಿ ಹೆಸರಿಪ್ಪ ಎಳನೇ ಅಧ್ಯಾಯ ಇಲ್ಲಿಗೆ ಮುಗುದತ್ತು.
(25.07.2013 5.23 ಹೊತ್ತೋಪಗ. ಕೋಯಂಬತ್ತೂರಿನತ್ತರಂಗೆ ಎತ್ತಿತ್ತು. ರಯಿಲಿಲ್ಲಿದ್ದೆ)

No comments:

Post a Comment