Wednesday, August 14, 2013

ದೇವರ ಮಾತು - ಎರಡನೇ ಅಧ್ಯಾಯ 2nd Chapter of The Divine Message



ದೇವರ ಮಾತು - ಎರಡನೇ ಅಧ್ಯಾಯ
ಸಂಜಯ ಹೇಳಿದ
2.1 ಶ್ರೀ ಕೃಷ್ಣ ದೇವರು, ಬೇಕಾದವರಲ್ಲಿ ಕೃಪೆಯಿಪ್ಪ, ಕಣ್ಣುನೀರುಹಾಕುತ್ತಾ ಬೇಜಾರಮಾಡಿಗೊಂಡಿಪ್ಪ ಅರ್ಜುನನತ್ತರೆ ಹೀಂಗೀಗೆ ಸಂಗತಿಗೊ ಹೇಳಿ ಹೇಳಿಕೊಟ್ಟವು.
ಶ್ರೀ ದೇವರು ಹೇಳಿದವು
2.2 ಅಪ್ಪೊ ಅರ್ಜುನ, ಎನ್ತರಿಂದಾಗಿ ನಿನಗೆ ಈಗ ಹೀಂಗೆಲ್ಲಾ ಹೆಸರುಹಾಳಪ್ಪನ್ತಾ, ಒಳ್ಳೆ ಅವಸ್ತೆ ಸಿಕ್ಕದ್ದನ್ತಾ, ಶ್ರೇಷ್ಟ ಜನ ಎಲ್ಲಾ ಒಪ್ಪದ್ದನ್ತಾ ಈ ತಪ್ಪು ತಿಳುವಳಿಕೆ ಬತ್ತಾಯಿದ್ದು ..........
2.3 ಇದು ನೋಡು ಅರ್ಜುನಾ, ನೀ ಗೆಂಡು ಹೆಣ್ಣು ಕೆಟ್ಟವನ ಹಾಂಗೆ (ಹೆದರೀಪುಕ್ಕನಾಂಗೆ) ಮಾಡುಲಾಗ.... ಅದು ನಿನಗೆ ಖಂಡಿತಾ ಸೇರಿದ್ದದಲ್ಲ. ಮೋಸವಾದ ಈ ಎದೆ ಗುಂದುವದರ ಬಿಟ್ಟು ಏಳು ನೋಡುತ್ತೆ.. ನೀನು ತುಂಬಾ ತಪಶಕ್ತಿ ಇಪ್ಪವ ಅಲ್ಲದಾ......
ಅರ್ಜುನ ಹೇಳಿದ
2.4 ಆನು ಬಹುಮಾನ ಮಾಡೆಕ್ಕಾದ ಭೀಷ್ಮ, ದ್ರೋಣ ಹೇಳಿ ಎನ್ನನ್ದ ಎಷ್ಟೋ ದೊಢ್ಡವರ ಹತ್ತರೆ, ಬಿಲ್ಲು ಬಾಣಂಗಳಿಂದ ಲಡಾಯಿಮಾಡುದು ಹೇಂಗೆ..... ಕೃಷ್ಣಾ....
2.5  ದೊಢ್ಢ ಜನಂಗಳ ಮತ್ತೆ ಎನಗೆ ಕಲಿಶಿದವರ ಕೊಲ್ಲುಲೆ ಹೋಗದ್ದೆ ಭಿಕ್ಷೆ ಬೇಡಿ ಜೀವಿಸುದೇ ಲಾಯಕ. ಅವರ ಎಲ್ಲಾ ಕೊನ್ದಿಕ್ಕಿ ಅವರ ನೆತ್ತರು ಸೇರಿದ ಊಟ ಬೇಪಲೇ ಬೇಡ.
2.6 ಒಂದೋ ಅವು ಎಂಗಳ ಸೋಲುಸುಗು, ಅಲ್ಲದ್ದರೆ ಎಂಗೊ ಅವರ ಗೆಲ್ಲಿವೆಯೊ. ಇದರಲ್ಲಿ ಎವದು ಒಳ್ಳೆದು ಹೇಳಿ ಅಂದಾಜಿ ಮಾಡುಲಾವುತ್ತಿಲ್ಲೆ. ಆರ ಕೊಂದಿಕ್ಕಿ ಎಂಗೊ ಬಾಕಿಉಳಿವಲೆ ಒಂದರಿಯೂ ಗ್ರೇಶುತ್ತಿಲ್ಲೆಯೋ ಹಾಂಗಿಪ್ಪ ಎಂಗಳ ದೊಡ್ಡಪ್ಪ ಧೃತರಾಷ್ಟ್ರನ ಮಕ್ಕೊ ಈಗ ಲಡಾಯಿಗೆ ಬೈಂದವು.
2.7 ಕುಲನಾಶ ಆಗಿಹೋಕೊ ಹೇಳುವ ಹೆದರಿಕೆಯಿಂದಲೂದೆ, ಎಲ್ಲಾ ಗ್ರೇಶಿ ಬಚ್ಚುವದರಿಂದಲುದೆ ಆನೀಗ ಎಂತ ಮಾಡೆಕ್ಕಾದ್ದದು ಹೇಳುವದರಲ್ಲಿ ಸಂಶಯ ಆವುತ್ತನ್ನೆಪ್ಪ. ಎನಗೆ ಒಳ್ಲದು ಎಂತದೊ ಅದರ ನೀನೆನಗೆ ಹೇಳಿಕೊಟ್ಟು ಎನ್ನ ಒಂದಾರಿ ಬಚವು ಮಾಡೆಕ್ಕು. ಅದಕ್ಕಾಗಿ ಆನು ಒಂದು ಶಿಷ್ಯನ ಹಾಂಗೆ ನಿನ್ನತ್ತರಂಗೆ ಬೈಂದೆ.
2.8   ಈ ಭೂಮಿಲಿ ಶತ್ರುಗಳೇ ಇಲ್ಲದ್ದ ರಾಜ್ಯ ಸಿಕ್ಕಿದರುದೆ, ಎಂತಗೆ ಇನ್ದ್ರ ಪದವಿಯೇ ಸಿಕ್ಕಿದರುದೆ, ಕಣ್ಣು ಇತ್ಯಾದಿ ಇನ್ಜ್ರಿಯಂಗಳ ಎಲ್ಲಾ ಬಚ್ಚುಸುವ ಎನ್ನ ಬೇಜಾರವ ಇಲ್ಲದ್ದೆ ಮಾಡುಲೆ ಎಂತ ದಾರಿಯೂ ಗೊಂತಾವುತ್ತಿಲ್ಲೆ.
ಸಞ್ಜಯ ಹೇಳಿದ
2.9 ತುಂಬಾ ತಪಸ್ಸುಗಳ ಮಾಡಿದನ್ಥಾ ಅರ್ಜುನ, ದನಗಳ ಕಾಪಾಡುವ ಕೃಷ್ಣ ದೇವರತ್ತರೆ ಹೀಂಗೆಲ್ಲಾ ಹೇಳಿ, ಆನು ಲಡಾಯಿ ಮಾಡುಲೆ ಇಲ್ಲೆ ಹೇಳಿ ತಿಳಿಶಿಕ್ಕಿ ಮಾತಾಡದ್ದೆ ಕೂದ.
2.10 ಎ ಧೃತರಾಷ್ಟ್ರ ಅರಸನೆ, ಎರಡು ಸೈನ್ಯಂಗಳ ಎಡೆಲಿ ಬೇಜಾರಮಾಡಿಗೊಂಡಿಪ್ಪ ಅವನತ್ತರೆ ಹೃಷೀಕೇಶ ಸಣ್ಣಕ್ಕೆ ವುಗುಳು ನೆಗೆಮಾಡಿಗೊಂಡು ಹೀಂಗೆ ಮಾತಾಡಿದ.
ಶ್ರೀ ದೇವರು ಹೇಳಿದವು
2.11   ಅರ್ಜುನಾ ನೀನು ಬೇಜಾರಪಡುಲಾಗದ್ದವರ ಗ್ರೇಶಿ ಬೇಜಾರಮಾಡುತ್ತಿದ್ದೆ, ಹಾಂಗೆ ಎಲ್ಲಾ ವಿಚಾರ ಗೊಂತಿಪ್ಪವನಾಂಗೆ ಮಾತುದೆ ಆಡುತ್ತಾ ಇದ್ದೆ. ವಿಷಯಂಗಳ ತಿಳಿದವು ಸತ್ತವರಬಗ್ಗೆಯುದೆ ಜೀವಲ್ಲಿಪ್ಪವರ ಬಗ್ಗೆಯುದೆ ಗ್ರೇಶಿ ಬೇಜಾರ ಮಾಡುವ ಕ್ರಮ ಇಲ್ಲೆ.
2.12 ಆನು ಒಂದರಿಯುದೇ ಇಲ್ಲದ್ದೆ ಇತ್ತಿದ್ದಿಲ್ಲೆ ಹಾಂಗೆ ನೀನುದೆ ಒಂದರಿಯುದೇ ಇಲ್ಲದ್ದೆ ಇತ್ತಿದ್ದಿಲ್ಲೆ.(ಲಡಾಯಿಮಾಡುಲೆ ಹೇಳಿ ಬನ್ದ) ಈ ಅರಸುಗಳು ಇಲ್ಲದ್ದೆ ಇತ್ತಿದ್ದವಿಲ್ಲೆ.ನಾವಾರುದೆ ಇನ್ನು ಮುನ್ದೆ (ಮೆಯ್ ಹೋದ ನಂತರ ) ಇಲ್ಲದ್ದೆ ಆವುತ್ತವೂ ಇಲ್ಲೆ.
2.13 ಮೆಯ್ಯಿಲಿಪ್ಪ ಜೀವಕ್ಕೆ, ಹೇಂಗೆ ಮಗುವಿನ ಅವಸ್ಥೆ ಮತ್ತೆ ಜೌವನಿಗನ ಅವಸ್ಥೆ, ಮತ್ತೆ ಮುದುಕ್ಕನ ಅವಸ್ಥೆ ಎಲ್ಲಾ ಬತ್ತೋ ಹಾಂಗೆ ಅದೇ ಜೀವ ಒಂದು ಮೆಯ್ಯ ಬಿಟ್ಟು ಇನ್ನೊಂದಕ್ಕೆ ಹೋಪದು. ಇದಕ್ಕೆ ಬೇಕಾಗಿ ಬುದ್ದಿ ಇಪ್ಪವ ಅರ್ಗೆಂಟು ಮಾಡುವ ಕ್ರಮ ಇಲ್ಲೆ.
2.14 ಅರ್ಜುನಾ ನೋಡು, ಕಣ್ಮು , ಬಾಯಿ , ಕೆಮಿ, ಚೋಲಿ ಇತ್ಯಾದಿ ಕೈಕ್ಕಾಲುಗೊಕ್ಕೆ ಅದಾದರ ಸಂಗತಿಯುವಾಗಿ ಇಪ್ಪ ಬಂದ ಬೆಶಿ , ತಂಪು, ಸುಖ, ದುಃಖ ಇದರ ಎಲ್ಲ ಮಾಡುವದುದೆ ಹಾಂಗೆ ಬಂದು ಹೋಯ್ಕೊಣ್ಟು ಇಪ್ಪದುದೆ.ಏವಗಳು ಒಂದೇ ಹಾಂಗಿಲ್ಲದ್ದೆ ಬದಲುವ ಆ ಸಂಗತಿಗಳ ನೀನು ಸಹಿರ್ಸುಲೆ ಬೇಕು ಅರ್ಜುನಾ.
2.15 ಏ ಮಾಣಿಂಯಂಗಳಲ್ಲಿ ಉಶಾರಿಯಾದ ಅರ್ಜುನಾ, ಆರಿಂಗೆ ಈ ಬಂದು ಹೋಗಿ ಅಪ್ಪ ಕಾಂಬದು , ಕೇಳುವುದು ಇತ್ಯಾದಿ ಸಂಗತಿಗೊ ಬೇಜಾರ ಊಂಟುಮಾಡುತ್ತಿಲ್ಲೆಯೋ ಅವ ಸಾವೇ ಇಲ್ಲದ್ದ ಅವಸ್ಥಗೆ ಹೇಳಿದವ (ಅಧಿಕಾರಿ).
2.16 ಇಲ್ಲದ್ದದು ಒಂದರಿಯೂ ಇರುತ್ತಿಲ್ಲೆ, ಇಪ್ಪದು ಏವಗಳೂ ಇರುತ್ತು. ಇದರ ಎರಡರಲ್ಲಿ ಇಪ್ಪ ವ್ಯತ್ಯಾಸವುದೆ ನಿಜವುದೆ ಇದರ ಬಗ್ಗೆ ತಿಳುದವು ಮದಲೇ ಹೇಳಿದ್ದವು.
2.17 ಈ ಇಪ್ಪದರ ಎಲ್ಲಾ ಮಾಡಿದ್ದದುದೆ ಅದರಲ್ಲಿ ಎಲ್ಲಾ ಇಪ್ಪದುದೆ ಎಂತದೋ ಅದು ( ಬ್ರಹ್ಮ ಅಥವಾ ಆತ್ಮ ತತ್ವ) ಒಂದರಿಯುದೇ ಹಾಳಾಗದ್ದದು. ಅದರ ಹಾಳುಮಾಡುಲೆ ಆರಿಂಗುದೇ ಎಡಿಯಲೂ ಎಡಿಯ.
2.18 ಏವಾಗಳುದೆ ಇಪ್ಪವನಾದ, ಹಾಳಾಗದ್ದವನಾದ, (ಉದ್ದ, ಅಗಲ, ಬಾದಿ, ರಂಗು ಇತ್ಯಾದಿ) ಕಣ್ಣಿಂಗೆ ಕಾಂಬ ಅಳತೆಗಳಿಂದ ತಿಳಿವಲೆ ಸಾಧ್ಯವಲ್ಲದ್ದವನುದೆ ಆದ ಮೆಯ್ಯಿಲ್ಲಿಪ್ಪವನ (ಆತ್ಮನ) ಈ ಮೆಯ್ಗೊ (ಶರೀರಂಗೊ) ಅನ್ತ್ಯ ಇಪ್ಪನ್ಥವು ಹೇಳಿ ಕಾಣುತ್ತು. ಹಾಂಗಾಗಿ ಅರ್ಜುನಾ ನೀನು (ಧರ್ಮಕ್ಕಾಗಿ) ಲಡಾಯಿ ಮಾಡು.
2.19 ಆರು ಇವನ (ಈ ಆತ್ಮನ) ಕೊಂದೇ ಹೇಳಿ ತಿಳಿತ್ತವೋ,ಆರು ಇವನ (ಈ ಆತ್ಮನ) ಕೊಲೆಗಾರನಾಗಿ ತಿಳಿತ್ತವೋ ಅವು ಇಬ್ಬರುದೇ ನಿಜವ ತಿಳಿತ್ತವಿಲ್ಲೆ. ಇವ ಆರತ್ತರಿಂದಲು ಸಾಯಿತ್ತನೂ ಇಲ್ಲೆ, ಇವ ಆರನ್ನೂ ಕೊಲ್ಲುತ್ತನೂ ಇಲ್ಲೆ.
2.20 ಇವ (ಈ ಆತ್ಮ) ಮೆಯ್ಯ ಕೊಲ್ಲುವಾಗ ಒಂದರಿಯೂ ಸಾಯಿತ್ತಾ ಇಲ್ಲೆ. ಹುಟ್ಟುತ್ತನೂ ಇಲ್ಲೆ, ಸಾಯಿತ್ತನೂ ಇಲ್ಲೆ.ಇವಂಗೆ ಊಂಟಾಗಿ ಇಪ್ಪದು ಹೇಳುದು ಇಲ್ಲೆ, ಎಂತಾಳಿದರೆ, ಇವ (ಈ ಆತ್ಮ) ಹುಟ್ಟದ್ದವನುದೆ,ಏವಾಗಳೂ ಇಪ್ಪವನುದೆ,ಒಂದೇಹಾಂಗೆ ಇಪ್ಪವನುದೆ, ಮದಲಿಂದಲೇ ಇಪ್ಪವನುದೇ ಕೂಡಾ ಆಗಿದ್ದ.
2.21  ಏ ಪಾರ್ಥಾ, ಆರು ಇವನ (ಈ ಆತ್ಮನ) ಏವಾಗಳೂ ಇಪ್ಪನಾಗಿಯುದೆ, ಬದಲಾವಣೆ ಆಗದ್ದವ ಆಗಿಯುದೆ , ಹುಟ್ಟದ್ದವ ಆಗಿಯುದೆ, ಹಾಳಾಗದ್ದವ ಆಗಿಯುದೆ,ತಿಳುದ್ದನೋ ಆ ಪುರುಷ, ಆರ ಹೇಂಗೆ ಕೊಲ್ಲುವದೂ..... ಹಾಂಗೆ ಆರ ಕೊಲ್ಲುಸುವದೂ.......
2.22 ಮನುಷ್ಯ ಹೇಂಗೆ ಹಳತ್ತಾದ ಒಸ್ತ್ರಂಗಳ ಬಿಟ್ಟು ಹೊಸ ಒಸ್ತ್ರಂಗಳ ತೆಕ್ಕೊಳುತ್ತನೋ ಹಾಂಗೇ ಮೆಯ್ಯಹೊಂದಿಗೊಂಡಿಪ್ಪ (ದೇಗವ ಹೊಂದಿಗೊಂಡಿಪ್ಪ) ಆತ್ಮ, ಹಳತ್ತಾಗಿ ಹಾಳಾದ ಮೆಯ್ಯ (ಶರೀರವ) ಬಿಟ್ಟು ಬೇರೆ ಹೊಸತ್ತು ಮೆಯ್ಯ (ಶರೀರವ) ಹೊಂದುತ್ತ.
2.23 ಇವನ ಆಯುಧಂಗೊ ತುಂಡು ಮಾಡುತ್ತವಿಲ್ಲೆ, ಕಿಚ್ಚು ಇವನ ಹೊತ್ತುಸುತ್ತಿಲ್ಲೆ,ನೀರು ಇವನ ಚೆಂಡಿ ಮಾಡುತ್ತಿಲ್ಲೆ,ಗಾಳಿ ಇವನ ಒಣಗುಸುತ್ತುದೇ ಇಲ್ಲೆ.
2.24 ಈ ಆತ್ಮ, ತುಂಡಪ್ಪವನುದೆ ಅಲ್ಲ,ಹೊತ್ತಿ ಹೋಪವನುದೆ ಅಲ್ಲ,ಚೆಂಡಿ ಅಪ್ಪವನೂ ಅಲ್ಲ, ಒಣಗಿ ಹೋಪವನೂ ಅಲ್ಲ,ಎಂತಾಳಿದರೆ ಈ ಆತ್ಮ,ಎಲ್ಲಾದಿಕ್ಕೂ ಇಪ್ಪವನುದೇ,ರೂಪ ಬದಲದ್ದವನುದೆ, ಹಂದದ್ದವನುದೆ ಎವಗಳೂ ಇಪ್ಪವನುದೇ ಆಗಿ ಇಪ್ಪವ.
2.25 ಇವ (ಈ ಆತ್ಮ) ಸರಿಯಾಗಿ ಗೊಂತಪ್ಪವ ಅಲ್ಲ, ಇವನ ಸರಿಯಾಗಿ ತಿಳಿವಲುದೆ ಎಡಿಯ, ಕೈಕಾಲುಗೊ ಉಪಯೋಗಿಸಿ ಬದಲಾವಣೆ ಮಾಡುಲುದೆ ಎಡಿಯ ಹೇಳಿ ಇದ್ದ ಕಾರಣ ಹೀಂಗಿಪ್ಪವ ಇವ ಹೇಳಿ ತಿಳುದಿಕ್ಕಿ ನೀನು ಬೇಜಾರ ಪಡುದ್ದೆ ಕೂರೆಕ್ಕದ.
2.26  ಹಾಂಗಲ್ಲ , ಆತ್ಮ ಏವಾಗಳೂ ಹುಟ್ಟುವವನುದೆ ಏವಾಗಳೂ ಸಾವವನುದೆ ಹೇಳಿ ನೀನು ತಿಳುಕ್ಕೊಂಡ್ರುದೆ ಕೂಡ, ಹೀಂಗೆ ಬೇಜಾರ ಮಾಡಿಲೆ ಆಗಲೇ ಆಗ ಅರ್ಜುನಾ.
2.27 ಹುಟ್ಟಿದವಂಗೆ ಸಾವು ಖಂಡಿತಾ ಇದ್ದು. ಸತ್ತವಂಗೆ ಹುಟ್ಟುವದುದೆ ಖಂಡಿತವಾಗಿಯೂ ಇದ್ದು. ಹಾಂಗಾಗಿ ನಿವೃತ್ತಿ ಇಲ್ಲದ್ದ ಈ ಸಂಗತಿಗಾಗಿ ನೀನು ಬೇಜಾರು ಮಾಡುಲಿಲ್ಲೇ.......
2.28 ಅರ್ಜುನಾ ನೋಡು,ಈ ಶರೀರಂಗೊ ಎಲ್ಲಿಂದ ಬತ್ತು ಹೇಳುದು ಸರಿಯಾಗಿ ಗೊಂತಪ್ಪದಲ್ಲ. ನಡುಕಾಲಲ್ಲಿ ಇಪ್ಪಗ ಮಾಂತ್ರ ಸರಿಯಾಗಿ ತಿಳಿವಲೆಡಿವದು. ಎಲ್ಲಿ ಹೇಂಗೆ ಇಲ್ಲದ್ದೆ ಆವುತ್ತು ಹೇಳಿಯುದೇ ಸರಿಯಾಗಿ ಗೊಂತಪ್ಪದಲ್ಲ. ಹಾಂಗಿಪ್ಪಗ ಈ ಸಂಗತಿಲಿ ಸಂಕಟ ಪಡುದೆಂತಗೇ......
2.29 ಕೆಲವು ಜನ ಇದೆಂತದೋ ಆಶ್ತರ್ಯದ ವಸ್ತು ಹೇಳಿ ನೋಡುತ್ತವಪ್ಪ, ಬೇರೆ ಕೆಲವು ಜನ ಆಶ್ತರ್ಯವಾಗಿ ಇದರ ಬಗ್ಗೆ ಮಾತಾಡುತ್ತವು, ಇನ್ನೊಬ್ಬ ಆಶ್ತರ್ಯದ ವಸ್ತುವಿನ ಹಾಂಗೆ ಈ ಹೇಳುದರ ಕೇಳುತ್ತ. ಕೇಳಿದರುದೆ (ಕಂಡರುದೆ, ಮಾತಾಡಿದರುದೆ) ಆರುದೇ ಇವನ ಗೊಂತು ಮಾಡುತ್ತವಿಲ್ಲೆ.
2.30 ಏ ಅರ್ಜುನಾ, ಎಲ್ಲೋರ ಮೆಯಿಲಿಯುದೇ ಇಪ್ಪ ಈ ಆತ್ಮ ಕೊಲ್ಲುಲೆ ಎಡಿಗಾಗದ್ದವ.ಹಾಂಗಾಗಿ ನೀನು ಯಾವ ಜೀವಿಯ ಬಗ್ಗೆ ಗ್ರೇಯಿಸಿಯುದೆ ಬೇಜಾರು ಮಾಡುಲಿಲ್ಲೆ ಆತಾ.
2.31 ಸ್ವನ್ತ ಕೆಲಸ ಎಂತದೂ ಹೇಳಿ ತಿಳುಕ್ಕೊಂಡ ಮತ್ತೆ ಅದರಿಂದ ಬದಲುಲಿಲ್ಲೆ. ಧರ್ಮಕ್ಕೆ (ಸರಿಗೆ) ಬೇಕಾಗಿ ಮಾಡುವ ಲಡಾಯಿಗಿಂತಲೂ ಲಾಯಕವಾದ ಕೆಲಸ ಅರಸಂಗೆ (ಕ್ಷತ್ರಿಯಂಗೆ) ಬೇರೆ ಯಾವದೂ ಇಲ್ಲೆ.
2.32 ಯಾದೃಶ್ತಿಕವಾಗಿ (ಹೇಂಗೊ) ಸಿಕ್ಕಿದ ಚಾನ್ಸು (ಸನ್ದರ್ಭ) ಇದು. ಸ್ವರ್ಗಕ್ಕೆ ತೆಗದು ಮಡಿಕ್ಕೊಂಡಿಪ್ಪ ಬಾಗಿಲುದೆ ಈ ಧರ್ಮ ಯುದ್ದವೇ. ಭಾಗ್ಯ ಇಪ್ಪ ಕ್ಷತ್ರಿಯಂಗೊಕ್ಕೆ ಮಾಂತ್ರ  ಹೀಂಗಿಪ್ಪ ಧರ್ಮಯುದ್ದ ಸಿಕ್ಕುವದು.
2.33  ಒಂದು ವೇಳೆ ನೀನು ಈ ಒಳ್ಳೆದು ಮಾಡುಲೆ ಇಪ್ಪ ಲಡಾಯಿಯ (ಧರ್ಮಯುದ್ಧವ) ಮಾಡುತ್ತಿಲ್ಲೆ ಹೇಳಿದ್ದರೆ ನಿನ್ನ ಧರ್ಮವನ್ನುದೆ (ಬೇಕಾದಾಗ ಮಾಡೆಕ್ಕಾದ ಒಳ್ಳೆ ಕರ್ತವ್ಯಂಗೊ) ಕೀರ್ತಿಯನ್ನುದೆ (ಊರಿಲ್ಲಿಪ್ಪ ಒಳ್ಳೆ ಹೆಸರುದೆ) ಕೈಬಿಟ್ಟವನಾಗಿ ಪಾಪಿಯಾಗಿ ತೀರುತ್ತೆ ನೋಡು.
2.34 ಮಾಂತ್ರ ಅಲ್ಲಾ, ನಿನ್ನ ಕೆಟ್ಟ ಹೆಸರಿನನ್ನುದೆ ಊರವೆಲ್ಲಾ ಯಾವಾಗಳುದೆ ಹೇಳಿಗೊಂಡು ಬಕ್ಕು. ಸುರುವಿಂಗೆ ಸಮ್ಮಾನ ನಿಕ್ಕಿಗೊಂಡಿತ್ತಿದ್ದವಂಗೆ ಅಪಮಾನ ಸಿಕ್ಕುದು ಹೇಳುವದು ಸಾವದರಿಂದಲುದೆ ಹೆಚ್ಚು ಮೋಸವಾದ ಸಂಗತಿ.
2.35 (ಅದು ಮಾಂತ್ರವೊ) ಆರಿಂಗೆಲ್ಲಾ ನೀನು ತುಂಬಾ ದೊಡ್ಡವನಾಗಿದ್ದೆಯೋ (ಬಹುಮಾನಲ್ಲಿ) ಆ ವೀರ ಅರಸರು ಎಲ್ಲಾ, ನೀನು ಹೆದರಿ ಲಡಾಯಿ ಮಾಡದ್ದೆ ಬಚವಾದೇ ಹೇಳಿ ತಿಳುಕ್ಕೊಂಗು. ನಿನ್ನ ಬರೇ ಹೇಡಿಪ್ಪುಕ್ಕಾ ಹೇಳಿ ಅವುತ್ತೆ ಅಕ್ಕೋ.....?
2.36 ನಿನ್ನ ಆಗದ್ದವು ನಿನ್ನ, ಚುರುಕ್ಕಿನ ಬೈವಲೆ ಸುರುಮಾಡುಗು. ತುಂಬಾ ಬೇಡದ್ದದೆಲ್ಲಾ ಮಾಡಿ ಹೇಳುಗು ನೋಡು. ಅದರಿಂದ ಹೆಚ್ಚು ಕಷ್ಟವಾದ ಸಂಗತಿ ಎಂತ ಇದ್ದು ಹೇಳು ನೋಡುತ್ತೆ......?
2.37 ಏ ಅರ್ಜುನಾ, ಯುದ್ದಲ್ಲಿ ಸತ್ತು ಹೋದರೆ ಸ್ವರ್ಗ ಪಡವೆ. ಜಯಿಸಿದರಂತು ಇಡೀ ಭೂಮಿಯೇ ಸಿಕ್ಕುತ್ತನ್ನೆ. ಹಾಂಗದ ಕಾರಣ ಲಡಾಯಿ ಮಾಡುಲೆ ತೀರ್ಮಾನ ಮಾಡಿಗೊಂಡು ಎದ್ದು ನಿಲ್ಲು ಕುನ್ತಿಯ ಮಗನೆ.
2.38 ಸುಖ ಸಂಕಟಂಗಳನ್ನೂ, ಲಾಭ , ನಷ್ಟಗಳನ್ನೂ, ಗೆಲ್ಲು ಸೋಲುಗಳನ್ನೂ ತುಲ್ಯವಾಗಿ (ಒಂದೇ ಹಾಂಗೆ ತಿಳುದು) ತಿಳುದಿಕ್ಕಿ ಅದರ ಮತ್ತೆ ಲಡಾಯಿ ಮಾಡಿದೇ ಹೇಳಿದ್ದರೆ ನಿನಗೆ ಪಾಪ ಬತ್ತೇ ಇಲ್ಲೆ.
2.39 ನಿನಗೆ ಇಷ್ಟೊನ್ನಾರ ಆತ್ಮ ಮತ್ತೆ ದೆಹ – ಬೇರೆ ಬೇರೆ ಹೇಳುವ ಸಾಂಖ್ಯ ಸಿದ್ಧಾಂತದ ಪ್ರಕಾರ ಬುದ್ದಿವಾದ ಹೇಳಿದೆ. ಇನ್ನು ದೇವರ ಗೊಂತುಮಾಡಿಗೊಂಡು, ಎಂತದುದೆ ತನಗೆ ಬನ್ದು ಅಂಟದ್ದ ಹಾಂಗಿದ್ದುಗೊಂಡು ಕೆಲಸ ಮಾಡುವ ರೀತಿಯಾದ ಯೋಗ ಸಿದ್ಧಾಂತದ ಪ್ರಕಾರ ಉಪದೇಶ ಮಾಡುತ್ತೆ ಅದರ ನೀನು ಕೇಳಿಗೊ.(ಯಾವ ರೀತಿಲಿ ಚಿನ್ತೆ ಮಾಡಿದರೆ ಕೆಲಸವು ಆಗಿಪ್ಪ ನಿನ್ನ ಬನ್ಧವ ಬಿಡುವೆಯೋ ಆ ವಿಚಾರಮ ನಿನಗೆ ತಿಳಿಸುತ್ತೆ.)
2.40 ಆನಿನ್ನು ಹೇಳಿ ಕೊಡುವ (ಕರ್ಮ ಯೋಗ) ಜೀವಿತ ರೀತಿ ಸುರುಮಾಡುವದರಿಂದಾಗಿ ಎಂತದೇ ದೋಷ ಇಲ್ಲೆ ಹಾಂಗೆ ಇಡೀ ಪೂರ್ತಿ ಮಾಡಿದ್ದಿಲ್ಲೆ ಹೇಳಿ ಇಪ್ಪ ದೋಷವುದೆ ಇಲ್ಲೆ. ( ಇಷ್ಟೊನ್ನಾರ ಮಾಡದ್ದದರ ಮಾಡಿದರಿಪ್ಪ ದೋಷ ಮತ್ತೆ ತಲೆ ಎತ್ತುಸದ್ದರಿಪ್ಪ ದೋಷ ಇದೆರಡೂ ಇಲ್ಲೆ). ಈ ಜೀವಿತ ರೀತಿಯ ರಜ್ಜ ಮಾಡಿಗೊಂಡು ಬನ್ದರುದೆ ತುಂಬಾ ದೊಡ್ಡ ಹೆದರಿಕೆಗಳಿಂದ ಬಚವುಮಾಡುಗು.
2.41  ಅರ್ಜುನಾ, ದೇವರಿಂಗೆ ಸಮರ್ಪಣೆ ಮಾಡಿಗೊಂಡು ಕೆಲಸಮಾಡುವಾಗ ಚಿನ್ತೆ ಒಂದೆ ಸಂಗತಿಲಿ ನಿಲ್ಲುಗು. ಹೀಂಗಲ್ಲದ್ದೆ ಹಲವಾರು ಸಂಗತಿಗಳಲ್ಲಿ ಚಿನ್ತೆಯ (ಬುದ್ದಿಯ) ಕಬರು ಕಬರಾಗಿ ಹಂತ ಇಲ್ಲದ್ದೆ ಬಿಡುವುದು ಸಾಧಾರಣ ಜನರ ರೀತಿ.
2.42 (ದೇವರಲ್ಲಿ ಏಕಾಗ್ರವಾದ ಬುದ್ಧಿ ಆರಿಂಗೆ ಇಲ್ಲೆಯೋ ಅವು) ವೇದ ಶಾಸ್ತ್ರಂಗಳಲ್ಲಿ ಹೇಳಿದದು ಬರೇ ಸ್ವರ್ಗದ ಬಗ್ಗ ಮಾಂತ್ರ ಹೇಳಿಯುದೆ, ನಮ್ಮ ವಿದ್ಯಾಬ್ಯಾಸದಿಂದಲೂ, ಕೆಲಸಂಗಳಿಂದಲೂ ಈ ಲೋಕಲ್ಲಿ ಇಪ್ಪ ಸುಖಂಗಳ ಪಡವದೊಂದೆ ಜೀವಿತದ ಗುರಿ ಹೇಳಿ ಗ್ರೇಶಿ, ಬರೇ ಹೂಗು ಮಾಂತ್ರ ಬಿಟ್ಟು ಕಾಯಿ ಆಗದ್ದ ಮರದ ಹಾಂಗಿಪ್ಪ ಮಾತುಗಳ ಆಡುತ್ತವು. ಅವಕ್ಕೆ ಈ ಜೀವಿತಲ್ಲಿ ನಾವು ಗೊಂತುಮಾಡೆಕ್ಕಾದ, ಪಡೇಕಾದ ದೇವರ ಸಾಯೂಜ್ಯ ಒಂದಿದ್ದು ಹೇಳಿ ಒಪ್ಪುಲೆಡಿತ್ತಿಲ್ಲೆ.
2.43 ಹಾಂಗಿಪ್ಪವು ಜೀವಿತಲ್ಲಿ ಆದಷ್ಚು ಸಂಪತ್ತು ಮತ್ತು ಮತ್ತೂ ಜೋಡುಸುವದರಲ್ಲಿಯೋ ಇರುತ್ತವು. ಅದಕ್ಕೆ ಬೇಕಾಗಿ ಇಪ್ಪ ಹಲವಾರೂ ಯಾಗ , ಬೇರೆ ಬೇರೆ ಕೆಲಸಂಗೊ ಇತ್ಯಾದಿ ಮಾಡುತ್ತವು.
2.44 ಸಂಪತ್ತಿಲ್ಲಿಯುದೆ ಹಲವಾರು ಸುಖ ವಿಷಯಂಗಳಲ್ಲಿ ಮಾಂತ್ರ ಪುಖ್ಯತ್ವ ಕೊಟ್ಟು ಅದರಲ್ಲಿಯೇ ಮನಸ್ಸು ಮುಳುಗಿ ಹೋದವಕ್ಕೆ, ಅವರ ಬುದ್ದಿಯ ಗಟ್ಟಿಯಾಗಿ ಒಂದುದಿಕ್ಕೆ ನಿಲುಸುಲೆ (ದೇವರಲ್ಲಿ ಅಥವಾ ಯೋಗಲ್ಲಿ) ಎಡಿತ್ತಿಲ್ಲೆ.
2.45 ಹಲವಾರು ತರದ ಸಂಸಾರ ವಿಷಯಂಗಳನ್ನೇ ಮಾತಾಡುದು ಮನುಷ್ಯರು ಪಡವ ಕಲಿವಿಕೆಯ ಒಂದು ಸಹಜ ರೀತಿ. ಆದರೆ ನೀನಾದರೂ ಅದರಿಂದ ಹೆರ ಬರೆಕ್ಕು. ಇಲ್ಲದ್ದದರೆ ಸ್ವನ್ತಮಾಡುದು (ಪಡವದು) , ಪಡದ್ದದರ ಕಾಪಾಡುತ್ತಾ ಬಪ್ಪದೂ ಹೇಳಿಯೇ ಬಾಡಿ ಜೀವಿತ ಕಳೆಯದ್ದೆ, ನೀನು ಎವಗಳುದೆ ಒಳ್ಳೆ ಆಲೋಚನೆಯ (ಸತ್ವ ಗುಣ) ಬೆಳೆಶಿಗೊಂಡಿರೆಕ್ಕು.
2.46 ಮೀವಲೆ , ಕುಡಿವಲೆ ಎಲ್ಲಾ ಇಪ್ಪ ನೀರು ಸಿಕ್ಕುವ ಸಣ್ಣ ಸಣ್ಣ ಬಾವಿ , ಕೆರೆ ಇವು ಎಲ್ಲಾ ಮಾಡುವ ಕೆಲಸ (ಪ್ರಯೋಜನ) ಹೊಳಗೊ ಸೇರುವ ಒಂದು ದೊಡ್ಡ ಜಲಾಶಯಕ್ಕೆ (ಸರೋವರ ಅಥವಾ ತಟಾಕ) ಸಂಗತಿಯೇ ಅಲ್ಲದೋ, ಹಾಂಗೆ ಹಲವಾರು ಸಂಗತಿಗೊಕ್ಕೆ ಬೇಕಾಗಿ ಮಾಡುವ ಯಜ್ಞ ಯಾಗ, ಇತ್ಯಾದಿ ಕೆಲಸಂಗಳಿಂದ ಇಪ್ಪ ಪ್ರಯೋಜನ ದೃಢವಾಗಿ (ಗಟ್ಟಿಯಾಗಿ) ಪರಮಾತ್ಮನಲ್ಲಿ (ದೇವರಲ್ಲಿ) ಬುದ್ಧಿಯ ನಿಲುಸುವವಂಗೆ ಸಿಕ್ಕಿಯೇ ಸಿಕ್ಕುತ್ತು (ಅಥವಾ ಪಡವಲೆ ಎಂತ ತೊಂದರೆಯೂ ಇಲ್ಲೆ)
2.47 ಕೆಲಸಮಾಡುದರಲ್ಲಿ ಮಾಂತ್ರ ನಿನಗೆ ಅಧಿಕಾರ ಇಪ್ಪದು. ಅದರಿಂದಾಗಿ ಆಯೆಕ್ಕಾದ ಫಲಂಗಳಲ್ಲಿ ಯಾವಾಗಳೂ ಇಪ್ಪಲೇ ಇಲ್ಲೆ. ಒಂದರಿಯುದೆ ಫಲಂಗೊ ಸಿಕ್ಕುಲೇ ಕೆಲಸಮಾಡುದೂ ಹೇಳುವವ ಅಪ್ಪಲಿಲ್ಲೆ. ಹಾಂಗೆ ನೀನು ಕೆಲಸವ ಮಾಡದ್ದೆ ಇಪ್ಪಲುದೆ ಇಲ್ಲೆ.
2.48 ಏ ಅರ್ಜುನ, ಯೋಗಲ್ಲಿ ಇದ್ದುಗೊಂಡು (ದೇವರೊಟ್ಟಿಂಗೆ ಸೇರಿ ಇದ್ದುಗೊಂಡು ಅಥವಾ ದೇವರ ಸಾನ್ನಿದ್ಧ್ಯ ಆಲೋಚನೆ ಮಾಡುತ್ತಾ )  ಕೆಲಸದ ಪ್ರಯೋಜನ ಸಿಕ್ಕಿದ ಅವಸರಲ್ಲಿಯೂ ಸಿಕ್ಕದ್ದ ಅವಸರಲ್ಲಿಯೂ ಒಂದೇ ಹಾಂಗೆ ಗ್ರೇಶುತ್ತಾ, ಇದೆಲ್ಲಾ ಆನೇ ಮಾಡುದು , ಎನ್ನಂದಲೇ ಎಲ್ಲಾ ಸಂಗತಿಗಳೂ ಆವುತ್ತಾ ಇದ್ದೂ ಹೇಳುವ ಯೋಚನೆ ಇಲ್ಲದ್ದೆ ಕೆಲಸವ ಮಾಡೆಕ್ಕು. (ಬೇಕಪ್ಪ ಸಂಗತಿ ಆದರುದೆ ಆಗದ್ದರುದೆ ಒಂದೆ ಹಾಂಗಿಪ್ಪದಕ್ಕೆ (ಸವತ್ವ ಭಾವನೆ) ಯೋಗ ಹೇಳಿ ಹೆಸರು.  
2.49 ಏ ಸಂಪತ್ತಿನ ಗೆದ್ದವನೆ (ಅರ್ಜುನಾ), ಯೋಗಲ್ಲಿ ಇದ್ದುಗೊಂಡು ( ದೇವರ ವಿಚಾರ ಮಾಡಿಗೊಂಡು ) ಮಾಡುವ ಕೆಲಸಕ್ಕಿನ್ತ ಹಾಂಗಲ್ಲದ್ದೆ ಕೆಲಸ ಮಾಡುವ ರೀತಿ ಎಷ್ಟೋ ಕೆಳ ಮಟ್ಟಲ್ಲಿ ಇಪ್ಪದು. ದೆವರಲ್ಲಿ ಗಟ್ಟಿಗೆ (ದೃಢವಾಗಿಪ್ಪ) ಇಪ್ಪ ಬುದ್ದಿಯಲ್ಲಿ ಶರಣಾಗತನಾಗೂ, ಸಂಗತಿ ಆಗಲೇ ಬೇಕೂ ಹೇಳಿ ಕೆಲಸ ಮಾಡುವವಕ್ಕೆ ಬೇಜಾರವುದೆ, ಕಷ್ಟಂಗಳುದೆ ಮಾಂತ್ರ ಸಿಕ್ಕುಗು (ಹೊರತು ನೆಮ್ಮದಿ ಸಿಕ್ಕುತ್ತಿಲ್ಲೆ).
2.50 ಯೋಗರೀತಿಲಿ ಕೆಲಸಮಾಡುವವ ಈ ಜನ್ಮಲ್ಲಿಯೇ ಒಳ್ಳೆದರ ಫಲವನ್ನುದೆ (ಪುಣ್ಯವ) ಕೆಟ್ಟದರ ಫಲವನ್ನುದೆ (ಪಾಪವ) ಬಿಟ್ಟು ಬಿಡುತ್ತಾ. ಹಾಂಗಾಗಿ ಯೋಗರೀತಿಲಿ ಕೆಲಸ ಮಾಡಿ ಜೀವಿಸುಲೆ ಪ್ರಯತ್ನ ಮಾಡು. ಎಂತಾಳಿದರೆ ಕೆಲಸಮಾಡುವ ರೀತಿಗಳಲ್ಲಿ ಲಾಯಕಾಗಿಪ್ಪ ರೀತಿ ಯೋಗವೆ.
2.51 ಎಂತಾಳಿದರೆ, (ಸುಖ ದುಃಖಞ್ಗಳಲ್ಲಿ ) ಒಂದೇ ಹಾಂಗೆ ಬುದ್ದಿ ಇಪ್ಪವು ಕೆಲಸನ್ದ ಅಪ್ಪನ್ತಾ ಪ್ರಯೋಜನವ (ಫಲವ) ಬಿಟ್ಟು ಬಿಟ್ಟು ತುಂಬ ತಿಳುವಳಿಕೆ (ಜ್ನಾನ) ಇಪ್ಪವಾಗಿ ಬದಲಿ, ಹುಟ್ಟುದು , ಜೀವಿಸುದು ಎಲ್ಲಾ ಇಪ್ಪ ಜೀವನ ಹೇಳುವ ಗೆಂಟುಗಳಿಂದ (ಕಟ್ಟಂಗಳಿನ್ದ) ಬಿಡುವಣಿಕೆ ಆದವಾಗಿ (ವಿಮೋಚಿತರಾಗಿ)  ರೋಗ, ಬೇಜಾರ, ಕಷ್ಟ ಇತ್ಯಾದಿಗೊ ಇಲ್ಲದ್ದನ್ತಾ ಜಾಗೆಗೆ (ವಿಷ್ಣು ಪಾದಕ್ಕೆ ಅಥವಾ ಮೋಕ್ಷಕ್ಕೆ) ಹೋವುತ್ತವು.
2.52 ಯೇವಗ ನಿನ್ನ ಬುದ್ದಿ (ಅಥವಾ ವಿಚಾರ) (ಮೆಯ್ಯೇ ಅಥವಾ ಶರೀರವೇ ಅತ್ಮಾ ಹೇಳುವ ) ಅಜ್ಟಾನವ ದಾಂಟುತ್ತೋ ಅಂಬಗ ಇಷ್ಟೊನ್ನಾರ ಕೇಳಿದ್ದದರಲ್ಲಿಯೂ ಇನ್ನು ಕೇಳುವದರಲ್ಲಿಯೂ ನಿನಗೆ ತಾತ್ಪರ್ಯ ಇಲ್ಲದ್ದೆ ಆವುತ್ತು. (ವೈರಾಗ್ಯ ಉಂಟಾವುತ್ತು.).
2.53 ಹಲವಾರು ಉಪದೇಶ ಸಿದ್ಧಾಂತಂಗಳ ಕೇಳಿ ಹಾಂಗೋ ಹೀಂಗೋ ಹೇಳಿ ಗೊಂತಾಗದ್ದೆ ತಿರುಗುತ್ತಾ ಇಪ್ಪ ನಿನ್ನ ಬುದ್ದಿ ಏವಗ ದೇವರ ಧ್ಯಾನ ಅಲ್ಲದ್ದರೆ ಆತ್ಮನ ಧ್ಯಾನ ಇವಗಳಿಂದ ಒಂದೇ ದಿಕ್ಕೆ ಹಂದದ್ದೆ ನಿಲ್ಲುತ್ತೋ (ಸಮಾಧಿ ಹೇಳಿ ಆ ಅವಸ್ಥಗೆ ಹೆಸರು) ಅಂಬಗ ಮಾಂತ್ರ ನಿನಗೆ ದೇವರು ಆಗಿ ಸೇರುಲೆ ಎಡಿಗಷ್ಟೆ. (ಯೋಗವ ಪಡವಲೆ ಅಂಬಗಳೇ ಎಡಿಗಷ್ಟೆ).
ಅರ್ಜುನ ಕೇಳಿದ
2.54      ಏ ಕೇಶವಾ , ಸಮಾಧಿಲಿ ಇಪ್ಪನ್ತಾ, ಬುದ್ಧಿ (ಪ್ರಜ್ಞೆ) ಒಂದೆ ದಿಕ್ಕೆ ನಿಂನ್ದುಗೊಂಡಿಪ್ಪವನ ಲಕ್ಷಣ ಎನ್ತೆಲ್ಲಾ..... ಬುದ್ಧಿ ಆಡದ್ದೆ ನಿಂನ್ದವಙ್ ಎನ್ತರ ಮಾತಾಡುತ್ತಾ ಇರುತ್ತಾಙ್, ಹೇಂಗೆ ಕೂರುತ್ತಙ್..... ಹೇಂಗೆ ನಡೆತ್ತಾಙ್........ (ಹೇಂಗೆ ಜೀವಿಸುತ್ತಾಙ್)
ಶ್ರೀ ದೇವರು ಹೇಳಿದವು
2.55 ಏ ಪಾರ್ತ್ಥಾ, ಯಾವಾಗ ಮನಸ್ಸಿಲ್ಲಿ ಬಂಪ್ಪನ್ತಾ (ಅದು ಬೇಕು ಇದು ಬೇಕು ಹೇಳುವ) ಎಲ್ಲಾ ಕಾಮನೆಗಳನ್ನುದೆ ಇಡೀಯಾಗಿ ಬಿಡುತ್ತನೋ, ಯಾವಾಗ ತನ್ನಲ್ಲಿಯೇ ತನಾಗಿಯೇ ಸನ್ತೋಷ ಪಡುತ್ತಾ (ಇಲ್ಲದ್ದೆ ಅಪ್ಪನ್ತಾ ,ಬದಲಿಗೊಂಡೇ ಇಪ್ಪನ್ತಾ ಸಂಗತಿಗಳ ಹಿಂದೆ ಹೋಗದ್ದೆ ಇದ್ದನೋ ) ಅಂಬಗ ಅವನ ಗಟ್ಟಿಯಾಗಿ ನಿಂದುಗೊಂಡಿಪ್ಪ ಪ್ರಜ್ಞೆ (ಬುದ್ಧಿ) ಇಪ್ಪವ ಹೇಳಿ ಹೇಳುಲಕ್ಕು.
2.56      ಕಷ್ಟಂಗೊ ಬಪ್ಪಗ ಬೇಜಾರ ಪಡದ್ದ ಮನಸ್ಸಿಪ್ಪವಙ್ ,ಸುಖಾವಸ್ಥೆಲಿ ಇಪ್ಪಗ ಇದುವೇ ಇನ್ನು ಮುನ್ದೆ ಸಿಕ್ಕುತ್ತಾ ಇರೆಕ್ಕು ಹೇಳುವ ಆಗ್ರಹ ಇಲ್ಲದ್ದವ, ಪ್ರೀತಿಯನ್ನು, ಹೆದರಿಕೆಯನ್ನು , ಕೇಪವನ್ನು ಬಿಟ್ಟವನುದೆ ಆದ ಬುದ್ದಿ ಗಟ್ಟಿಯಾಗಿಪ್ಪವನ ಮುನಿ ಹೇಳಿ ದಿನುಗೋಳುತ್ತವು.
2.57  ಅರು ಎಲ್ಲಿಯೂ ಯಾವದರಲ್ಲಿಯೂ (ಸರ್ವತ್ರ – ಮಕ್ಕೊ, ಗೆಳೆಯಾದಿಗೊ, ಹೆಂಡತಿ ಅಲ್ಲ ಗಂಡ ಇವರಲ್ಲಿ) ಪ್ರೀತಿ ಇಲ್ಲದ್ದವ ಆಗಿ (ಎನ್ನದು ಇದೆಲ್ಲಾ ಹೇಳುವ ಪಾಶವ ಬಿಟ್ಟು) ಅದದು ಒಳ್ಳೆದು ಹಾಳು ಆವುತ್ತಾ ಇಪ್ಪಗ, ಒಳ್ಳೆದಕ್ಕೆಲ್ಲಾ ಲಾಯಕಾತು ಲಾಯಕಾತು ಹೇಳಿ ಜೋರು ಸನ್ತೋಷ ಪಡದ್ದೆ, ಹಾಳು ಸಂಗತಿ ನಡವಗ ಮೋಸಾತು ಮೋಸಾತು ಹೇಳಿ ಜೋರು ಸಂಕಡವು ಪಡದ್ದೆ ಇದ್ದನೋ ಅವನ ಪ್ರಜ್ಞೆ (ಚಿನ್ತಾ ಶಕ್ತಿಯಾದ ಬುದ್ಧಿ ) ಗಟ್ಟಿಯಗಿಪ್ಪದು. (ಸ್ಥಿತ ಪ್ರಜ್ಞ ಹೇಳಿ ಸಂಸ್ಕೃತಲ್ಲಿ )
2.58 ಏವಗ ಒಂದು ಆಮೆ ಅದರ ಕೈಕಾಲುಗಳ ಒಳ ಎಳೆತ್ತೋ ಹಾಂಗೆ ಒಬ್ಬ ಅವನ ಕೈ ಕೈಲು, ಕಣ್ಣು ಕೆಮಿ ಇತ್ಯಾದಿ ಶರೀರಾವಯವಂಗಳ ಅದಾದಕ್ಕೆ ಪ್ರೀತಿ ಇಪ್ಪ ಸಂಗತಿಗಳಿಂದ ಹಿಂತೆಗೆತ್ತನೋ ಹಾಂಗಿಪ್ಪವನ ಪ್ರಜ್ಞೆ ಅಲ್ಲದ್ದರೆ ವಿಚಾರಮಾಡುಲಿಪ್ಪ ಶಕ್ತಿ ಗಟ್ಟಿಯಾಗಿ ನಿನ್ದಿದು ಹೇಳಿ ತಿಳಿವಲಕ್ಕು.
2.59   ಕಾಣೆಕ್ಕಾದ್ದದರ  ಕಾಂಬದು , ಕೇಳೆಕ್ಕಾದ್ದದರ ಕೇಳುವದು, ಹೇಳೆಕ್ಕಾದ್ದದರ ಹೇಳುವದು ಹೀಂಗೆ ಶರೀರಾವಯವಂಗಳ ಬನ್ಧನ ನಿಲ್ಲುಸಿದವನ ಅವಯವಂಗೊ ಆ ಆ ಸಂಗತಿಗಳ ಬಿಟ್ಟು ಬಿಡುತ್ತವು. ಆದರೆ ಅವನ ಮನಸ್ಸಿನೀಂದ ಇಡೀಯಾಗಿ ಇಲ್ಲದ್ದೆ ಆವುತ್ತಿಲ್ಲೆ. ಆದರೆ ಬುದ್ದಿಯ ಒಂದೇ ದಿಕ್ಕೆ (ದೇವರಲ್ಲಿ ) ನಿಲುಸುದರಿಂದ ಮನಸ್ಸಲ್ಲಿಪ್ಪ ಆ ಗ್ರೇಶಾಣಂಗಳುದೆ ಇಲ್ಲದ್ದೆ ಆವುತ್ತು.
2.60 ಏ ಅರ್ಜುನಾ, ಎಂತಾಳಿದರೆ, ಬಿಡುಗಡೆಗೆ ಬೇಕಾಗಿ ಪ್ರಯತ್ನ ಮಾಡುತ್ತಾ ಇಪ್ಪ ಸಂಗತಿಗೊ ಗೊಂತಿಪ್ಪವನ ಮನಸ್ಸನ್ನು ಕೂಡಿ, (ಕಣ್ಣು , ಕೆಮಿ, ನಾಲಗೆ ಇತ್ಯಾದಿ ಶರೀರಾವಯವಂಗೊ ಅಥವಾ) ಇಂದ್ರಿಯಂಗೊ ಅಲ್ಲೋಲ ಕಲ್ಲೋಲ ಮಾಡಿ ಗಟ್ಟಿಯಾಗಿ ಎಳಕ್ಕೊಂಡು ಹೋದಿಕ್ಕುಗು.
2.61 ಹಾಂಗಾಗಿ ಆ ಎಲ್ಲಾ ಅವಯವಂಗಳನ್ನುದೆ ಸರಿಯಾಗಿ ನಿಯನ್ತ್ರಿಸಿಗೊಂಡು ಎನ್ನನ್ನೇ ನೆನಪ್ಪು ಮಾಡುತ್ತಾ ಎನ್ನಲ್ಲಿಯೇ ಮನಸ್ಸಿನ ಸೇರುಸಿಗೊಂಡು ಕೂರೆಕ್ಕು. ಆರತ್ತರೆ ಅವನವನ ಕೈಕಣ್ಣುಕಾಲುಗಳಾದಂತ್ತಾ ಇಂದ್ರಿಯಂಗೊ ವಶವಾಗಿದ್ದೊ ಅವನ ತಿಳುವಳಿಕೆ (ಅಥವಾ ಪ್ರಜ್ಞೆ ಅಥವಾ ಬುದ್ದಿ) ಗಟ್ಟಿಯಾಗಿ ನಿನ್ದುಗೊಂಡಿಕ್ಕು.
 2.62 ಸಂಗತಿಗಳನ್ನೇ ಗ್ರೇಶಿಗೊಂಡಿಪ್ಪ ಮನುಷ್ಯನ ಆ ಸಂಗತಿಲಿ ಆಸಕ್ತಿ ಬತ್ತು. (ಅದರಲ್ಲಿ ಒಂದು ಜಾತಿ ಅಂಟುವಾಂಗಪ್ಪದಕ್ಕೆ ಆಸಕ್ತಿ ಹೇಳಿ ಹೆಸರು). ಆಸಕ್ತಿಂದ್ದಾಗಿ ಅದು ಬೇಕು ಬೇಕು ಹೇಳುವ ತೋರಾಣ ಬತ್ತು. ಆ ಬೇಕು ಬೇಕು ಹೇಳುವ ತೋರಾಣಕ್ಕೆ ಏವಗ ಎಂತಾರುದೆ ತಡೆ ಬತ್ತೋ ಅಂಬಗ ತುಂಬಾ ಕೋಪ ಬತ್ತು.
2.63 ಕೋಪಂದಾಗಿ ಎಂತ ಮಾಡುಲಕ್ಕು ಆಗ ಹೇಳುವದು ಇಲ್ಲದ್ದೆ ಆವುತ್ತು. ಮತ್ತೆ ನೆಂಪಿಲ್ಲದ್ದೆ ಆವುತ್ತು. ನೆಂಪಿಲ್ಲದ್ದದರಿಂದಾಗಿ ಬುದ್ದಿ ಇಲ್ಲದ್ದೆ ಆವುತ್ತು. ಬುದ್ದಿ ಇಲ್ಲದ್ದೆ ಅಪ್ಪದರಿಂದಾಗಿ ಇಡೀ ಹಾಳಾಗಿ ತೀರುತ್ತ. (ಎಲ್ಲಾ ಸಂಗತಳುದೆ ಅಥನಾ ಜೀವಿತವೇ ಹಾಳಾವುತ್ತು.) 
2.64 ಆದರೆ, ಅವನವನ ಸ್ವಾಧೀನಲ್ಲಿಪ್ಪಂತಾ, ಮತ್ತು ವತ್ತು ಬೇಕು, ಹಾಂಗೇ ಬೇಪಲೇ ಬೇಡಾ ಹೇಳ್ಯೆಲ್ಲಾ ಎಂತ ಹಠ ಇಲ್ಲದ್ದೆ ಇಪ್ಪನ್ಥಾ ಕೈ ಕಣ್ಣು ಮೂಗು ಬಾಯಿ ಕಾಲು ಇತ್ಯಾದಿಗಳಿಂದ  ತಿಂಬದು ಉಂಬದು ಕಾಂಬದು ಕೇಳುದು ಮಾತನಾಡುದು ಇತ್ಯಾದಿ ಸಂಗತಿಗೊ ನಡೆಸುತ್ತಾ ಬನ್ದರುದೇ ಗಟ್ಚಿಯಾಗಿ ಮನಸ್ಸಿಪ್ಪವಙ್ ಮನಸ್ಸಮಾಧಾನವನ್ನೇ (ಸನ್ತೋಷವ) ಹೊಂದುತ್ತಾ.
2.65 ಮನಸ್ಸಮಾಧಾನ (ಸನ್ತೋಷ) ಇಪ್ಪದರಿಂದಾಗಿ ಎಲ್ಲಾ ಬೇಜಾರವುದೆ ಇಲ್ಲದ್ದೆ ಆವುತ್ತು. ಹೇಂಗೇಳಿದರೆ ಶಾನ್ತವಾದ ವನಸ್ಸಿಪ್ಪವನ ಬುದ್ದಿ ಪಕ್ಕ ಒಂದುದಿಕ್ಕೆ ನಿಂದಲ್ಲೇ ನಿಲ್ಲುತ್ತು.
2.66 ಅವನವನ ಕೈ ಕಣ್ಣು ಕಾಲು ಬಾಯಿ ಇತ್ಯಾದಿಗೊ ವಶಲ್ಲಿ ಇಲ್ಲದ್ದವಂಗೆ ಒಪ್ಪ ಬುದ್ದಿ (ಸರಿ ಎಂತರ ತಪ್ಪೆಂತರ ಹೇಳಿ ತಿಳಿವಲಿಪ್ಪ ಚಿಂತಾ ಶಕ್ತಿ) ಇರುತ್ತೇ ಇಲ್ಲೆ. ಕೈ ಕಣ್ಣು ಕಾಲುಗಳಾದ ಇಂದ್ರಿಯಂಗೊ ತನ್ನ ವಶ ಇಲ್ಲದ್ದವಂಗೆ ದೇವರ ಬಗ್ಗೆ ಗ್ರೇಶುಲುದೆ ಎಡಿತ್ತಿಲ್ಲೆ. ದೇವರ ಬಗ್ಗೆ (ಆತ್ಮನ ಬಗ್ಗೆ) ಗ್ರೇಶದ್ದವಂಗೆ ಮನಸ್ಸು ಒಂದುದಿಕ್ಕೆ ನಿಲ್ಲುತ್ತಿಲ್ಲೆ (ಶಾಂತಿ ಸಿಕ್ಕುತ್ತಿಲ್ಲೆ). ಮನಸ್ಸು ಒಂದುದಿಕ್ಕೆ ನಿಲ್ಲದ್ದವಂಗೆ ಹೇಂಗೆ ಎಲ್ಲಂದ್ದ ಸುಖ ಸಿಕ್ಕುದು?
2.67  ಎಂತದೇ ನಿಯನ್ತ್ರಣ ಇಲ್ಲದ್ದೆ ಅದರ ಅದರ ಸಂಗತಿಗಳ ಹಿಂದೆ ಹೋವುತ್ತಾ ಇಪ್ಪ ಶರೀರಾವಯವ (ಕಣ್ಣು ಕಾಲು ಬಾಯಿ ನಾಲಗೆ ಕೆಮಿ ಇತ್ಯಾದಿ) ಇಪ್ಪವನ ಮನಸ್ಸು ಅದರಲ್ಲಿ ಏವದಾದರು ಒಂದು ಇಂದ್ರಿಯಕ್ಕೆ ವಶಪಟ್ಟು ಹೋದರೇ ಸಮುದ್ರಲ್ಲಿ ಹಡಗಿನ ಗಾಳಿ ಬಲುಗಿಗೊಂಡು ಹೋಪ ಹಾಂಗೆ ಎಲ್ಲಿಗಾರೆಲ್ಲಾ ಬಲುಗಿಗೊಂಡು ಹೋಕು. (ಅಂಬಗ ಮತ್ತೆ ಎಲ್ಲಾ ಇಂದ್ರಿಯಂಗಳುದೆ ಸೇರಿದರೆ ಇಪ್ಪ ಅವಸ್ತೆ ಹೇಳೆಡ ಅನ್ನೆ)
2.68 ಏ ದೊಡ್ಡ ಕೈಗೊ ಇಪ್ಪವನೇ (ಅರ್ಜುನಾ) , ಹಾಂಗಾದ ಕಾರಣ ಆರ ಅವಯವಂಗೊ ಯಾವಾಗಳುದೆ ಎಲ್ಲಾ ಇಂದ್ರಿಯೆಂಗಳ ಸಂಗತಿ (ವಿಷಯಂಗೊ) ಗಳಿಂದಲೂ ಬಿಡುಸಿ ಮಡುಗಿದಾಂಗಿದ್ದೋ ಅವನ ಬುದ್ದಿ (ತಿಳುವಳಿಕೆ) ಒಂದೇದಿಕ್ಕೆ ಗಟ್ಟಿಯಾಗಿಯೇ ಇಕ್ಕು.
2.69 ಏವ ಸಮಯಲ್ಲಿ ಎಲ್ಲಾ ಜನ್ತುಗೊಕ್ಕುದೆ ಇರುಳಪ್ಪಗ ಆವುತ್ತೊ ಅಂಬಗ ದೇವರ ಧ್ಯಾನ ಮಾಡಿ ಎಲ್ಲಾ ಇಂದ್ರಿಯಂಗಳನ್ನು ನಿಯಂತ್ರಿಸಿದವ ಎಚ್ಚೆರಿಗೆಲಿ ಇರುತ್ತಾ. ಏವ ಸಮಯ ಎಲ್ಲಾ ಜನ್ತುಗಳುದೆ ಹಗಲು ಹೇಳಿ ಎಚ್ಚೆರಿಗೆಲಿ ಇರುತ್ತವೋ ಅಂಬಗ ಮುನಿಗೆ ಇರುಳಿನಹಾಂಗೆ ತೋರುತ್ತು. (ಆತ್ಮ ತತ್ವ ವಿಚಾರಮಾಡುವದರಲ್ಲಿ ಸಾಧಾರಜನ ವಿಮುಖರಾಗಿ ಇಪ್ಪಗ ಯೋಗಿಯಾಗಿ ಇಪ್ಪವ ತುಂಬಾ ತಾತ್ಪರ್ಯ ತೋರುಸುತ್ತ. ಆದರೆ ಸಾಮಾನ್ಯ ಲೋಕದ ಜನ ತಾತ್ಪರ್ಯ ತೋರುಸುವ ಲೌಕಿಕ ವ್ಯವಹಾರಲ್ಲಿ ಯೋಗಿ ವಿಮುಖನಾಗಿಯೇ ಇರುತ್ತ.)
2.70 ನೀರು ತುಂಬಿಗೊಂಡಿಪ್ಪ ಎಳಗದ್ದನ್ಥಾ ಒಂದೇ ದಿಕ್ಕೆ ನಿನ್ದುಗೊಂಡಿಪ್ಪನ್ಥಾ ಸಮುದ್ರಕ್ಕೆ ಹೇಂಗೆ ಹಲವಾರು ಹೊಳೆಗೊ ಬಂದು ಸೇರುತ್ತಾ ಇಪ್ಪದು ಹಾಂಗೆ ಬೇಕಾದ ಎಲ್ಲಾ ಸಂಗತಿಗಳುದೆ ಆರತ್ತರಂಗೆ (ಬೇಕೂ ಹೇಳಿ ಗ್ರೇಶದ್ದರುದೇ) ಬಂದು ಸೇರುತ್ತೋ ಹಾಂಗಿಪ್ಪವ ಶಾನ್ತಿಯ (ಮೋಕ್ಷವ) ಹೊಂದುತ್ತಾಙ್, ಅಲ್ಲದ್ದೆ ಎನಗಿದು ಬೇಕು ಎನಗದು ಬೇಕೂ ಹೇಳಿ ಸಂಗತಿಗಳ ಹಿಂಗದೇ ಹೋಪವ ಶಾನ್ತಿಯ (ಮೋಕ್ಷವ) ಹೊಂದುತ್ತಾ ಇಲ್ಲೆ.
2.71 ಎವ ಒಬ್ಹ ಮನುಷ್ಯ, ಎಲ್ಲಾ ಬೇಕು ಹೇಳುವ ವಿಚಾರಂಗಳನ್ನೂ ಬಿಟ್ಟು ಎಂತರಲ್ಲಿಯುದೆ ಇದೆನಗೆ ಬೇಕು ಹೇಳುವ ಆಗ್ರಹ ಇಲ್ಲದ್ದೆ ಎಂತರಲ್ಲಿಯುದೆ ಎನ್ನದು ಎನ್ನದು ಹೇಳುದೋ ಎನ್ನಂದಾಗಿ ಎನಗಾಗಿ ಹೇಳುದೋ ಇಲ್ಲದ್ದೆ ಜೀವಿಸುತ್ತನೋ ಅವ ಶಾನ್ತಿಯ ಪಡೆತ್ತಾ (ಅಥವಾ ಮೋಕ್ಷವ ಹೊಂದುತ್ತಾಙ್)
2.72 ಏ ಅರ್ಜುನಾ ಇದುವೇ ದೇವರಲ್ಲಿ ಇಪ್ಪನ್ಥಾ ಅವಸ್ತೆ (ಬ್ರಹ್ಮ ನಿಷ್ಠೆ). ಈ ಅವಸ್ಥೆಗೆ ಎತ್ತಿದವಂಗೆ ಸಂಸಾರದ (ಜೀವನದ) ಎಂತ ತೊಂದರೆಯುದೇ ನಾಟುತ್ತಿಲ್ಲೆ.ಎಂತಕೆ ಅಷ್ಟೇ ಹೇಳುದು, ಸಾವ ಸನ್ದರ್ಭಲ್ಲಿ ಆದರುದೆ ಈ ದೇವರಲ್ಲಿ ಇಪ್ಪ ಅವಸ್ಥೆಗೆ (ಬ್ರಹ್ಮ ನಿಷ್ಠೆಗೆ) ಎತ್ತಿದವ ದೇವರಲ್ಲಿಯೇ ಲಯವ ಹೊಂದುತ್ತಾಙ್. (ಬ್ರಹ್ಮ ಹೇಳುವ ಸಂಸ್ಕೃತ ಪದಕ್ಕೆ ದೇವರು ಹೇಳಿ ಸಾಮಾನ್ಯಾರ್ಥ ತೆಕ್ಕೊಂಡದು).
-ಹೀಂಗೆ ದೇವರ ಮಾತುಗಳಾದ ಉಪನಿಷತ್ತುಗಳಲ್ಲಿ ದೇವರ ಬಗ್ಗೆ ಇಪ್ಪ ತಿಳುವಳಿಕೆಲಿ ದೇವರೊಟ್ಟಿಂಗೆ ಸೇರುವ ರೀತಿಗಳ ಶಾಸ್ತ್ರಲ್ಲಿ ಶ್ರೀ ಕೃಷ್ಣ ಅರ್ಜುನ ಇವರ ಪಂಚಾಯತಿಗೆಲಿ ಆತ್ಮ ಸ್ಥಿರ ಶರೀರ ತಾತ್ಕಾಲಿಕ ಹಾಂಗಾಗಿ ಆತ್ಮನನ್ನು ತಿಳಿಯೆಕ್ಕು ಹೇಳುವ (ಸಾಂಖ್ಯ ಯೋಗ) ಎರಡನೇ ಅಧ್ಯಾಯ ಮುಗುದತ್ತು-

No comments:

Post a Comment