Wednesday, August 14, 2013

ದೇವರ ಮಾತು – ಆರನೆ ಅದ್ಯಾಯ – 6th Chapter of The Divine Message



ದೇವರ ಮಾತು – ಆರನೆ ಅದ್ಯಾಯ –
ದೇವರು ಹೇಳಿದವು
6.1 ಕೆಲಸಂದ ಅಪ್ಪ ಫಲವ ಆಶ್ರಯಿಸದ್ದೆ ಮಾಡೆಕ್ಕಾದ ಕೆಲಸಂಗಳ (ಅಥವಾ ಕರ್ತವ್ಯಂಗಳ) ಆರು ಮಾಡುತ್ತನೋ ಆವನೇ ನಿಜವಾದ ಯೋಗಿಯುದೆ ನಿಜವಾದ ಸನ್ಯಾಸಿಯುದೆ ಎಲ್ಲಾ, ಅಲ್ಲದ್ದೆ ಪೂಜೆ ಪುನಸ್ಕಾರಂಗಳ ಬಿಟ್ಟವನೋ , ಅವನವ ಮಾಡೆಕ್ಕಾದ ಕರ್ತವ್ಯಂಗಳ ಬಿಟ್ಟವನೋ ಅಲ್ಲ.
6.2 ಅರ್ಜುನಾ (ಪಾಂಡುವಿನ ಮಗನೇ), ಎವ ಒಂದು ಜೀವಿತರೀತಿಯ ಸನ್ಯಾಸಹೇಳಿ ದಿನುಗೋಳುದು ಹೇಳಿದರೆ ಅದು ಯೋಗವನ್ನೇ ಹೇಳಿ ತಿಳುಕ್ಕೊ. ಎತಾಳಿದರೆ ಮನಸ್ಸಿಲ್ಲಿ ಬತ್ತಾ ಇಪ್ಪಂಥಾ - ಮುಂದಾಣ ಜೀವಿತಲ್ಲಿ ಪಡೇಕಾದ ಸುಖಂಗಳ ಬಗ್ಗೆ ಇಪ್ಪ ವಿಚಾರಂಗಳ ಬಿಡದ್ದವಂಗೆ ಯೋಗಿ ಅಪ್ಪಲೆ ಎಡಿಯಲೇ ಎಡಿಯ.
6.3 ದೇವರು ಆಗಿ ಅಥವಾ ಜ್ಞಾನವುದೆ ಆಗಿ ಸೇರೆಕ್ಕು ಹೊಂದೆಕ್ಕು ಹೇಳಿ ಇಪ್ಪವಂಗೆ ಸುರುವಾಣ ಕೆಲಸ ಸತ್ಕರ್ಮಂಗಳ ಮಾಡುವುದೆ. ಸತ್ಕರ್ಮಂಗಳ ಮಾಡಿ ಗಟ್ಟಿಯಾದವಂಗೆ ಮುಂದಾಣ ದಾರಿಗಾಗಿ ಅದರ ಕಮ್ಮಿಮಾಡಿಗೊಂಡು ಬರೆಕ್ಕಾವುತ್ತು.
6.4 ಎವಗ ಒಬ್ಬ ಜೀವಿತಲ್ಲಿ ಪಡೇಕಾದ ಸಂಗತಿಗಳ ವಿಚಾರಂಗಳ ಕಮ್ಮಿ ಮಾಡುತ್ತನೋ ಕಣ್ಣು ಕೆಮಿ ಇತ್ಯಾದಿಗಳ ವಿಷಯವಾದ ಕಾಂಬದು ಕೇಳುದು ರುಚಿಸುವದು ಮುಟ್ಟುವದು ಪರಿಮಳಂಗಳ ಮೂಸುವದು ಇತ್ಯಾದಿಗಳಲ್ಲಿ ಹೆಚ್ಚಿಗೆ ತಾತ್ಪರ್ಯ ಮಾಡುತ್ತಾ ಇಲ್ಲೆಯೋ ಕೆಲಸಂಗಳಲ್ಲಿಯುದೆ ಜೋರಾದ ಆಸಕ್ತಿಯ ಮಡುಗುತ್ತಾ ಇಲ್ಲೆಯೋ ಅಂಬಗ ಅವನ ಯೋಗಲ್ಲಿ ಪಕ್ವತೆ ಬಂದವ ಹೇಳಿ ತಿಳಿವಲಕ್ಕು.
6.5 ಅವನವನ ಅವನವನೇ ಸರಿಮಾಡಿ ಸರಿಮಾಡಿ ಮೇಗೆ ಮೇಗೆ ಬರುಸೆಕ್ಕು. ಒಂದರಿಯುದೆ ತನ್ನ ತಾನೇ ಕೆಳಗಿಳಿಸುಲಿಲ್ಲೆ. ಎಂತಾಳಿದರೆ ತನಗೆ ತಾನೇ ಬೇಕಾದವ (ಬಂದು), ಹಾಂಗೇ ತನಗೆ ಶತ್ರುವುದೆ ತಾನೇ.
6.6 ಎವ ಆತ್ಮ (ತಾನು) ದೇಹಲ್ಲಿಪ್ಪ ತನ್ನ ಸರಿಯಾಗಿ ಜಯಿಸಿದ್ದೋ ಅವ ಅವಂಗೆ ಬನ್ದು. ಆರು ತನ್ನ ಕಣ್ಣು ಕೆಮಿ ಇತ್ಯಾದಿಗಳ ಜಯಿಸಿದ್ದಾ ಇಲ್ಲೆಯೋ ಅವ ತನಗೆ ತಾನೇ ಹಾಳುಮಾಡುವವನಾಗಿ ಶತ್ರುವಾಗಿ ತೀರುತ್ತಾ.
6.7 ತನ್ನ ಗೆದ್ದವನಾಗಿ ಹಾಂಗಾದಕಾರಣ ಚಳಿಕಾಲ ಬೆಶಿಕಾಲ ಸುಫಾನುಭವಂಗೊ, ದುಃಖಾನುಭವಂಗೊ, ಜನ ಮಾನಿಸುವ ಮತ್ತೆ ಅಪಮಾನಿಸುವ ಸನ್ದರ್ಭಂಗಳಲ್ಲಿ ಪ್ರಶಾನ್ತನಾಗಿಪ್ಪವನ ಆತ್ಮ ಅಥವಾ ಅನ್ತಕ್ಕರಣ ತುಂಬಾ ಸಮಾಧಾನವಾಗಿ ಶಾನ್ತವಾಗಿ ಇರುತ್ತು.
6.8 ಉಪದೇಶಂಗಳ ಕೇಳಿಯುದೇ ಪುಸ್ತಕಾದಿಗೊ ಓದಿಯುದೇ ಸಿಕ್ಕಿದ ತಿಳುವಳಿಕೆಯಿಂದಲು, ಅಭ್ಯಾಸಮಾಡಿ ತನ್ನಲ್ಲಿಯೇ ಬನ್ದ ತಿಳುವಳಿಕೆಯಿಂದಲು ತೃಪ್ತಿಯಾಗಿಪ್ಪಂಥಾ ಕೋಪ ಬೇಜಾರಾದಿಗೊ ಇಲ್ಲದ್ದಂಥಾ ಕೈಕಾಲುಗಳ ಗೆದ್ದವನಾದ ಯೋಗಿ ಕಲ್ಲು ಮರ ಮಣ್ಣು ಚಿನ್ನ ಇದರ ಎಲ್ಲಾ ಒಂದೇ ಹಾಂಗೆ ನೋಡುವವನಾಗಿಪ್ಪವ ದೇವರೊಟ್ಟೆಂಗೆ ಯೋಗಲ್ಲಿ ಹತ್ತಿ ಕೂದವ ಹೇಳಿ ದಿನುಗೋಳುಲಕ್ಕು.
   6.9  ಉಪಕಾರ ಮಾಡುವವ, ಗೆಳೆಯ, ವಿರೋಧಿ, ಆರ ಒಟ್ಟಿಂಗುದೆ ಸೇರದ್ದವ, ಎರಡು ಪಕ್ಷಗಳ ಮಧ್ಯಸ್ಷ, ತನಗೆ ಇಷ್ಟವಲ್ಲದ್ದದರ ಮಾಡುವವ, ಸನ್ದು ಬನ್ದು, ಇವರಲ್ಲಿ ಎಲ್ಲೋರಲ್ಲಿಯುದೆ ಹಾಂಗೆ       ಒಳ್ಳೆ ರೀತಿಲಿ ಜೀವಿಸುವವರತ್ತರೂ ತಪ್ಪಾದ ರೀತಿಲಿ ಜೀವಿಸುವವರತ್ತರೂ ಒಂದೇ ಹಾಂಗಿಪ್ಪವ ತುಂಬಾ ಒಳ್ಳೆಯವ ಆವುತ್ತ.
6.10 (ಅದಕ್ಕಾಗಿ)  (ತನಗೆ ಶ್ರೇಯಸ್ಸಾಯೆಕು ಹೇಳಿಪ್ಪವ ಇನ್ನು ಮುಂದೆ ಹೇಳುವ ರೀತಿಲಿ ಯೋಗಾಭ್ಯಾಸ ಮಾಡೆಕ್ಕು) ಏವಗಳುದೆ ಆರು ಇಲ್ಲದ್ದ ಜಾಗೆಲಿ ಒಬ್ನನೇ ಕೂದುಗೊಂಡು ಮನಸ್ಸು ಶರೀರದ ಕೈಕಾಲುಗಳಾದ ಇಂದ್ರಿಯಂಗಳ ನಿಯಂತ್ರಿಸಿ  ಎಂತದುದೆ ಆಗ್ರಹಿಸದ್ದೆ ಎಂತರನ್ನುದೆ ತನಗೆ ಹೇಳಿ ಕಟ್ಟಿ ಮಡುಗದ್ದವನಾಗಿ ತನ್ನನ್ನು (ದೇವರೊಟ್ಟಿಂಗೆ) ಸೇರುಸೆಕ್ಕು.
6.11 – 6.12 (ಧ್ಯಾನ ಹೇಂಗೆ ಮಾಡೆಕ್ಕು ಹೇಳುದರ ಸರಳವಾದ ರೀತಿ ದೇವರು ನಮಗೆ ಈಗ ಇಲ್ಲಿ ಹೇಳಿ ಕೊಡುತ್ತವು) ಕುರೆ ಇಲ್ಲದ್ದ ಹಾಂಗೆ ಎತ್ತರ ತಗ್ಗಿಲ್ಲದ್ದ ಚಾಪೆ ಅಥವಾ ಜಂಬುಕಾನ ಇತ್ಯಾದಿ ಹಾಸಿದ ಒಂದು ಜಾಗೆಲಿ ತಾನು ಕೂದುಗೊಂಡು ಮನಸ್ಸಿನ
ಒಂದರಲ್ಲಿಯೇ ನೆಲೆನಿಲುಸಿ (ಎಕಾಗ್ರವಾಗಿ) ಮನಸ್ಸನ್ನುದೆ ಶರೀರಾವವಯವಂಗಳನ್ನುದೆ ಅಡಗಿಸಿ ತನ್ನ ಲಾಯಕಮಾಡಿಲಾಗಿ ಯೋಗವನ್ನು ಮಾಡೆಕ್ಕು.
6.13 -6.14 ತನ್ನ ದೇಹ, ಕೊರಳು ಮತ್ತೆ ತಲೆಯ ಹಂದದ್ದೆ ಗಟ್ಟಿಗೆ ನೇರ್ಪ ನಿಲುಸಿ, ಸುತ್ತು ಮುತ್ತಲು ನೋಡದ್ದೆ ತನ್ನದೇ ಮೂಗಿನ ತುದಿಗೆ ನೋಡುವ ಹಾಂಗೆ (ತುದಿಗೆ ಮಾಂತ್ರ ನೋಡೆಕ್ಕು ಹೇಳಿ ಅಲ್ಲ) ನಿಲುಸಿ, ಪ್ರಶಾನ್ತವಾಗಿ ಹೆದರಿಕೆ ಇಲ್ಲದ್ದೆ, ಕಲಿವಿಕೆ ಮಾಡುವ ಬ್ರಹ್ಮಚಾರಿಯಾಂಗೆ ಜೀವಿಸಿಗೊಂಡು ಮನಸ್ಸಿನ ನಿಯಂತ್ರಿಸಿ ಎನ್ನ ಪ್ರೀತಿಯಿಂದ ಗ್ರೇಶಿಗೋಂಡು ಆನೇ ಅತ್ಯಂತ ಮುಖ್ಯವಾದ ಲಕ್ಷ್ಯ ಹೇಳಿ ತಿಳುಕ್ಕೋಂಡು ಕೂರೆಕ್ಕು.
6.15 ಹೀಂಗೆ ( ಈಗ ವಿವರಿಸಿದ ರೀತಿಲಿ) ಮನಸ್ಸಿನ ನಿಯಂತ್ರಣ ಮಾಡಿಗೊಂಡು ತನ್ನ ಒಳಜ್ಜಿವವನ್ನು ಯೋಗರೀತಿಲಿ ಎನ್ನೊಟ್ಟಿಂಗೆ ಸೇರುಸಿಗೊಂಡಿಪ್ಪ ಯೋಗಿ , ಎನ್ನಲ್ಲಿಪ್ಪನ್ಥಾ ಹಾಂಗೆ ಮೋಕ್ಷವೆ ನನ್ತರಾಣ ಅವಸ್ಶೆ ಹೇಳಿಪ್ಪ ಶಾನ್ತವಾದ ಅವಸ್ಥೆಯ ಅನುಭವಿಸುತ್ತಾ.
6.16 ಒಂದು ಲೆಕ್ಕಂದ ಹೆಚ್ಚಿಗುಂಬವಂಗೆ ದೇವರೊಟ್ಟಿಂಗೆ ಹೊಂದುವ ಯೋಗಮಾಡುಲೆಡಿಯ. ಎನೂ ಉಣ್ಣದ್ದೇ ಇಪ್ಪವಂಗುದೆ ಎಡಿಯ. ಒರಗದ್ದೇ ಇಪ್ಪವಂಗುದೆ ಯೋಗಭ್ಯಾಸ ಮಾಡುಲೆಡಿಯ ಅದೇ ತರ ಏವಗಳುದೆ ಒರಗುವವಂಗುದೇ ಎಡಿಯಲೇ ಎಡಿಯ.
6.17 ಶರೀರಕ್ಕೆ ಬೇಕಾದಷ್ಟೇ ಉಂಬವಂಗುದೆ ಆವಶ್ಯ ಇಪ್ಪಷ್ಚು ಮಾಂತ್ರ ಮಾತುಕತೆ ಮಾಡುವವಂಗುದೆ ಸರಿಯಾದ ಅಳತೆಲಿ ಒರಗಿ ಎದ್ದು ಮಾಡುವವಂಗುದೆ (ದೇವರ ಅಥವಾ ಆತ್ಮನ) ಧ್ಯಾನ ಯೋಗ ದುಃಖವ ಇಲ್ಲದ್ದೆ ಮಾಡುವದಾಗಿ ತೀರುತ್ತು.
6.18 ಎವಗ ನಿಯಂತ್ರಣ ಮಾಡಿಗೊಂಡಿಪ್ಪಂಥಾ ಮನಸ್ಸು ತನ್ನಲ್ಲಿಯೇ ನಿಂದುಗೊಂಡಿರುತ್ತೋ ಅದು ಬೇಕು ಇದು ಬೇಕು ಹೇಳುವ ಹಲವಾರು ಕಾಮಂಗಳಿಂದ ಬಿಟ್ಟು ನಿಲ್ಲುತ್ತೋ ಅಂಬಗ ಅವನ ಯೋಗರೀತಿಲಿ ಸರಿಯಾಗಿ ಮುಂದುವರಿತ್ತಾ ಇದ್ದ ಹೇಳಿ ಗೊಂತುಮಾಡುಲಕ್ಕು.
6.19 ಗಾಳಿ ಇಲ್ಲದ್ದ ದಿಕ್ಕೆ ಹೊತ್ತಿಂಗೊಂಡಿಪ್ಪ ದೀಪ ಹೇಂಗೆ ಆಡದ್ದೇ ಇರುತ್ತೋ ಅದೇ ತರ ತನ್ನಲ್ಲಿಯೇ ಧ್ಯಾನ ಯೋಗ ಅಭ್ಯಾಸ ಮಾಡುವವನ ಮನಸ್ಸುದೇ ಎಳಗದ್ದೇ ಇರುತ್ತು.
6.20 ಯೋಗಾಭ್ಯಾಸ ಮಾಡಿದ್ದರಿಂದಲಾಗಿ ಆಡದ್ದಂಥಾ ಮನಸ್ಸು ಎಲ್ಲಿ ಸಮಾಧಾನಲ್ಲಿರುತ್ತೋ , ಎಲ್ಲಿ ತಾನಾಗಿಯೇ ತನ್ನಲ್ಲಿಯೇ ತನ್ನನ್ನು ಕಂಡುಗೊಂಡು ಸನ್ತೇಷ ಪಡುತ್ತೋ (ಆ ಅವಸ್ಷೆಯೇ ಯೋಗ - ಶ್ಲೋ.6.23)
6.21   ಏವ ಒಂದು ಅವಸ್ಷೆಲಿ ಈ ಯೋಗಿ ಕಣ್ಣು ಕೆಮಿ ಇತ್ಯಾದಿಗೊಕ್ಕೆ ಗೊಂತಾಗದ್ದದುದೇ ಬುದ್ದಿಯಿಂದಲಾಗಿ ಮಾಂತ್ರ ಗೊಂತಪ್ಪನ್ತಾದ್ದುದೇ ಆದ ಆ ಮುಗಿಯದ್ದಂಥಾ ಸೌಖ್ಯವ ಅನುಭವಿಸುತ್ತೋ ಏವ ಅವಸ್ಷೆಲಿ ನಿಂದುಗೊಂಡು ತನ್ನಿಂದ ಬದಲುತ್ತನೇ ಇಲ್ಲೆಯೋ (ಬಾಕಿ ಶ್ಲೋಕ 6.23)
6.22 ಎವದರ ಸಿಕ್ಕಿದರೆ ಇನ್ನೊಂದು ವಿಷಯದ ಲಾಭವು ದೊಡ್ಡದ್ದು ಹೇಳಿ ತೋರುತ್ತಿಲ್ಲೆಯೋ ಏವ ಅವಸ್ಷೆಲಿ ಇದ್ದರೆ ತುಂಬಾ ಹೆಚ್ಚಾದ ಬೇಜಾರದ ಸಂಗತಿಂದಲಾಗಿ ಕೂಡಾ ಎಳಗುತ್ತಿಲ್ಲೆಯೋ ( ಬಾಕಿ ಶ್ಲೋ.6.23)
6.23 ಜೀವಿತದ ದುಃಖಂಗಳಿನ್ದ ಬಿಡುಗಡೆ ಕೊಡುವ ಆ ಸಂಗತಿಯೇ ಯೋಗ ಹೇಳಿ ನೀನು ಗೊಂತುಮಾಡು. ಹಾಂಗಿಪ್ಪ ಯೊಗವ ದೃಢನಿಶ್ಚಯಮಾಡಿ ಅಲ್ಲಾಡದ್ದ ಮನಸ್ಸು ಮಡಿಕ್ಕೊಂಡು ಮಾಡಿಗೊಂಡುಬರೆಕ್ಕು.
(ಅದು ಮಾಡುವಗ ಎಂತೆಲ್ಲ ಮುನ್ನೆಚ್ಚೆರಿಕೆ ತೆಕ್ಕೊಳ್ಳೆಕ್ಕು ಹೇಳಿ ಇನ್ನಾಣ ಶ್ಲೋಕಂಗಳಲ್ಲಿ ತಿಳಿಶುತ್ತವು)
6.24 ಮನಸ್ಸಿಲ್ಲಿ ಮೂಡಿಬಪ್ಪಂಥಾ ತೀರುಮಾನಂಗಳಿಂದ ಉದ್ಭವ ಅಪ್ಪ ಅದು ಬೇಕು ಇದು ಬೇಕು ಹೇಳುವ ಆಸೆಗಳ ಕೈಬಿಟ್ಟು ಮನಸ್ಸಿಂದಲೇ ಕೈಕಾಲು ಕಣ್ಣಿ ಕೆಮಿ ಇತ್ಯಾದಿಗಳ ಅದಾದರ ಸಂಗತಿಗಳಿಂದ ಹಿಂದಿರುಗಿಸಿ ಯೋಗವ ಮಾಡಿಗೊಂಡು ಬರೆಕ್ಕು.
6.25 ಗಟ್ಟಿಗೆ ಹಿಡುದುಮಡಿಗಿದ ಬುದ್ದಿಯ ಉಪಯೋಗಿಸಿ ಮನಸ್ಸಿನ ಆತ್ಮನಲ್ಲಿ (ತನ್ನಲ್ಲಿಯೇ) ನಿಲ್ಲುಸಿ ಮೆಲ್ಲಂಗೆ ಮೆಲ್ಲಂಗೆ ಹೆರಾಣಸಂಗತಿಗಳಿಂದ ಬಿಡುಗಡೆ ಅಯೆಕ್ಕು. ಮತ್ತೆಂತದು ಚಿಂತೆಮಾಡುಲಾಗ.
6.26 ಒಂದುದಿಕ್ಕೆ ನಿಂದು ಗೊಂತಿಲ್ಲದ್ದ ಮನಸ್ಸು ಏವಗ ಎಲ್ಲ ಹೆರ ಹೆರಡುಲೆ ನೋಡುತ್ತೋ ಅಂಬಗ ಎಲ್ಲ ನಿಯಂತ್ರಣ ಮಾಡಿ ತನ್ನಲ್ಲಿಗೇ ಬಲುಗಿ ತರೆಕ್ಕು.
6.27 ಬೇಕು ಬೇಡ ಇತ್ಯಾದಿ ರಜೋಗುಣ ಇಲ್ಲದ್ದೆ ಆದವನು, ಮನಸ್ಸು ಶಾನ್ತವಾದಂಥವನು, ಹಾಳು ಸಂಗತಿಗಳಿಂದ ಬಿಡುಗಡೆ ಆದಂಥವನು, ದೇವರೊಟ್ಟಿಂಗೆ ಸೇರಿದಂಥವನು, ಆದ ಹೀಂಗಿಪ್ಪ ಯೋಗಿಯ ಹುಡುಕ್ಕಿಗೊಂಡು ಶ್ರೇಷ್ಠವಾದ ಸಮಾಧಿ-ಸುಖ ಅದಾಗಿಯೇ ಬಂದುಬಿಡುತ್ತು.
6.28 ಹೀಂಗೆ ಎವಗಳುದೆ ಆತ್ಮ ಯೋಗವನ್ನು ಆಚರಣೆ ಮಾಡುವ ಕುರೆ ಇಲ್ಲದ್ದೆ ಆದ ಸಾಧಕ (ಯೋಗಿ) ಸುಲಾಭಲ್ಲಿ ದೇವರಗೊಂತುಮಾಡುದು (ಬ್ರಹ್ಮಸಾಕ್ಷಾತ್ಕಾರ) ಹೇಳುವ ಬಾರೀದೊಡ್ಡ ಸುಖವ ಅನುಭವಿಸುತ್ತ.
6.29 ಎಲ್ಲದರಲ್ಲಿಯುದೆ ಸಮತ್ವವನ್ನು ಕಾಂಬ, ಯೋಗವ ಆಚರಿಸುವವ ಎಲ್ಲಾ ಜೀವಜಾಲಂಗಳಲ್ಲಿಯು ತನ್ನನ್ನು ತನ್ನಲ್ಲಿ ಎಲ್ಲಾ ಜೀವಜಾಲಂಗಳನ್ನುದೆ ಕಾಣುತತಾ ಇರುತ್ತ.
6.30 ಆರು ಎನ್ನ ಎಲ್ಲಾದಿಕ್ಕಿಲ್ಲಿಯೂ ಕಾಣುತ್ತನೋ ಹಾಂಗೆ ಎಲ್ಲಾ ವಸ್ತುಗಳನ್ನುದೆ ಎನ್ನಲ್ಲಿಯುದೆ ಕಾಣುತ್ತನೋ ಅವಂಗೆ ಆನು ಒಂದರಿಯುದೇ ಕಾಣದ್ದೇ ಇರುತ್ತಿಲ್ಲೆ. ಅವ ಎನ್ನ ದೃಷ್ಟಿಗುದೇ ಕಾಣದ್ದೇ ಆವುತ್ತಾ ಇಲ್ಲೆ.
6.31 ಆರು ಒಬ್ಬ ಎಲ್ಲಾ ವಸ್ತುಗಳಲ್ಲಿಯೂ ಇಪ್ಪಂಥಾ ಎನ್ನ ಬೇರೆ ಬೇರೆ ಅಲ್ಲ ಒಂದೇ ಹೇಳಿ ತಿಳುದು ಪೂಜೆ ಧ್ಯಾನ ಇತ್ಯಾದಿಗಳಿಂದ ಭಜಿಸುತ್ತನೋ ಹಾಂಗಿಪ್ಪ ಯೋಗಿ ಜೀವಿತದ ಎಲ್ಲದರಲ್ಲಿಯೂ ಇದ್ದರುದೇ ಎನ್ನಲ್ಲಿಯೇ ಇದ್ದಾ.
6.32 ಏ ಅರ್ಜುನಾ, ಸುಖವಾದರುದೆ ದುಃಖವಾದರುದೇ ಎಲ್ಲೋರಲ್ಲಿಯುದೇ (ಸರ್ವತ್ರ) ತನಗಪ್ಪಾಂಗೇ ಗ್ರೇಶುವ ಯೋಗಿ ಇಪ್ಪವರಲ್ಲಿಯೇ ಮೇಗಿಪ್ಪವ ಹೇಳಿ ಎನ್ನ ನಿಶ್ಚಯ. (ಎಲ್ಲೋರಿಂಗೆ ಅಪ್ಪ ಸುಖ ದುಃಖ ಇದು ತನಗೆ ಅಪ್ಪಾಂಗೆ ಹೇಳಿ ತಿಳಿವ ಯೋಗಿ ತುಂಬಾ ಒಳ್ಳೆಯವ ಹೇಳಿ ನಮ್ಮ ನಿಶ್ಚಯ
6.33 ಕೃಷ್ಣಾ (ಭಕ್ತ ಜನರ ಪಾಪ ದುಃಖ ಇದೆಲ್ಲಾ ಎಳದು ತೆಗವಕಾರಣ ದೇವರಿಂಗೆ ಕೃಷ್ಣಾ ಹೇಳಿ ಹೆಸರು) ನೀನು ಈಗ ಹೇಳಿದ ಎಲ್ಲಾದರಲ್ಲಿಯುದೆ ಸಮತ್ವವ ವಿಚಾರಿಸುವಂಥಾ ಯೋಗ ಎನ್ನ ಮನಸ್ಸು ಆಡುವಕಾರಣ ಸ್ಥಿರವಾಗಿ ಮಾಡುಲೆ ಎಡಿಯದೋ ಹೇಳಿ ಸಂಶಯ ಆವುತ್ತು.
6.34 ಎಂತಾಳಿದರೆ ಮನಸ್ಸು ಚಂಚಲವಾಗಿಯೇ ಇಪ್ಪದಲ್ಲದಾ ಮಾಂತ್ರ ಅಲ್ಲ ಅದು ಗಟ್ಟಿಯಾಗಿ ಕಣ್ಣು ಕೆಮಿ ಬಾಯಿ ನಾಲಗೆ ಕೈ ಕಾಲು ಇತ್ಯಾದಿ ಇಂದ್ರಿಯಂಗಳ ಎಳಗಿಸಿ ಬಿಡುತ್ತುದೆ. ಹಾಂಗಿಪ್ಪ ಮನಸ್ಸಿನ ನಿಂದಲ್ಲಿ ನಿಲುಸುದು ಗಾಳಿಯ ಒಂದು ದಿಕ್ಕೆ ನಿಂದಲ್ಲಿ ನಿಲ್ಲುಸುವ ಅಷ್ಚು ಕಷ್ಚ ಹೇಳಿ ಎನಗೆ ತೋರುತ್ತು.
6.35 ಶ್ರೀ ದೇವರು ಹೇಳಿದವು –
ನೀ ಹೇಳಿದ್ದದಕ್ಕೆ ಸಂಶಯ ಏನೂ ಇಲ್ಲೆ ಮನಸ್ಸು ಅಡಗುಸುಲೆ ತುಂಬಾ ಕಷ್ಟವೇ. ಆದರೆ ದಿನಾಗಳು ಮಾಡುವ ಕೆಲವು ಉಪಾಯಂಗಳಿಂದ, ಮತ್ತೆ ಎನಗಾಗಿ ಎಂತದುದೇ ಬೇಡಾ ಹೇಳುವ ವೈರಾಗ್ಯಂದಲುದೇ ಮನಸ್ಸಿನ ಹಿಡುದಲ್ಲಿ ನಿಲುಸುಲೆ ಎಡಿಗು.
6.36 ಮನಸ್ಸಿನ ವಿಚಾರಂಗಳ, ತನ್ನ ಹಿಡಿತಲ್ಲಿ ಮಡುಗದ್ದವಂಗೆ ಯೋಗ ಪಡವಲೆ ಕಷ್ಟ ಹೇಳಿ ಎನಗೆ ತೋರುತ್ತು. ಆದರೆ ಮತ್ತು ಮತ್ತು ಪರಿಶ್ರಮಿಸುವವಂಗೆ ಮನಸ್ಸಿನ ನಿಯಂತ್ರಣ ಮಾಡಿಗೊಂಡು ಯೋಗದ ಸಿದ್ದಿ ಪಡವಲೆಡಿಗು.
6.37 ಅರ್ಜುನ ಕೇಳಿದ – ಎ ಕಪ್ಪುಮೆಯ್ಯಿಪ್ಪನೇ (ಕೃಷ್ಣಾ) ಸುರುವಿಂಗೆ ಯೋಗವ ಬೇಕಾದಾಂಗೆ ಮಾಡಿಬಂದಿಕ್ಕಿ ಮತ್ತೆ ಅದರ ಬೇಕಾದಾಂಗೆ ಮಾಡದ್ದೆ ಯೋಗಂದ ಮನಸ್ಸು ಎಳಗಿದ ಒಬ್ಬಂಗೆ ಯೋಗಸಿದ್ದಿ ಸರಿಯಾಗಿ ಆಗದ್ದರೆ ಅವಂಗೆ ಎಂತ ಅಕ್ಕು?
6.38 ಎ ದೊಡ್ಡ ಕೈಗಳಿಪ್ಪವನಾದ ಕೃಷ್ಣಾ,    ಕೆಲಸಮಾಡಿ ದೇವರ ಹೊಂದುವ ರೀತಿಂದಲುದೆ, ಯೋಗಮಾಡಿ ಸಿದ್ಧಿ ಪಡವ ರೀತಿಂದಲುದೇ, ಜಾರಿ ಬಿದ್ದು ಹೋದ ಅವ, ಬ್ರಹ್ಮನ ದಾರಿಲಿ ಒಂದು ಸರಿಯಾದ ನೆಲೆ ಇಲ್ಲದ್ದೆ, ಅಸಡ್ಡೆ ಮಾಡಿಪ್ಪವ ತುಂಡುತುಂಡಾಗಿ ಹೋಪ ಮೇಘದ ಹಾಂಗೆ ಹಾಳುಬೀಳುಗಾ
6.39 ಎನ್ನ ಈ ಸಂಶಯಂಗಳ ನೀನು ಒಂದುದೇ ಬಾಕಿ ಇಲ್ಲದ್ದಾಂಗೆ ನಿವಾರಿಸಿ ಕೊಡೆಕ್ಕು. ನೀನಲ್ಲದ್ದೆ ಈ ಸಂಶಯಂಗಳ ನಿವಾರಿಸುವವ ಬೇರೆ ಆರನ್ನು ಸಿಕ್ಕುತ್ತಿಲ್ಲೆ.
ಶ್ರೀ ದೇವರು ಹೇಳಿದವು
6.40  ಈ ಲೋಕಲ್ಲಿಯೋ ಪರಲೋಕಲ್ಲಿಯೋ ಅವಂಗೆ ನಾಶ ಆವುತ್ತಿಲ್ಲೆ. ಮಗನೇ ಒಳ್ಳೆದು ಮಾಡುವ ಆರುದೇ ಹಾಳಾಗಿ ಹೋವುತ್ತವಿಲ್ಲೆ.
6.41 ಯೋಗದ ಆಚರಣೆಂದ ಜಾರಿಬಿದ್ದವ ಪುಣ್ಯವಾಡಿದವಿಪ್ಪ ಲೋಕಕ್ಕೆ ಹೋಗಿ ತುಂಬಾಕಾಲ ಜೀವಿಸಿಕ್ಕಿ ಭೂಮಿಲಿ ಶುಚಿಯಾಗಿ ಸದಾಚಾರ ನಿಷ್ಠೆಲಿಪ್ಪವರ ಮನೆಲೆ ಮತ್ತು ಹುಟ್ಟುತ್ತ.
6.42 ಅಲ್ಲದ್ದರೆ ಯೋಗಿಗಳಾಗಿಪ್ಪವರ ಕುಲಲ್ಲಿಯೇ ಹುಟ್ಟಿದರೂ  ಹುಟ್ಟಿದ ಆದರೆ ಹಾಂಗಿಪ್ಪ ಜನ್ಮ ಈ ಲೋಕಲ್ಲಿ ತುಂಬಾ ಕಮ್ಮಿ.
6.43 ಅಲ್ಲಿ ಅವಂಗೆ ಮದಲಾಣ ಜನ್ಮಲ್ಲಿ ಮಾಡಿದ ಸಾಧನೆಯ ಬುದ್ದಿ ಸಿಕ್ಕುತ್ತು. ಮತ್ತೆ ಎಲ್ಲಿ ನಿಲುಸಿದ್ದನೋ ಅಲ್ಲಿಂದ ಸುರುಮಾಡಿ ಯೋಗ ಸಿದ್ದಿಗಾಗಿ ಮತ್ತಷ್ಟು ಹೆಚ್ಚಿಗೆ ಶ್ರಮಿಸುತ್ತ.
6.44 ಅವ ಬಚ್ಚಿಹೋದವ ಆದರುದೇ ಮದಲಾಣ ಜನ್ಮಲ್ಲಿ ಮಾಡಿದ ಯೋಗದ ಫಲದಿಂದ ಇನ್ನು ಶ್ರಮಿಸೆಕ್ಕು ಹೇಳುವ ವಿಚಾರ ಇದ್ದು ಈ ಲೋಕಂದ ಹೊರ ಹೋಗಿಯೇ ಬಿಡುತ್ತಾ.
6.45  ತುಂಬಾ ಪ್ರಯತ್ನ ಮಾಡಿಗೊಂಡು ಮತ್ತು ಮತ್ತು ಯೋಗಾಭ್ಯಾಸ ಮಾಡುವವ ಎಲ್ಲಾ ಪಾಪಂಗಳಿಂದಲುದೇ ಬಚವಾಗಿ ಅನೇಕ ಜನ್ಮಂಗಳಲ್ಲಿ ಕೂಡಾ ತಿಳುವಳಿಕೆಯ ಹೊಂದಿದವ ಆಗಿ ಅದರ ನಂತರ ಪರಮವಾದ ಗತಿಗೆ ಸೇರುತ್ತಾ.
6.46 ತಪಸ್ಸು ಮಾಡುವವರಿಂದಲುದೆ, ಹಲವಾರು ವಿಷಯದ ತಿಳುವಳಿಕೆ ಇಪ್ಪವರಿಂದಲುದೇ  ಹೆಚ್ಚು ಶ್ರೇಷ್ಠತೆ ಯೋಗಿಗೆ ಇದ್ದು. ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸಮಾಡುವವರಿಂದಲುದೆ ಶ್ರೇಷ್ಛತೆ ಯೋಗಿಗೆ ಇದ್ದು.ಹಾಂಗಾದಕಾರಣ ನೀನು ಯೋಗಿಯಾಗಿ ತೀರೆಕ್ಕು.
6.47 ಈತರ ಯೋಗಿಗಳಲ್ಲಿ ಆರು ಎನ್ನಲ್ಲಿಯೇ ಹೋಂದಿದ ಅನ್ತರಾತ್ಮ (ಮನಸ್ಸಿನ ಒಳಗಿಪ್ಪ ಚೈತನ್ಯ) ಇಪ್ಪವನಾಗಿ ಎಚ್ಚರಿಕೆಲಿ ಎನ್ನ ಆಶ್ರಯಿಸುತ್ತನೋ ಅವ ಎಲ್ಲಾ ವಿದ ಯೋಗಿಗಳಲ್ಲಿಯುದೆ  ಶ್ರೇಷ್ಟನಾದವ ಹೇಳುವದು ಎನ್ನ ಅಭಿಪ್ರಾಯ. (ಹಾಂಗಾಗಿ ನೀನು ಹಾಂಗಾಯೆಕ್ಕು).
ಹೀಂಗೆ ದೇವರ ಮಾತುಗಳಾದ ದೇವರತ್ತರೆ ಸೇರುವ ರೀತಿಯಾದ, ದೇವರಬಗ್ಗಿಪ್ಪ ಕಲಿವಿಕೆಯಾದ, ಶ್ರೀಕೃಷ್ಣ ಅರ್ಜುನ ಇವರ ಮಾತುಕತೆಲಿ ಧ್ಯಾನಯೋಗ ಹೇಳಿ ಹೆಸರಿಪ್ಪ ಆರನೇ ಅಧ್ಯಾಯ ಮುಗುದತ್ತು. 22.06.2013 10.45 ಉದಿಯಪ್ಪಗ ಕಂಜಿಕ್ಕೋಡು ಕೇರಳ.

No comments:

Post a Comment