Wednesday, August 14, 2013

ದೇವರ ಮಾತು ಎಂಟ್ಟನೇ ಅಧ್ಯಾಯ 8th Chapter of The Divine Message



ದೇವರ ಮಾತು ಎಂಟ್ಟನೇ ಅಧ್ಯಾಯ
ಅರ್ಜುನ ಕೇಳಿದ
8.1 ಬ್ರಹ್ಮ ಹೇಳಿದರೆ ಎಂತದು....ಅಧ್ಯಾತ್ಮ ಹೇಳಿದರೆ ಎಂತದು........ಕರ್ಮ ಹೇಳಿದರೆ ಎಂತದು........ಅಧಿ ಭೂತ ಹೇಳಿದರೆ ಎಂತದು.....ಅಧಿ ದೈವ ಹೇಳಿದರೆ ಎಂತದು.........
8.2 ಈ ದೇಹಲ್ಲಿ ಇದ್ದುಗೊಂಡು ಕೆಲಸಎಲ್ಲಾ ಮಾಡುಸುವ ಅಧಿಯಜ್ಞ ಆರು........ಮನಸ್ಸಿನ ಅಡಗಿಸಿದವಕ್ಕೆ ಹೋಪ ಕಾಲಲ್ಲಿ (ಸಾವ ಕಾಲಲ್ಲಿ) ಹ ನಿನ್ನ ಗೊಂತುಮಾಡುಲೆ ಹೇಂಗೆ ಎಡಿಗು..........
ದೇವರು ಹೇಳಿದವು...
8.3 ಆತ್ಯಂನ್ತಿಕವಾಗಿ ಯಾವಾಗಳು ಹಾಳಾಗದ್ದ ಅಥವಾ ಬದಲದ್ದದು ಎಂತದೋ ಅದು ಬ್ರಹ್ಮ.  ಆ ಬ್ರಹ್ಮನದ್ದೇ ಶರೀರಲ್ಲಿಪ್ಪ ರೂಪಕ್ಕೆ ಆತ್ಮ ಅಥವಾ ಅಧ್ಯಾತ್ಮ ಹೇಳಿ ಹೆಸರು. ಹೊಸ ಹೊಸ ಜೀವಜಾಲ ಅಥವಾ ವಸ್ತುಗಳು  ಉಂಟಪ್ಪನ್ಥಾ ಕೆಲಸ್ಕೆ ಕರ್ಮ ಹೇಳಿ ಹೆಸರು.
8.4 ದೇಹ ಇಪ್ಪವರಲ್ಲಿ ಶ್ರೇಶ್ಠನಾದವನೇ ಅರ್ಜುನಾ...... ಹಾಳಾಗಿ ಹೋಪ ದೇಹ ಮುಂತಾದ ಬಗೆಗೊ ಅಧಿ ಭೂತ ಹೇಳಿ ಹೆಸರು. ಸೂರ್ಯನ ಒಳಗಿಪ್ಪ ಶಕ್ತಿಯೇ ಅಧಿ ಪುರುಷ. ಈ ಕಾಂಬ ಶರೀರಂಗಳಲ್ಲಿ ಕಲಸಮಾಡುಲೆ ಕಾರಣವಾಗಿಪ್ಪದು ಆನೇ.......
8.5 ಸಾವಕಾಲಲ್ಲಿ ಎನ್ನನ್ನೇ ಯೋಚನೆ ಮಾಡಿಗೊಂಡು ಶರೀರವ ಬಿಟ್ಟರೆ ಆರು ಹೋವುತ್ತವೋ ಅವು ಎನ್ನದೇ ಭಾವವ ಹೊಂದುತ್ತವು. ಈ ವಿಷಯಕ್ಕೆ ಸಂಶಯ ಏನೂ ಇಲ್ಲೆ.
8.6 ತೀರಿ ಹೋಪ ಕಾಲಕ್ಕೆ ಆರೆಲ್ಲಾ ಏವದೆಲ್ಲಾ ರೂಪಂಗಳ ಗ್ರೇಶುತ್ತವೋ ಏವಾಗಳು ಆ ರೂಪಂಗಳ ಗ್ರೇಶಿದ ಕಾರಣ ಅವು ಅದೇ ರೂಪಂಗಳ ಹೊಂದುತ್ತವು.
8.7 ಹಾಂಗಾದ ಕಾರಣ ಏವಗಳುದೇ ಎನ್ನನ್ನೇ ನೆನಪಿಸಿಗೊಂಡು ಯುದ್ಧಮಾಡು. ಎನ್ನಲ್ಲಿ ಮನಸ್ಸು ಬುದ್ದಿಯ ಅರ್ಪಿಸಿದರೆ ಎನ್ನನ್ನೇ ಪಡೆತ್ತೆ ಅದಕ್ಕೆ ಸಂಶಯ ಇಲ್ಲೆ.
ಅದು  ಮಾಂತ್ರಅಲ್ಲ
8.8 ಪ್ರತಿದಿನ ಮಾಡುವ ಪೂಜೆ, ಪುನಸ್ಕಾರ, ಯೋಗ, ಧ್ಯಾನ, ವ್ರತ ಮುಂತಾದ ಅಭ್ಯಾಸಂಗಳಿಂದ ಬೇರೆ ಎಲ್ಲಿಗೂ ಸಂಚರಿಸದ್ದ ಮನಶ್ಶಕ್ತಿಯಿಂದ  ದೇವರನ್ನೇ ಮತ್ತೆ ಮತ್ತೆ ಗ್ರೇಶುವವ ಅವನನ್ನೇ ಪಡೆತ್ತಾ.
ಹಾಂಗಿಪ್ಪವು ಹೋಪ ದೇವರ ಬಗ್ಗೆ ವರ್ಣ್ಣನೆ ಇನ್ನು ಮುಂದೆ......
8.9 , 8.10 ತೀರಿ ಹೋಪ ಕಾಲದಲ್ಲಿ ಎಳಗದ್ದ ಮನಸ್ಸಿಂದ ಬಕ್ತಿಕೂಡಿಗೊಂಡು ಯೋಗಬಲವುದೆ ಕೂಡಿ ಇಪ್ಪವಾಗಿ ಜೀವಶಕ್ತಿಯಾದ ಪ್ರಾಣನ ಹುಬ್ಬುಗಳ ನಡುಗೆ ಸರಿಯಾಗಿ ನಿಲುಸಿ ಎಲ್ಲೋರನ್ನು ತಾಂಗಿಗೊಂಡಿಪ್ಪ ಇಂತಾ ರೂಪ ಹೇಳಿ ತಿಳಿವಲಾಗದ್ದ ಮದಲಿಂದಲೇ ಇಪ್ಪವನಾದ ಸೂರ್ಯನ ಬೆಣುಚಿಯ ನೆರ ಇಪ್ಪ ಇರುಳಿನ ಅಟ್ಟುವವನಾದ ದೇವರ ಬಗ್ಗೆ ಗ್ರೇಶಿಗೊಂಡು ಪ್ರಾಣ ಬಿಟ್ಟರೆ ದೇವರತ್ತರಂಗೇ ಹೋಗಿ ಸೇರುತ್ತವು.
8.11 ವೇದಾರ್ಥ ಗೊಂತಿಪ್ಪವು ಏವದರ ಬಗ್ಗೆ ಬದಲಾವಣೆ ಇಲ್ಲದ್ದದು ಹೇಳಿ ಹೇಳುತ್ತವೋ ಕೋಪ, ಬೇಜಾರು ಇತ್ಯಾದಿಗಳ ಬಿಟ್ಟ ಯತಿಗೊ ಎಲ್ಲಿ ಹೋಗಿ ಸೇರುತ್ತವೋ , ಯಾವ ಸ್ಥಾನವ ಪಡವಲಾಗಿ ಬ್ರಹ್ಮಚರ್ಯೆಯ ಅನುಸರಿಸುತ್ತವೋ ಆ ಸ್ಥಾನದ ಬಗ್ಗೆ ನಿನಗೆ ಸಂಕ್ಷಿಪ್ತವಾಗಿ ಹೇಳಿಕೊಡುತ್ತೆ.
8.12 ಕಣ್ಮು, ಬಾಯಿ, ಮೂಗು ಇತ್ಯಾದಿ ಶರೀರವುದೆ ಪ್ರಪಂಚವುದೆ ಪರಸ್ಪರ ತೊಡರ್ವುಗೊಳ್ಳುವ ಒಟ್ಟೆಗಳ ಎಲ್ಲಾ ಮುಚ್ಚಿ ಮನಸ್ಸಿನ ಮನಸ್ಸಿಲ್ಲಿಯೇ ನಿಲುಸಿ ತನ್ನ ಪ್ರಾಣ ಶಕ್ತಿಯ ತಲೆಯ ಒಳಗೆ ಹಿಡಿದು ಯೋಗವನ್ನು ಮಾಡೆಕ್ಕು.
8.13 ಓಂ ಕಾರವನ್ನು ಹೇಳಿಗೊಂಡು ಬ್ರಹ್ಮನ ಅಥವಾ ದೇವರ ಗ್ರೇಶಿಗೊಂಡು ಆರು ದೇಹವ ಬಿಡುತ್ತವೋ ಅವ ತುಂಬಾ ಮೇಲೆ ಮಟ್ಟಲ್ಲಿಪ್ಪ ಗತಿಯ ಹೊಂದುತ್ತ. (ಮೋಕ್ಷವ ಹೊಂದುತ್ತ)
8.14 ಬೇರೆ ಸಂಗತಿಗಳ ಬಗ್ಗೆ ತಲೆಕೆಡುಸದ್ದೆ ಎನ್ನನ್ನೇ ಪ್ರತಿದಿನ ಆರ ಗ್ರೇಶುತ್ತವೋ ಅವಂಗೆ ಆನು ಸುಲಾಭಲ್ಲಿ ಸಿಕ್ಕುವವನೇ........    
8.15 ಎನ್ನ ಹತ್ತರೆ ಬನ್ದು ಶ್ರೇಷ್ಠವಾದ ಮೋಕ್ಷಸ್ಥಾನವ ಪಡೆದ ಮಹಾತ್ಮರಿಂಗೆ ಪುನಃ ಬೇಜಾರಿನ ಮನೆಯಾದ ಶಾಶ್ವತ ಅಲ್ಲದ್ದ ಮತ್ತು ಮತ್ತು ಹುಟ್ಟುವ ಸಂಗತಿಗೆ (ಪುನರ್ಜನ್ಮ) ಬರೆಕ್ಕಾಗಿ ಬತ್ತಿಲ್ಲೆ.
8.16 ಏ ಅರ್ಜುನಾ ನೀನೊಂದು ಸಂಗತಿ ತಿಳಿಯೆಕ್ಕಾದ್ದದೆತ್ತಾಂಳಿದರೆ ಬ್ರಹ್ಮನ ಲೋಕವರೇಗಿಪ್ಪ ಎಲ್ಲಾ ಲೋಕಂಗಳಲ್ಲಿ ಹೋದರುದೆ ಮತ್ತೆ ತಿರುಗೆ ಭೂಮಿಗೆ ಬರೆಕ್ಕಾವುತ್ತು. ಆದರೆ ಎನ್ನತ್ತರಂಗೆ ಬನ್ದರೆ ಪುನರ್ಜನ್ಮ ಇಲ್ಲೆ.
8.17 ಮನುಷ್ಯರ ಸಾವಿರ ಯುಗ ಸೇರುವದು ಬ್ರಹ್ಮನ ಒಂದು ಹಗಲು. ಹಾಂಗೆ ಮತ್ತೆ ಸಾವಿರ ಯುಗ ಸೇರಿದರೆ ಇರುಳು (ರಾತ್ರಿ). ಹೀಂಗಿಪ್ಪ ತಿಳುವಳಿಕೆಯ ಜ್ಯೋತಿಷ ಗೊಂತಿಪ್ಪ ವಿದ್ವಾಂಸರಿಂಗೆ ಗೊಂತಿರುತ್ತು. (ಅಹೋರಾತ್ರ ಲೋಪವಾಗಿ ಹೋರಾ ಹೇಳಿ ಆದ್ದದು. ಹೋರ ಬದಲಿ ಇಂದಿನ ಅವರ್ (ahorathra – hora - hour).
8.18  ಬ್ರಹ್ನನ ಹಗಲು ಸುರುಅಪ್ಪಗ ವ್ಯಕ್ತವಲ್ಲದ್ದ ರೂಪಲ್ಲಿಪ್ಪ ಶಕ್ತಿಯಿಂದ ಒಂದೊಂದೇ ಜೀವಜಾಲ ವ್ಯಕ್ತರೂಪವ ತಾಳುತ್ತವು. ಹಾಂಗೆ ತಿರುಗ ಹ್ರಹ್ಮನ ಇರುಳಪ್ಪಗ ಈ ಜೀವಜಾಲವೆಲ್ಲಾವುದೆ ವ್ಯಕ್ತವಲ್ಲದ್ದ ಸ್ಥಿತಿಗೆ ತಿರುಗಿ ಹೋವುತ್ತವು.
8.19 ಮಣ್ಮು ಗಾಳಿ ನೀರು ಕಿಚ್ಚು ಆಕಾಶ ಈ ಐದು ಭೂತಂಗಳ ಜೋಡಣೆಯಾದ ಜೀವಜೀಲ ಮತ್ತು ಮತ್ತು ಉದ್ಭವವಾಗಿ ಇಲ್ಲದ್ದೆ ಆಗುತ್ತು.ಇರುಳಪ್ಪಗ ಇಲ್ಲದ್ದೆ ಆಪ್ಪ ಈ ಬೂತದಜೋಡಣೆ ಹಗಲು ಪುನಾ ಉಂಟಾವುತ್ತು.
8.20 ಈ ಅವ್ಯಕ್ತರೂಪಲ್ಲಿಪ್ಪ ವಸ್ತುವಿಂಗುದೆ ಹಿಂದಿನ ವಸ್ತುವಾದ ಸನಾಚನ ಬ್ರಹ್ಮ ಎಲ್ಲಾ ಜೀವಜಾಲ ಇಲ್ಲದ್ದೆ ಆದರುದೇ ಇಲ್ಲದ್ದೆ ಆವುತ್ತಿಲ್ಲೆ.
8.21 ಎನ್ನ ಪರವವಾದ ಸ್ಥಾನಕ್ಕೆ ವ್ಯಕ್ತವಲ್ಲದ್ದದು, ಹಾಳಾಗದ್ದದು ಹೇಳಿಎಲ್ಲಾ ವೇದಲ್ಲಿ ಹೆಸರಿದ್ದು. ಅಲ್ಲಿಗೆ ಎತ್ತಿದರೆ ಮತ್ತೆ ತಿರುಗಿ ಬಪ್ಪಲಿಲ್ಲೆ.
8.22 ಪಾರ್ಥಾ, ಎಲ್ಲಾದಕ್ಕುದೆ ಕಾರಣವಾದವನಾದ ಎಲ್ಲಾವಸ್ತುಗಳನ್ನು ತನ್ನ ಒಳಗೆ ಧರಿಸಿಗೊಂಡಿಪ್ಪವನಾದ ಆ ಪರವಪುರುಷನು ಬೇರೆ ಆರತ್ತರುದೆ ಇಲ್ಲದ್ದ ಭಕ್ತಿಯಿಂದ ಮಾಂತ್ರ ಸಿಕ್ಕುವವನಾಗಿದ್ದ.
8.23 ಯೋಗಿಗೊ ಕೆಲವು ಕಾಲ ಇಲ್ಲಿಂದ ಸತ್ತು ಹೇದರೆ ತಿರುಗಿ ಬರೆಕ್ಕಾಗಿ ಬತ್ತು. ಕೆಲವು ಕಾಲ ಹೋದರೆ ತಿರುಗಿ ಬತ್ತವಿಲ್ಲೆ. ಹಾಂಗೆ ಎರಡು ಕಾಲ ಇದ್ದು. ಅದೆರಡನ್ನು ನಿನಗೆ ತಿಳಿಶುತ್ತೆ.
8.24 ಕಿಚ್ಚು, ಬೆಣುಚ್ಚಿ, ಹಗಲು, ಶುಕ್ಷಪಕ್ಷ, ಉತ್ತರಾಯಣಲ್ಲಿಪ್ಪ ಆರುತಿಂಗಳುಗೊ, ಈ ಕಾಲದಲ್ಲಿ ಹೋಪ ಬ್ರಹ್ಮನ ಬಗ್ಗೆ ತಿಳುವಳಿಕೆ ಬನ್ದವು ಬ್ರಹ್ಮನಲ್ಲಿಯೇ ಸೇರುತ್ತವು.
8.25 ಹೊಗೆ, ಇರುಳಪ್ಪಗ, ಹಾಂಗೇ ಕೃಷ್ಣ ಪಕ್ಷ, ದಕ್ಷಿಣಾಯನದ ಆರು ತಿಂಗಳುಗೊ ಈ ಕಾಲಲ್ಲಿ ಹೋಪ ಯೋಗಲ್ಲಿ ವುಂದುವರುದ ಆದರೆ ಅಭ್ಯಾಸ ಇಡೀ ಆಗದ್ದವು  ಚನ್ದ್ರನ ಬೆಣುಚ್ಚಿ ಇಪ್ಪ ಲೋಕಕ್ಕೆ ಹೋಗಿ ತಿರುಗಿ ಬತ್ತವು.
8.26 ಬೆಳಿ ದಾರಿ, ಕಪ್ಪು ದಾರಿ ಹೀಂಗೆ ಎರಡು ದಾರಿಗೊ ಈ ಲೋಕಲ್ಲಿ ಏವಗಳುದೇ ಇಪ್ಪದಾರಿಗೊ. ಅದರಲ್ಲಿ ಬೆಣುಚ್ಚಿ ಇಪ್ಪ ದಾರಿಲಿ ಹೊದರೆ ತಿರುಗಿ ಬಪ್ಪಲಿಲ್ಲೆ. ಆಚ ದಾರಿಲಿ ಹೋದರೆ ಮತ್ತುದೆ ಮತ್ತುದೆ ಸುತ್ತೆಕ್ಕಾವುತ್ತು.
8.27 ಹೀಂಗೆ ಎರಡು ದಾರಿ ಇದ್ದು ಹೇಳಿ ಗೊಂತಿಪ್ಪ ಆರುದೇ ಸತ್ಯವ ಮರದು ಜೀವಿತವೇ ಶಾಶ್ವತ  ಹೇಳಿ ತಪ್ಪಾದ ತಿಳುವಳಿಕೆಲಿ ಇರುತ್ತವುಲ್ಲ.
ಹಾಂಗಾಗಿ ನೀನುದೇ ಎಲ್ಲಾ ಕಾಲವುದೆ ಯೋಗವ ಪರಿಶೀಲಿಸುವವನಾಯೆಕ್ಕದ ಅರ್ಜುನಾ (ಬ್ರಹ್ಮಜ್ಝಾನವ ಪಡವಲೆ ಪ್ರಯತ್ನ ಮಾಡೆಕ್ಕು ಹೇಳಿ ದೇವರು ಹೇಳುವದು)
8.28    ಈಗ ಆನು ಹೇಳಿದ ಸಂಗತಿ ಗೊಂತಾದರೆ ವೇದಗ್ರನ್ಥಂಗಳಿಂದ, ಪೂಜೆ ಪುನಸ್ಕಾರಂಗಳಿಂದ, ತಪಸ್ಸಿಂದಲಾಗಿ, ದಾನಂಗಳಿಂದಲಾಗಿ,ಎನ್ತೆಲ್ಲಾ ಪುಣ್ಯಫಲ ಸಿಕ್ಕುಗು ಹೇಳಿ ಇದ್ದೋ ಆದಕ್ಕಿಂತಲೂ ಹೆಚ್ಚು ಪುಣ್ಯಸಿಕ್ಕಿದವನಾಗಿ ತೀರಿಕ್ಕಿ, ಈ ಜಗತ್ತಿಂಗೇ ಅಡಿಸ್ಥಾನವಾಗಿಪ್ಪ ಪರಮವಾದ ಸ್ಥಾನವ ಹೊಂದುತ್ತ.
ಹೀಂಗೆ ಒಳ್ಳೆದಾದ ದೇವರ ಮಾತುಗಳ ರೂಪಲ್ಲಿಪ್ಪ ದೇವರ, ಲೋಕದ ಮತ್ತೆ ನಮ್ಮ ಬಗ್ಗಿಪ್ಪ ತಿಳುವಳಿಕೆಯ ಪುಸ್ತಕದ ಎಂಟನೇ ಅಧ್ಯಾಯ ಇಲ್ಲಿಗೆ ಇಡೀ ಆತು.
(01.08.2013 ರಯಿಲಿಲ್ಲಿ ಮಧೂರು ದೇವಸ್ಷಾನ. ಮತ್ತೆ ಎಂಗಳ ಮನೆತನದ ದಿವ್ಯಸ್ಥಾನವಾದ ಏರಿಕ್ಕುಳ ಇಲ್ಲಿಗೆ ಹೋಗುವ ದಾರಿಗೆ ಇರುಳಪ್ಪಗ 10.33ರಕ್ಕೆ ವೆಸ್ಛ್ ಕೋಸ್ಠ್ ಕೂಕೂ ಬಂಡಿಲಿ ಮೇಗಾಣ ಮಂಚಲ್ಲಿ ಕೂದುಗೊಂಡು ಬರದ್ದದು.)

No comments:

Post a Comment