ದೇವರ ಮಾತು ಐದನೇ ಅಧ್ಯಾಯ
ಅರ್ಜುನ ಕೇಳಿದ
ಸನ್ಯಾಸಂ ಕರ್ಮಣಾಂ ಕೃಷ್ಣ ಪುನರ್ಯೋಗಂ ಚ ಶಂಸಸಿ ಯತ್ಷ್ರೇಯ ಏತಯೋರೇಕಂ
ತನ್ಮೇ ಬ್ರೂಹಿ ಸುನಿಶ್ಚಿತಂ 5.1
5.1 ಕೃಷ್ಣಾ, ಮಾಡುವ ಕೆಲಸಂಗಳ ಬಿಡೆಕ್ಕು ಹೇಳಿ ಸುರುವಿಂಗುದೆ ಮತ್ತೆ
ಕೆಲಸ ಮಾಡಿಗೊಂಡೇ ಜೀವಿಸುವ ಕರ್ಮಯೋಗವುದೆ ನೀನು ಲಾಯಕ ಹೇಳಿ ಹೇಳುತ್ತೆ. ಈ ಎರಡರಲ್ಲಿ ಏವದು
ಹೆಚ್ಚು ಶ್ರೇಷ್ಠವೋ ಆ ಒಂದರ ಎನಗೆ ಹೇಳಿಕೊಡು.
5.2 ಸನ್ಯಾಸವುದೆ ಕರ್ಮಯೋಗವುದೆ ಎರಡುದೆ ಮನುಷ್ಯಂಗೆ ಶ್ರೇಯಸ್ಸಿನ
(ಮೋಕ್ಷವ) ಕೊಡುಲೆ ತಕ್ಕದ್ದೇ, ಆದರೆ ಆ ಎರಡು ರೀತಿಗಳಲ್ಲಿ ಕೆಲಸಂಗಳ ಬಿಡುದರಿಂದಲುದೆ ಅದರ ಯೋಗರೀತಿಲಿ ಮಾಡಿಗೊಂಡು ಬಪ್ಪದೇ ಒಳ್ಳೆದು.
5.3 ಎಂತರಲ್ಲಿಯುದೆ ದ್ವೇಷಿಸದ್ದೆ ಎಂತದುದೇ ತನಗೆ ಪಡೇಕು ಹೇಳಿ
ಗ್ರೇಶದ್ದೆ ತನ್ನ ಕೆಲಸಂಗಳ ಮಾಡುವವ ಸನ್ಯಾಸಿಯಹಾಂಗೆ ಹೇಳಿ ತಿಳಿಯೆಕ್ಕು. ಎಂತಾಳಿದರೆ ಅವ
ಚುರುಕ್ಕಾಗಿ ಜೀವಿತದ ಕಟ್ಟಂಗಳಿಂದ ಬಿಡುಗಡೆಯಾವುತ್ತಾ.
5.4 ಸನ್ಯಾಸ ಮತ್ತೆ ಕರ್ಮಯೋಗ ಇದು ಎರಡುದೆ ಬೇರೆ ಬೇರೆ ಹೇಳಿ
ತಿಳುವಳಿಕೆ ಇಲ್ಲದ್ದ ಮಕ್ಕೊ ಹೇಳುತ್ತವು ಆದರೆ ತಿಳುವಳಿಕೆ ಇಪ್ಪವು ಹೇಳುತ್ತವಿಲ್ಲೆ. ಎರಡರಲ್ಲಿ
ಒಂದಾರುದೆ ಸರಿಯಾಗಿ ಮಾಡಿಗೊಂಡು ಬಂದರೆ ಎರಡುದೆ ಮಾಡಿದ ಗುಣ ಸಿಕ್ಕುತ್ತು.
5.5 ಆತ್ವನಬಗ್ಗೆ ತಿಳುವಳಿಕೆಯ ಬಳಸಿಗೊಂಡಿಪ್ಪ ಸನ್ಯಾಸಿಗೊ ಪಡವ ಅದೇ ಅವಸ್ಥೆಯ,
ಕೆಲಸವ ಯೋಗರೀತಿಲಿ ಮಾಡುವವುದೆ ಪಡವಲಕ್ಕು. ಕರ್ಮಯೋಗ ಮತ್ತು ಕರ್ಮಸನ್ಯಾಸ ಇದೆರಡೂ ಒಂದು ಹೇಳಿ
ಆರು ತಿಳಿತ್ತನೋ ಆವ ಸತ್ಯವ ತಿಳಿತ್ತ.
5.6 ಆತ್ಮನಬಗ್ಗೆ ತಿಳುವಳಿಕೆ ಬಂದು ಸರಿಯಾಗಿ ಆಯೆಕ್ಕಾದ ಸನ್ಯಾಸ,
ಕರ್ಮಯೋಗ ಮಾಡದ್ದೆ ಪಡವಲೆ ತುಂಬಾ ಕಷ್ಟ. ಆದರೆ ಕರ್ಮಯೋಗಮಾಡುವವ ಅದರಿಂದಾಗಿ ಮನಸ್ಸು ಶುದ್ಧ ಆಗಿ
ಪಕ್ಕವೇ ದೇವರ ಪಡೆತ್ತಾ.
5.7 ಕರ್ಮಯೋಗ ಮಾಡಿಗೊಂಡಿಪ್ಪವನಾಗಿ, ತಾನು ಶುದ್ಧ ಆದವನಾಗಿ, ತನ್ನ
ಜಯಿಸಿದವನಾಗಿ,, ತನ್ನ ಕಣ್ಣು, ಕೆಮಿ, ಮೂಗು, ಬಾಯಿ ಇತ್ಯಾದಿ ಇಂದ್ರಿಯಂಗಳ ನಿಯಂತ್ರಿಸಿದವನಾಗಿ
ಎಲ್ಲಾರಲ್ಲಿ ಇಪ್ಪ ಜೀವವುದೆ ತನ್ನ ಜಿವವುದೆ ಒಂದೇ ಹೇಳಿ ತಿಳಿವವ ಲೋಕಕ್ಕೆ ಒಳ್ಳೆದಪ್ಪಲೆ
ಹೇಳಿಯೋ ಸ್ವಾಭಾವಿಕವಾಗಿಯೋ ಕೆಲಸವಮಾಡುವನಾದರುದೇ ಆ ಕೆಲಸಂಗಳ ಫಲ ಅವನ ಬಾಧಿಸುತ್ತಿಲ್ಲೆ.
5.8 - 9 ಕರ್ಮಯೋಗಿಯಾಗಿಪ್ಪವ ಕಾಲಕ್ರಮಂದ ತತ್ವದ ತಿಳುವಳಿಕೆ ಇಪ್ಪವ
ಆಗಿ (ತನ್ನಬಗ್ಗೆ ದೇವರ ಬಗ್ಗೆ ಎಲ್ಲಾ ತಿಳುದು) ಕಣ್ಟುಗೊಂಡುದೆ, ಕೇಳಿಗೊಂಡುದೆ,
ಮುಟ್ಟಿಗೊಂಡುದೆ, ಮೂಸಿಗೊಂಡುದೆ, ತಿಂದುಗೊಂಡುದೆ, ನಡಕ್ಕೊಂಡುದೆ, ಒರಗಿಗೊಂಡುದೆ, ಶ್ವಾಸ
ಎಳಕ್ಕೊಂಡುದೆ, ಮಾತಾಡಿಗೊಂಡುದೆ, ಮಲ ಮೂತ್ರಂಗಳ ಬಿಟ್ಟುಗೊಂಡುದೆ, ತೆಕ್ಕೊಂಡುದೆ, ಕಣ್ಣು
ಮುಚ್ಚಿ ತೆಕ್ಕೊಂಡು ಇದ್ದುಗೊಂಡೆಲ್ಲಾ ಇದ್ದರುದೆ, ತನ್ನ ಕಣ್ಣು ಕಾಲು ಇತ್ಯಾದಿ ಇಂದ್ರಿಯಂಗೊ
ಅದಾದರ ಕೆಲಸಂಗಳಲ್ಲಿ ಏರ್ಪಟ್ಟುಗೊಂಡಿದ್ದವು ಹೇಳಿ ಬುದ್ದಿಯಿಂದ ನಿಶ್ಚಯಿಸಿ ಆನೆಂತದುದೆ
ಮಾಡುತ್ತಿಲ್ಲೆ ಹೇಳಿ ವಿಚಾರಮಾಡುತ್ತ.
5.10 ಯಾವ ಒಬ್ಬ ಕೆಲಸಂಗಳ ದೇವರಲ್ಲಿ ಅರ್ಪಿಸಿ ಮಾಡುವ ಕೆಲಸಂದ
ಆಗಬೇಕಾದ ಫಲ್ಲಲಿ ಮನಸ್ಸಿನ ಮಡುಗದ್ದೆ ಕೆಲಸವ ಮಾಡುತ್ತನೋ ಆವ ತಾಮರೆ ಎಲೆ ಹೇಂಗೆ ನೀರಿಂದ ಚೆಂಡಿ
ಆವುತ್ತಿಲ್ಲೆಯೋ ಹಾಂಗೆ ಪಾಪಂಗಳಿಂದ ಕಟ್ಟಿಹಾಕಿದವ ಆವುತ್ತಾ ಇಲ್ಲೆ.
5.11 ಕರ್ಮಯೋಗಿಗಳಾಗಿಪ್ಪವು ಕೆಲಸದ ಫಲಲ್ಲಿಪ್ಪ ಮನಸ್ಸಿನ
ಅಂಟುಸದ್ದೆ, ತನ್ನನ್ನು ಶುದ್ದಮಾಡುಲಾಗಿ ದೇಹದಿಂದಲೂ,ಮನಸ್ಸಿಂದಲೂ,ಬುದ್ದಿಯಿಂದಲೂ, ಬರೇ ಕಣ್ಣು,
ಕೆಮಿ, ಕಾಲು, ಕೈ, ಇತ್ಯಾದಿ ಇಂದ್ರಿಯಂಗಳಿಂದ ಮಾತ್ರವಾಗಿ ಕೆಲಸಂಗಳ ಮಾಡುತ್ತವು.
5.12 (ಎಂತಾಳಿದರೆ), ದೇವರ ಒಂಟ್ಟಿಂಗಿಪ್ಪವ (ಯೋಗಿ) ಕೆಲಸಂಗಳ ಫಲವ
ಬಿಟ್ಟಿಕ್ಕಿ, ಆತ್ಮನಲ್ಲಿಯೇ ನಿಂಬನ್ಥಾ ಶಾನ್ತಿಯ ಪಡೆತ್ತಾ. (ಮೋಕ್ಷವ ಪಡೆತ್ತಾ). ಆದರೆ ಯೋಗಿ
ಅಲ್ಲದ್ದವ (ಮಾಡುವ ಕೆಲಸದ ಫಲಲ್ಲಿ ಆಸಕ್ತಿ ಇಪ್ಪವ) ಆಗ್ರಹಂಗಳ ಪ್ರೇರಣೆಯಿಂದಲಾಗಿ ಕೆಲಸದ
ಫಲಲ್ಲಿ ಆಸಕ್ತಿ ಇಪ್ಪವನಾಗಿ ಕಟ್ಟಿಹಾಕಿದವನಾಗುತ್ತಾ.
5.13 ಮನಸ್ಸಿನನ್ನು ತನ್ನ ಅವಯವಂಗಳನ್ನುದೆ ತನ್ನ ವಶಮಾಡಿದ ಜೀವಾತ್ಮ
ಎಲ್ಲಾ ಕೆಲಸಂಗಳನ್ನುದೆ ಮನಸ್ಸಿಂದ ಬಿಟ್ಟಿಕ್ಕಿ ಒಂಬತ್ತು ಬಾಗಿಲಿಪ್ಪ ನಗರಲ್ಲಿ ( ಆಹಂಕಾರ ಇಲ್ಲದ್ದ
ದೇಹಲ್ಲಿ ) ಎಂತದು ಮಾಡದ್ದೆಯುದೇ ಎಂತದುದೆ ಮಾಡುಸದ್ದೆಯುದೇ ಸೌಖ್ಯವಾಗಿ ಜೀವಿಸುತ್ತಾ.
5.14 ಕೆಲಸವನ್ನೋ ಕೆಲಸಮಾಡುಲಿಪ್ಪ ಜವಾಬ್ದಾರಿಯನ್ನೋ ಮನುಷ್ಯರಿಗೆ
ದೇವರು ಸೃಷ್ಟಿ ಮಾಡುತ್ತಾ ಇಲ್ಲೆ. ಮಾಡುವ ಕೆಲಸಂಗಳೊಟ್ಟಿಂಗೆ ಅಂಟಿಗೊಂಡಿರೆಕ್ಕು ಹೇಳಿಯು ದೇವರು
ಮಾಡುತ್ತಾ ಇಲ್ಲೆ. ಆದರೆ ಜೀವ ಇಪ್ಪವು ತನ್ನಷ್ಟಗೇ (ಮಾಯೆಂದಲಾಗಿ) ಕೆಲಸಮಾಡುತ್ತಾ ಅದರ ಫಲಲ್ಲಿ
ಅಂಟುತ್ತಾ ಇರುತ್ತವು.
5.15 (ಆದರೆ ನಿಜವಾಗಿಯುದೆ) ದೇವರು ಆರಿಂಗುದೆ ಪಾಪವೋ ಪುಣ್ಯವೋ
ಕೊಡುತ್ತವಿಲ್ಲೆ. ತಿಳುವಳಿಕೆ ಅಥವಾ ಜ್ಞಾನ ಅಜ್ಞಾನ ಅಥವಾ ತಿಳುವಳಿಕೆ ಇಲ್ಲದ್ದದರಿಂದಲಾಗಿ
ಮುಚ್ಚಿಹೊಗಿ ಇದ್ದು. ಆದ್ದರಿಂದ ಜೀವಿಗೊ ಎಲ್ಲಾ ತಪ್ಪಾದ ತಿಳುವಳಿಕೆಲಿ ಇರುತ್ತವು.
5.16 ಆರೆಲ್ಲಾ, ತಿಳುವಳಿಕೆಯಿಂದ (ಗ್ರನ್ಥ ಒದಿ, ಗುರುಮಾತು ಕೇಳಿ,
ತಪಸ್ಸು ಮಾಡಿ ಸಿಕ್ಕುವನ್ಥಾ ತಿಳುವಳಿಕೆ) ಅಜ್ಞಾನವ ನಾಶಮಾಡುತ್ತವೋ ಆವರ ಜ್ಞಾನ (ಅವರ
ತಿಳುವಳಿಕೆ) ಸೂರ್ಯನ ಬೆಣುಚ್ಚಿ ವಸ್ತುಗಳ ಸರಿಯಾಗಿ ಕಾಣುಸುವ ಹಾಂಗೆ ದೇವರ ನಿಜ ರೂಪವ
ಕಾಣುಸುತ್ತು.
5.17 ದೇವರಲ್ಲಿಯೇ (ಬ್ರಹ್ಮಲ್ಲಿಯೇ) ಚಿನ್ತೆಯ ಮಡುಗಿಗೊಂಡು, ತಾನುದೆ
ದೇವರದ್ದೇ ಅಂಶ ಹೇಳಿ ತಿಳುಕ್ಕೊಂಡು, ಆದರಲ್ಲಿಯೇ ನಿಂದುಗೊಂಡು, ಆ ಬ್ರಹ್ಮವನ್ನೇ
ಆಶ್ರಯಿಸುವವರಾಗಿ, ತಿಳುವಳಿಕೆಯಿಂದ ಕಲ್ಮಷಂಗಳ ಇಲ್ಲದ್ದೇ ಮಾಡಿದವರಾಗಿ, ಇನ್ನು ತಿರುಗಿ
ಬರೇಡದ್ದನ್ಥಾ ಸ್ಥಾನವಾದ ಮೋಕ್ಷಾವಸ್ಥೆಗೆ ಹೋಗುತ್ತವು.
5.18 ವಿದ್ಯೆಯು ವಿನಯವು ಇಪ್ಪವನಾದ ಬ್ರಾಹ್ಮಣನಲ್ಲಿಯೂ, ದನಲ್ಲಿಯೂ,
ಆನೆಲಿಯು, ನಾಯಿಲಿಯು, ನಾಯಿಯ ಬೇಶಿ ತಿಂಬನ್ಥಾ ಚನ್ಣಾಲನಲ್ಲಿಯೂ ಪಣ್ಟಿತರಾದವರು ( ತಿಳುವಳಿಕೆ
ಇಪ್ಪವು) ತುಲ್ಯತೆ ಅಥವಾ ಸಮತ್ವವ ಕಾಣುತ್ತವು.
5.19 ಆರ ಮನಸ್ಸು ಸಮತ್ವಲ್ಲಿ ನಿಂದುಗೊಂಡಿರುತ್ತೋ ಆವು ಈ ಲೋಕಲ್ಲಿ
ಜೀವಿಸಿಗೊಂಡೇ ಹುಟ್ಟುದು ಸಾವದು ಹೇಳುವ ಸಂಸಾರಚಕ್ರವ ಬಿಟ್ಟಿದವು. ಎಂತಾಳಿದರೆ ಬ್ರಹ್ಮ ಅಥವಾ
ದೇವರು ದೋಷ ಇಲ್ಲದ್ದದುದೆ ಎಲ್ಲಾದರಲ್ಲಿಯುದೇ ಸಮವಾಗಿಯುದೇ ಇದ್ದು. ಹಾಂಗಾಗಿ ಆವು
ಪರಬ್ರಹ್ಮಲ್ಲಿಯೇ ಜಿವಸುತ್ತವು.
5.20 ಸ್ಶಿರವಾದ ಚಿಂತಾಶಕ್ತಿ ( ಬುದ್ದಿ ) ಇಪ್ಪವನಾಗಿಯೂ
ಅಜ್ಞಾನ ಏನು ಇಲ್ಲದ್ದವನಾಗಿಯೂ ಬ್ರಹ್ಮಲ್ಲಿಯೇ ನೆಲನಿಂಬ ಬ್ರಹ್ಮನ ತಿಳುದವ ಇಷ್ಟವಾದ ಪದಾರ್ಥವೋ
ಸ್ಥಾನ ಮಾನವೋ ಸಿಕ್ಕುವಾಗ ಸನ್ತೋಷ ಪಡುಲಾಗ, ಇಷ್ಟ ಇಲ್ಲದ್ದದು ಸಿಕ್ಕುವಗ ಅಥವಾ ಅಪ್ಪಗ ಬೇಜಾರು
ಪಡುಲು ಇಲ್ಲೆ.
5.21 ಹೆರಾಣ ವಿಷಯಂಗಳಲ್ಲಿ ಅಥವಾ ಸಂಗತಿಗಳಲ್ಲಿ (ಕಾಂಬದು, ಕೇಳುದು
ಇತ್ಯಾದಿ) ಆಸಕ್ತಿಇಲ್ಲದ್ದವ ತನ್ನಲ್ಲಿಯೇ ಎಷ್ಟು
ಸುಖವ ಪಡೆತ್ತನೋ ಆದೇ ಬ್ರಹ್ಮಲ್ಲಿ ಧ್ಯಾನ ಮಾಡಿಗೊಂಡಿಪ್ಪವ ಆ ಸುಖವ ಒಂದರಿಯೂ ಮುಗಿಯದ್ದಷ್ಚು
ಆನುಭವಿಸುತ್ತಾ.
5.22 ಏ ಕುಂತಿಯ ಮಗನೇ ಮುಟ್ಟುವದರಿಂದ , ಕಾಂಬದರಿಂದ ಎಲ್ಲಾ ಸಿಕ್ಕುವ
ಸುಖ ಎವದೆಲ್ಲವೋ ಅದು ದುಃಖಕ್ಕುದೇ ಕಾರಣವಾಗಿ ತೀರುತ್ತು. ಎಂತಾಳಿದರೆ ಆ ಸುಖಂಗೊ ಉಂಟಾಗಿ
ಇಲ್ಲದ್ದೆ ಅಪ್ಪನ್ಥಾದವು. ಹಾಂಗಾಗಿ ಬುದ್ದಿ ಇಪ್ಪವು ಆ ಸಂಗತಿಗಳಲ್ಲಿ (ಹೆಚ್ಚಿಗೆ) ಸನ್ತೋಷ
ಪಡಪತ್ತವಿಲ್ಲೆ.
5.24 ತನ್ನಲ್ಲಿ ಸುಖ ಇಪ್ಪ, ತನ್ನಲ್ಲಿಯೇ ಸನ್ತೇಷಪಡುವನ್ಶಾ
ತನ್ನ ಆತ್ಮಲ್ಲಿಯೇ ದೃಷ್ಟಿ ಇಪ್ಪವ ಆರೋ ಆ ಯೋಗಿ ಬ್ರಹ್ಮಲ್ಲಿ ಇಪ್ಪವನಾಗಿ ಬ್ರಹ್ಮನಲ್ಲಿಯೇ
ಮೋಕ್ಷವ ಪಡವ ಆಗಿ ಪಡೆತ್ತಾ.
5.25 ತಪ್ಪಾದ ಕರ್ಮಂಗಳಿಂದ ಉಂಟಾದ ಪಾಪ ಫಲ ಎಲ್ಲಾ
ಇಲ್ಲದ್ದೆ ಆಗಿ, ಸಂಶಯಂಗೊ ಎಲ್ಲಾ ಮುಗುದಂಥಾ ತನ್ನ ಸ್ವಾಧಿನ ಪಡುಸಿದಂಥಾ ಎಲ್ಲಾ
ಜೀವಜಾಲಂಗಳದ್ದುದೇ ಸುಖಲ್ಲಿ ಸನ್ತೋಷ ಪಡುವವುದೆ ಆದ ಋಷಿಗೊ ಮೋಕ್ಷವ ಪಡೆತ್ತವು.
5.26 ಇದು ಇಷ್ಡ ಇದು ಇಷ್ಟ ಅಲ್ಲ ಹೇಳಿಪ್ಪ ಕಾಮ ಕ್ರೋಧಂಗಳಿಂದ
ಬಚವಾದವಾಗಿ ಮನಸ್ಸಿನ ನಿಯನ್ತ್ರಿಸಿದವರಾಗಿ ಆತ್ಮನಬಗ್ಗೆ ತಿಳುದವರಾದ ಸನ್ಯಾಸಿಗೊಕ್ಕೆ (ಒಳ್ಳೆ
ಜನಂಗೊಕ್ಕೆ) ದೇವರಲ್ಲಿಯೇ ಅಡಗುವದು ಹೇಳುವ ಅವಸ್ಥೆ ಜೀವಲ್ಲಿಪ್ಪಗಳುದೆ ಸತ್ತಮತ್ತುದೆ ಇದ್ದು.
5.27 , 28 – ಪ್ರಾಣ (ಒಳ ಎಳವ ಶ್ವಾಸಗಾಳಿ) ಅಪಾನ (ಹೆರ ಬಿಡುವ
ಶ್ವಾಸ ಗಾಳಿ) ಇದರ ಸಮವಾಗಿ ಎಳಕ್ಕೊಂಡು (ಪ್ರಾಣಾಯಾಮವ ಮಾಡಿಗೊಂಡು) ಮನಸ್ಸು ಕೈಕಾಲುಗೊ ಇದರ
ಎಲ್ಲಾ ನಿಯಂತ್ರಿಸಿಗೊಂಡು ಅದು ಬೇಕು ಇದು ಬೇಕು ಹೇಳುವ ಬುದ್ದಿ, ಹೆದರಿಕೆ, ಕೋಪ, ಇದರ ಎಲ್ಲಾ
ಬಿಟ್ಟವನಾಗಿ ಮೋಕ್ಷವನ್ನೇ ಯೋಚಿಸುವವನಾಗಿ, ಇಪ್ಪ ಚಿನ್ತಾ ಶೀಲ ಆರೋ ಅವ ಯಾವಾಗಲುದೇ ಮೋಕ್ಷ
ಸಿಕ್ಕಿದವನಾಗಿಯೇ ಇದ್ದ.
5.28 ಎನ್ನ ತಿಳುದವನಾಗಿ ಶಾನ್ತಿಯ ಹೊಂದುತ್ತ. ಹೇಂಗಿಪ್ಪ ಎನ್ನಾ
ಹೇಳಿದರೆ ದೇವ ಪುಜೆ ಪುನಸ್ಕಾರಂಗಳ , ತಪಸ್ಸಿನ ಎಲ್ಲಾ ಸ್ವೀಕರಿಸುವನಾದ, ಎಲ್ಲಾ ಲೋಕಂಗಕ್ಕುದೆ
ದೊಡ್ಡ ದೇವರಾಗಿ ಇಪ್ಪವನಾದ ಎಲ್ಲಾ
ಜೀವಿಗಳದ್ದುದೇ ಗೆಳೆಯನಾಗಿಪ್ಪ ಎನ್ನ ತಿಳುದಿಕ್ಕಿ ಮೋಕ್ಷವ ಹೊಂದುತ್ತಾ.
ಹಿಂಗೆ ಸನ್ಯಾಸ ಯೋಗ (ಎಲ್ಲದರಿಂದಲು ಬಚವಪ್ಪದು) ಹೇಳುವ ಐದನೇ ಅದ್ಯಾಯ
ಇಡೀಯಾತು.
(23.01.2013 ಮದುಕ್ಕರೆ, ಕೋಯಂಬತ್ತೂರ್,ತಮಿಳ್ನಾಡು)
These extra Lines were rewritten after writing the 5th chapter.
(5.7 ಒಬ್ಬ ಕೆಲಸಂಗಳ ಮಾಡಿದರುದೆ ಕೆಲವು ನಿಷ್ಠೆಗಳ ಪಾಲಿಸಿಗೊಂಡುಬಂದರೆ ಅವಂಗೆ
ಕೆಲಸಂಗಳ ಹಾಳು ಒಳ್ಳೆ ಫಲಂಗೊ ಅಂಟಿಹಿಡಿತ್ತಿಲ್ಲೆ. ಆ ನಿಷ್ಠೆಗೊ (1) ಕರ್ಮಯೋಗಮಾಡುವದು
(2)ಮನಸ್ಸಿನ ಶುದ್ದವಾಗಿ ಮಡುಗುವದು (3) ತನ್ನ ತನಗೆ ವಶಪಡಿಸಿಗೊಂಡಿಪ್ಪದು (4) ತನ್ನ ಕಣ್ಣು
ಬಾಯಿ ಕೆಮಿ ನಾಲಗೆ ಲಿಂಗ ಇತ್ಯಾದಿ ಅಂಗಂಗಳ ತನ್ನ ವಶಪಡುಸಿಗೊಂಬದು (5) ಎಲ್ಲಾ ಜೀವಿಗಳ ಜೀವವುದೆ
ತನ್ನ ಜೀವವುದೆ ಒಂದೇ ಹೇಳಿ ತಿಳಿವದು. ಇದು 5 ನಿಷ್ಠೆಗೊ ಮಾಡಿ ಜೀವಿಸುವವಂಗೆ ಅವ
ಲೋಕೋಪಕಾರಕ್ಕಾಗಿಯೋ ತನ್ನ ಸುಖಕ್ಕಾಗಿಯೋ ಮಾಡುವ ಕೆಲಸಂಗಳ ಫಲ ಬಾಧಿಸಿತ್ತಿಲ್ಲೆ.
5.8-5.9 ಕೆಲಸವಮಾಡಿಗೊಂಡೇ ದೇವರ ಸತ್ಯವ
ತಿಳಿವಲಿಪ್ಪ ರೀತಿಯಾದ ಕರ್ಮಯೋಗಲ್ಲಿಪ್ಪವ, ತಿಳಿಯೆಕ್ಕಾದ ಸಂಗತಿಗಳ ತಿಳಿದಿಕ್ಕಿ, ಕಣ್ಣುಗಳಿಂದ
ನೋಡಿಗೊಂಡುದೇ, ಕೆಮಿಗಳಿಂದ ಕೇಳಿಗೊಂಡುದೇ, ಚರ್ಮದಿಂದ ಮುಟ್ಟಿಗೊಂಡುದೇ, ಮೂಗಿಂದ ಮೂಸಿಗೊಂಡುದೇ,
ಬಾಯಿಂದ ಉಂಡುಗೊಂಡುದೇ, ಕಾಲಿಂದ ನಡಕ್ಕೊಂಡುದೇ, ಬುದ್ದಿಯಿಂದ ಒರಗಿಗೊಂಡುದೇ, ಶ್ವಾಸವ
ಎಳಕ್ಕಾಂಡುದೇ, ಮಾತಾಡಿಗೊಂಡುದೇ, ಉಚ್ಚುಹೊಯ್ವದು, ಹೆರಕೂಪದು ಮಾಡಿಗೊಂಡುದೇ, ಕೈಕಳಿಂದ ವಸ್ತುಗಳ
ಎತ್ತಿಗೊಂಡುದೇ, ಕಣ್ಣುಗಳ ಮುಚ್ಚಿತೆಗೆದು ಮಾಡಿಗೊಂಡುದೇ ಎಲ್ಲಾ ಇದ್ದರುದೇ, ಆ ಆ ಶರಿರ ಅಂಗ
ಅದಾದರ ಕೆಲಸ ಮಾಡುತ್ತು ಹೇಳಿ ಗಟ್ಟಿಯಾಗಿ ನಿಶ್ಚಯಿಸಿ ಆನಂತದೂ ಮಾಡಿತ್ತಿಲ್ಲೆ ಹೇಳಿಯೇ
ಮಡಿಕ್ಕೊಳ್ತ್ತಾ.
5.10 ದೇವರಲ್ಲಿ (ಬ್ರಹ್ಮಲ್ಲಿ ಹೇಳಿ ಇಪ್ಪದು, ಬ್ರಹ್ಮ ಹೇಳಿದರೆ
ಸಾಮಾನ್ಯವಾಗಿ ದೇವರು ಹೇಳಿ ಹೇಳುಲಕ್ಕು ಆದರುದೆ ನಾವುದೆ ದೇವರುದೆ ಲೋಕವುದೆ ಸೇರಿದ್ದದು
ಬ್ರಹ್ಮ.) ಕೆಲಸಂಗಳ ಸಮರ್ಪ್ಪಣೆ ಮಾಡಿ ಪಲಲ್ಲಿ ಅಂಟದ್ದೆ ಇಪ್ಪವನ ಕೆಲಸಂಗಳ ಪಾಪ ಫಲ ಅವನ
ಹೊಂದುತ್ತಿಲ್ಲೆ, ಹೇಂಗೆ ತಾವರೆ ಎಲೆಲಿ ಬೀಳುವ ನಿರು ಅದರಲ್ಲಿ ನಿಲ್ಲದ್ದೆ ಕೆಳ ಸರುದು
ಹೇಗುತ್ತೋ ಹಾಂಗೆ.
5.11 ಕರ್ಮಯೋಗಿಗೊ, ತನ್ನ ಮತ್ತು ಮತ್ತು ಶುದ್ದ ಮಾಡುಲಾಗಿ ಮನಸಿಂದಲು,
ಬುದ್ದಿಯಿಂದಲು, ಶರೀರದಿಂದಲೂ ಅಪ್ಪಂಥಾ ಕೆಲಸಂಗಳ ಫಲದ ಆಸಕ್ತಿ ಇಲ್ಲದ್ದೆ ಮಾಡುತ್ತಾ ಇರುತ್ತ.
5.12 (ಎಂತಗೇ ಹೇಳಿದರೆ) ಯೋಗಿ ಮಾಡಿದ ಕೆಲಸಂಗಳ ಫಲವ ಬಿಟ್ಟು ತನ್ನಲ್ಲಿಯೇ
ಗಟ್ಟಿಯಾಗಿಪ್ಪ ಶಾನ್ತಾವಸ್ಶೆಯ ಹೊಂದುತ್ತಾ.
ಯೋಗಿ ಅಲ್ಲದ್ದವ ಮಾಡುವ ಕೆಲಸಂಗಳ ಫಲಲ್ಲಿ ಆಸಕ್ತಿ ಇಪ್ಪವನಾಗಿ
ಅದರಿಂದ ಬಪ್ಪಂಥಾ ಒಳ್ಳೆಯ ಮತ್ತೆ ಹಾಳು ಫಲಂಗಳಲ್ಲಿ ಕಟ್ಟಿಹಾಕಿದವನಾಗಿ ಬಿಡುತ್ತಾ.
5.13 ಒಂಬತ್ತು ಬಾಗಿಲುಗೊ ಇಪ್ಪ ಒಂದು ನಗರಲ್ಲಿ ಎಂತದುದೆ ಮಾಡದ್ದೆಯುದೇ
ಮಾಡುಸದ್ದೆಯುದೇ ಸುಖವಾಗಿ ಇಪ್ಪ ಒಬ್ಬನಾಂಗೆ ಈ ಶರಿರಲ್ಲಿ ಇಪ್ಪ ಜೀವ ತನ್ನ ಕೈ ಕಾಲುಗಳ ತನ್ನ ವಶ
ಮಾಡಿಸಿಗೊಂಡು ಎಲ್ಲಾ ಕೆಲಸಂಗಳನ್ನುದೇ ಮನಸ್ಸಿನಿಂದ ಬಿಟ್ಟುಗೊಂಡು ಸುಖವಾಗಿ ಜೀವಿಸುತ್ತಾ.)
No comments:
Post a Comment