ದೇವರ ಮಾತು – ನಾಲ್ಕನೇ ಅಧ್ಯಾಯ
ಶ್ರೀ ದೇವರು ಹೇಳಿದವು
4.1 ಏವಾಗಳುದೆ ಹಾಳಾಗದ್ದನ್ಥಾ ಈ ಯೋಗವ ( ಕಳುದ ಎರಡು ಅಧ್ಯಾಯಲ್ಲಿ
ಹೇಳಿದ ಸಂಗತಿಗಳ) ಮೊದಲಿಂಗೇ ಆನು ಸೂರ್ಯಂಗೆ ಹೇಳಿಕೊಟ್ಟತ್ತಿದ್ದೆ. ಸೂರ್ಯ ಅವನ ಮಗ ವನುವಿಂಗೆ
ಹೇಳಿ ಕೊಟ್ಟ. ಮನು ತನ್ನ ಮಗ ಇಕ್ಷ್ವಾಕುವಿಂಗೆ ಹೇಳಿ ಕೊಟ್ಟ
4.2 ಏ ಕಠಿನಾಧ್ವಾನ ಮಾಡುವವನಾದ ಅರ್ಜುನಾ, ಹೀಂಗೆ ತಲೆಮರೆ ತಲೆಮರೆ
ಆಗಿ ಕೈಬದಲಿ ಬಂದಿತ್ತಿದ್ದ ಇದರ ರಾಜಋಷಿಗೊ ತಿಳುದಿತ್ತಿದ್ದವು. (ಅರಸರಾಗಿಯೂ ಅದೇ ಕಾಲ ತಪಸ್ಸು
ಮಾಡಿ ಸತ್ಯವ ತಿಳಿದ ಋಷಿಗಳಾಗಿಯೂ ಇದ್ದವು ರಾಜ ಋಷಿಗೊ) . ಹಾಂಗಿಪ್ಪ ದೇವರ ಗೊಂತುಮಾಡಿ ದೇವರ
ಹೊಂದುಲಿಕ್ಕ ತಿಳುವಳಿಕೆಯಾದ ಯೋಗ ತುಂಬಾ ಕಾಲಕಳುದಪ್ಪಗ ರಜ್ಜ ರಜ್ಜವಾಗಿ ತಿಳುವಳಿಕೆ ಇಪ್ಪವು
ಕಮ್ಮಿ ಕಮ್ಮಿಯಾಗಿ ಈ ಲೋಕಲ್ಲಿ ಇಲ್ಲದ್ದೇ ಆತು. (ಅಧ್ವಾನ ಮಾಡದ್ದವು ಯೋಗವ ಕಳಕ್ಕೊಂಡವು, ಈಗ
ಅರ್ಜುನ ಕಠಿನಾಧ್ವಾನಿಯಾಗಿದ್ದ)
4.3 ಎನ್ನಲ್ಲಿ
ನಂಬಿಕೆ ಇಪ್ಪವನುದೆ (ಭಕ್ತನುದೆ) ಎನ್ನ ಗೆಳೆಯನುದೆ ನೀನು ಹೇಳುವದರಿಂದ ತುಂಬಾ ಹಳೇಕಾಲಲ್ಲಿಯೇ
ಇದ್ದನ್ಥಾ , ಶ್ರೇಷ್ಠವಾದನ್ಥಾ, ಆದರೆ ಈಗಾಣವು ಆರೂ ತಿಳಿಯದ್ದಂಥಾ ಆ ಯೋಗರೀತಿಯ ನಿನಗೆ ಆನು
ಹೇಳಿಕೊಟ್ಟೆ.
ಅರ್ಜುನ ಕೇಳಿದ
4.4 ನೀನು ಈಗ
ಜೀವಿಸುತ್ತಾ ಇಪ್ಪವ ಸೂರ್ಯ ಮದಲೇ ಜೀವಿಸಿದವ ಹಾಂಗಾಗಿ ನೀನು ಅವಂಗೆ ಈ ಯೋಗವ ಹೇಳಿಕೊಟ್ಟೇಳಿ
ಇಪ್ಪ ಸಂಗತಿ ಆನು ಹೇಂಗೆ ನಂಬಲೀ.........
ಶ್ರೀ ದೇವರು ಹೇಳಿದವು
4.5 ಏ ಅರ್ಜುನಾ, ಎನಗುದೆ ನಿನಗುದೆ ತುಂಬಾ ಜನ್ಮಂಗೊ ಕಳುದು ಹೇಯಿದು.
ಆ ಜನ್ಮಂಗಳ ಬಗ್ಗೆ ಎಲ್ಲಾ ಎನಗೆ ತಿಳುವಳಿಕೆ ಇದ್ದು, ಆದರೆ ನಿನಗೆ ತಿಳುವಳಿಕೆ ಇಲ್ಲೆ.
4.6 ಆನು ಹುಟ್ಟದ್ದವನಾದರುದೇ, ಹಾಳಾಗದ್ದವನಾದರುದೇ, ಎಲ್ಲಾ ಜೀವಿಗಳ
ದೇವರು ಆದರುದೆ, ಎನ್ನಲ್ಲಿಯೇ ಇಪ್ಪ ವಸ್ತುಗಳ ಉಪಯೋಗಿಸಿ ಎನ್ನದೇ ಮಾಯಾಶಕ್ತಿಯಿಂದ ಅವತಾರ
ತಾಳುತ್ತೆ.
4.7 ಏ ಭರತನ ವಂಶಲ್ಲಿ ಹುಟ್ಟಿದವನಾದ ಅರ್ಜುನಾ, ಏವಗ ಏವಗ ಎಲ್ಲಾ
ಧರ್ಮ ಕಮ್ಮಿಯಾಗಿ ಅಧರ್ಮ ಮೂಡಿಬತ್ತೋ ಅಂಬಗ ಎನ್ನ
ಅವತಾರವ ಹುಟ್ಟುಸುತ್ತೆ.
4.8 ಸ್ವನ್ಥ ಕೆಲಸ ಅಥವ ಕರ್ತವ್ಯಂಗಳ ಲಾಯಕಲ್ಲಿಯೇ ಮಾಡುವವರ
ಬಚವುಮಾಡುಲುದೆ ಹಾಳು ಸಂಗತಿಗಳ ಮಾಡುವವರ ವಿನಾಶಕ್ಕಾಗಿಯುದೇ ಧರ್ಮವ ಪುನಾ ನೆಲೆನಿಲುಸುಲಾಗಿಯುದೇ
ಒಂದೊಂದು ಕಾಲಲ್ಲಿಯೂ ಬತ್ತಾ ಇರುತ್ತೆ. (ಅವತಾರ ತಾಳುತ್ತಾ ಇರುತ್ತೆ).
4.9 ಏ ಅರ್ಜುನಾ, ಅಸಾಧಾರಣವಾದಂಥಾ ದಿವ್ಯವಾದಂಥಾ ಎನ್ನ ಅವತಾರವನ್ನು
ಆನು ಮಾಡುವ ದಿವ್ಯವಾದ ಕೆಲಸಂಗಳನ್ನು ಆರು ಸರಿಯಾಗಿ ಗೊಂತುಮಾಡುತ್ತನೋ ಅವ ಶರೀರವ ಬಿಟ್ಟಮತ್ತೆ
(ಸತ್ತಮತ್ತೆ) ಪುನಾ ಈ ಲೋಕಲ್ಲಿ ಹುಟ್ಟುತ್ತಾ ಇಲ್ಲೆ. ಅವ ಎನ್ನತ್ತರಂಗೆ ಬತ್ತಾ.( ಅವಂಗೆ ಮೋಕ್ಷ
ಸಿಕ್ಕುತ್ತು ಹೇಳಿ ಅರ್ಥ)
4.10 ಮತ್ತು ವತ್ತು ಬೇಕೂ ಹೇಳುವ ತೋರಾಣವನ್ನುದೆ (ರಾಗ),
ಹೆದರಿಕೆಯನ್ನುದೆ (ಭಯ), ಕೋಪವನ್ನುದೆ (ಕ್ರೋಧ) ಬಿಟ್ಟಂಥಾ ಎನ್ನನ್ನೇ ಗ್ರೇಶುವವರಾದ ಎನ್ನ ಪೂಜೆ,
ಸೇವೆ ಇದೆಲ್ಲಾ ಮಾಡಿಗೊಂಡು ಆಶ್ರಯಿಸಿದವರಾದ ತುಂಬಾ ಜನಂಗೊ ತಿಳುವಳಿಕೆಯಿಂದಲಾಗಿಯುದೇ
ತಪಸ್ಸಿಂದಲಾಗಿಯುದೇ ಒಳ್ಳೆಥಾ ಶುದ್ದವಾದವರಾಗಿ ಎನ್ನದೇ ಅವಸ್ಥೆಯ ಹೊಂದಿದ್ದವು.
4.11 ಏ ಪಾರ್ಥಾ, ಆರು ಏವ ರೀತಿಯಲ್ಲಿ ಎನ್ನ ಉಪಾಸನೆ (ಪೂಜೆ
ವುನಸ್ಕಾರ) ಮಾಡುತ್ತವೋ ಅವಕ್ಕೆ ಆ ರೀತಿಗೆ ಸೇರಿದ ಹಾಂಗೆ ಆನು ಅನುಗ್ರಹಿಸುತ್ತೆ. ಎಂತಾಳಿದರೆ
ಎಲ್ಲಾವರುದೆ ಒಂದಲ್ಲದ್ದರೆ ಬೇರೊಂದು ರೀತಿಯಲ್ಲಿ ಎನ್ನನ್ನೇ ನಂಬುತ್ತವು.
4.12 ಕೆಲಸಮಾಡಿ, ಅದರಿಂದಲಾಗಿ ಬೇರೆ ಬೇರೆ ಸಂಗತಿಗಳ ಪಡೇಕಾದ ಜನರು,
ಪ್ರಾಪಂಚಿಕವಾದ ಶಕ್ತಿಗಳ ಆರಾಧಿಸುತ್ತವು. (ನೀರು, ಮಣ್ಣು, ಕಿಚ್ಚು, ಮಳೆ, ಗಾಳಿ ಇತ್ಯಾದಿ
ದೇವತೆಗಳ ಆಶ್ರಯಿಸುತ್ತವು.) ಯಾಕೆಂದರೆ ಮನುಷ್ಯರ ಲೋಕಲ್ಲಿ ದುಡುದು ಕೆಲಸಮಾಡಿದರೆ ಅದರಿಂದಲಾಗಿ ಸಂಗತಿಗೊ ಪಕ್ಕ ಪಡವಲಾಗುತ್ತು.
4.13 ಕೆಲಸಮಾಡಿ ಸಂಗತಿಗಳ ಪಕ್ಕ ಪಡವಲೆ ಎಡಿವಲಾಗಿ ನಾಲ್ಕು ತರದ ಕೆಲಸ
ಮಾಡುವ ಸಮೂಹಂಗಳ ಆನು ಉಂಟು ಮಾಡಿದ್ದೆ. ಅವರವರ ಮನೋಭಾವ, ತಾತ್ಪರ್ಯ, ಒಂದು ಕೆಲಸಮಾಡುವದಲ್ಲಿಪ್ಪ
ಪ್ರೀತಿ ಸಾಕರ್ಥ್ಯ ಇದೆಲ್ಲಾ ಅಡಿಸ್ಥಾನ ಮಾಡಿಕ್ಕಿ ಆ ನಾಲ್ಕು ಸಮೂಹವ ಉಂಟು ಮಾಡಿದ್ದದು. ಆ
ಸ್ವಭಾವವ ಮಾಡಿದರಿಂದಲಾಗಿ ಆ ಸಮೂಹಂಗಳ ಆನೇ ಮಾಡಿದ್ದದು ಹೇಳಿ ತಿಳಿವಲಕ್ಕು. ಆದರೆ ಆನಾಗಿ ಅಥವಾ
ಎನಗೆ ಬೇಕಾಗಿ ಮಾಡಿದ್ದದಲ್ಲ ಹೇಳಿಯು ತಿಳುಕ್ಕೊ. ( ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು,
ಶೂದ್ರರು ಹೇಳಿ ನಾಲಕು ವಿಧ ಸಮೂಹ. ಬ್ರಾಹ್ಮಣರು ಜ್ಞಾನವ ಪಡವದಲ್ಲಿ ಅದರ ಇತರರಿಗೆ
ಹೇಳಿಕೊಡುವದರಲ್ಲಿ , ಯಾಗಾದಿ ಧಾರ್ಮಿಕ ಕೆಲಸಂಗಳಲ್ಲಿ ಸಾಮರ್ಥ್ಯ, ತಾತ್ಪರ್ಯ ಇಪ್ಪವರಿಂದ
ಉಂಟಪ್ಪ ಸಮೂಹ. ಕ್ಷತ್ರಿಯ ಸಮೂಹ ಆಳುಲೆ, ಲಡಾಯಿ ಮಾಡುಲೆ , ತಪ್ಪು ಮಾಡುವವರ ಶಿಕ್ಷಿಸುವದರಲ್ಲಿ
ತಾತ್ಪರ್ಯ ಇಪ್ಪವರಿಂದ ಆದ ಸಮೂಹ. ಕೃಷಿ, ದನವ ಸಾಂಕುದು, ಅಂಗಡಿ ಹಾಕಿ ವ್ಯಾಪಾರ ಮಾಡುದು
ಇತ್ಯಾದಿಗಳಲ್ಲಿ ಪ್ರೀತಿ ಸಾಮರ್ಥ್ಯ ಇಪ್ಪವರದ್ದು ವೈಶ್ಯ ಸಮೂಹ. ಹೆಚ್ಚಿಗೆ ಚಿಂತೆ ಮಾಡದ್ದೆ
ಬೇರೆಯವು ಕೊಡುವ ಅಥವ ಹೇಳುವ ಕೆಲಸಂಗಳ ಮಾಡುದರಲ್ಲಿ ಪ್ರೀತಿ ಇಪ್ಪವರದ್ದು ಶೂತ್ರರ ಸಮೂಹ.)
4.14 ಎನ್ನ ಮಾಡುವ ಕೆಲಸಂಗೊ ಬಾಧಿಸುತ್ತಿಲ್ಲೆ. ಹಾಂಗೆ ಎನಗೆ
ಕೆಲಸದಿಂದಲಾಗಿ ಆಗೆಕ್ಕಾದ ಸಂಗತಿಗಳಲ್ಲಿ ಎಂತ ಅಸೆಯುದೇ ಇಲ್ಲೆ ಹೇಳಿ ಆರು ತಿಳಿತ್ತವೋ ಅವ
ಕೆಲಸಂಗಳಿಂದಲಾಗಿ ಕಟ್ಟಿ ಹಾಕಿದವನಾಂಗಾವುತ್ತಾ ಇಲ್ಲೆ.
4.15 ಮದಲ್ಲಿತ್ತಿದ್ದ ಮೋಕ್ಷಕ್ಕಾಗಿ ಶ್ರಮಿಸಿದವರೆಲ್ಲಾರುದೇ ಕೂಡಾ
ಹೀಂಗೆ ತಿಳುದು ಕೆಲಸವ ಮಾಡಿದವ್ವೇ. ಹಾಂಗಾದ ಕಾರಣ ನೀನುದೆ ಮದಲಿತ್ತಿದ್ದವು ಮದಲೆ
ಮಾಡಿಬಂದಹಾಂಗೇ ಕೆಲಸಂಗಳ ಮಾಡಿಗೊಂಡು ಬರೆಕ್ಕು.
4.16 ಮಾಡೆಕ್ಕಾದ ಕೆಲಸ ಎಂತದು ಮಾಡುಲಾಗದ್ದ ಕೆಲಸ ಎಂತದು ಹೇಳುವ
ವಿಷಯಲ್ಲಿ ಬುದ್ದಿ ಇಪ್ಪವರುದೆ ಸಹ ಸಂಶಯಪಡುತ್ತವು. ಹಾಂಗಾಗಿ ಎವ ಕೆಲಸವ ಅಥವಾ ಜವಾಬ್ದಾರಿಯ
ಗೊಂತುಮಾಡಿ ಮಾಡಿದರೆ ನಿನಗೆ ಒಳ್ಳೆದಲ್ಲದ್ದದರಿಂದ ಬಚವಪ್ಪಲಕ್ಕೋ ಆ ಕೆಲಸವ ತಿಳಿಶುತ್ತೆ.
4.17 ಮಾಡೆಕ್ಕಾದ ಕೆಲಸಂಗೊ ಹೇಂಗಿಪ್ಪದು ಮಾಡುಲಾಗದ್ದ ಕೆಲಸಂಗೊ
ಹೇಂಗಿಪ್ಪದು ಕೆಲಸವೇ ಮಾಡದ್ದೆ ಹೇಂಗಿಪ್ಪದು ಹೇಳಿಯೆಲ್ಲಾ ಸರಿಯಾಗಿ ಕಲಿಯೆಕ್ಕು. ಎಂತಾಳಿದರೆ
ಕೆಲಸಂಗಳ ಒಳ ಗುಟ್ಟು ತುಂಬಾ ಗಹನವಾದ್ದದು.
4.18 ಮಾಡುವ ಕೆಲಸಲ್ಲಿ ಕೆಲಸ ಮಾಡದೇ ಇಪ್ಪದರನ್ನುದೆ ಮಾಡದ್ದ
ಕೆಲಸಲ್ಲಿ ಕೆಲಸ ಮಾಡುವದರನ್ನುದೆ ಆರು ತಿಳಿತ್ತನೋ ಅವ ಎಲ್ಲಾ ಮನುಷ್ಯರೊಳಗೆ ಬುದ್ದಿವಂತನಾಗಿದ್ದ.
4.19 ಅರ ಎಲ್ಲಾ ಜೆಂಬ್ರವುದೆ
ಕೆಲಸಮಾಡಿದರೆ ಅದು ಸಿಕ್ಕುಗು ಇದು ಸಿಕ್ಕುಗು ಹೇಳಿ ಇಲ್ಲದೇ ಇರುತ್ತೋ ತಿಳುವಳಿಕೆ ಅಥವಾ
ಜ್ಞಾನ ಹೇಳುವ ಕಿಚ್ಚಿಲ್ಲಿ ಕೆಲಸಂಗೊ ಎಲ್ಲಾ ಹೊತ್ತುಸಿಬಿಟ್ಟನ್ಥಾ ಅವನನ್ನು, ತಿಳುವಳಿಕೆ
ಇಪ್ಪವು, ಎಲ್ಲಾ ಗೊಂತಿಪ್ಪವ (ಪಂಡಿತಕ್ಕೊ ಹೇಳಿ) ಹೇಳಿಯೇ ಬಹುಮಾನಿಸುತ್ತವು.
4.20 ಕೆಲಸಲ್ಲಿಯು ಅದರಿಂದಲಾಗಿ ಆಯೆಕ್ಕಾದ ಸಂಗತಿಗಳಲ್ಲಿಯು
(ಫಲಲ್ಲಿಯೂ) ಇಪ್ಪ ಆಸಕ್ತಿಯ ಬಿಟ್ಟು ಎವಗಳುದೇ ತೃಪ್ತಿ ಇಪ್ಪವನಾಗಿಯೂ ಆರನ್ನು ಆಶ್ರಯಿಸದ್ದವನಾಗಿಯೂ ಇಪ್ಪವ ಮಾಡೆಕ್ಕಾದ
ಜವಾಬ್ದಾರಿಗಳ್ಲನ್ನು ಮಾಡುತ್ತಾ ಇಪ್ಪವನಾದರುದೇ ಅವ ರಜ್ಜಸಾನುದೇ ಕೆಲಸ ಮಾಡುತ್ತನೇ ಇಲ್ಲೆ.
4.21 ಆಸೆಯಿಲ್ಲದ್ದವನಾಗಿಯುದೆ ದೇಹವನ್ನುದೆ ಮನಸ್ಸನ್ನುದೆ
ಅಡಗಿಸಿದವನಾಗಿಯುದೆ ತಾನು ಸಂಪಾದಿಸಿದ್ದರ ಎಲ್ಲಾ ಬಿಟ್ಟವನಾಗಿಯುದೆ ಆಗಿ ಶರೀರ ನೆಲೆ ನಿಂಬಲಿಪ್ಪ
ಕೆಲಸಂಗಳ ಮಾಂತ್ರ ಮಾಡುವವಂಗೆ ಪಾಪಪುಣ್ಯ ಬತ್ತೇ
ಇಲ್ಲೆ.
4.22 ಯಾದೃಶ್ತಿಕವಾಗಿ ಸಿಕ್ಕುವದರಲ್ಲಿ ಸಂತುಷ್ಟನಾಗಿ ಇದಾಗ ಇದೇ
ಆಯೆಕ್ಕು ಹೇಳುವದಿಲ್ಲದ್ದೆ ಆರತ್ತರೂ ಹೊಂಟಿಹೋರುಲೆ ಹೋಗದ್ದೆ ಸಂಗತಿಗೊ ಆದರುದೆ ಆಗದ್ದರುದೆ
ಬೇಜಾರಿಲ್ಲದ್ದೆ ಕೆಲಸಂಗಳ ಮಾಡುತ್ತಾ ಬಂದರುದೆ ಕಟ್ಟಿ ಹಾಕಿದವನಾಂಗೆ ಆವುತ್ತಾ ಇಲ್ಲೆ.
4.23 ಹಲವಾರು ಲೌಕಿಕ ಸಂಗತಿಗಳಲ್ಲಿತ್ತಿದ್ದ ತನ್ನ ವಿಚಾರಂಗಳ ಕಮ್ಮಿ
ಕಮ್ಮಿಮಾಡಿ ಇಲ್ಲದ್ದೇ ಮಾಡಿದವನಾಗಿ, ಅದರಿಂದಲೇ ಎಲ್ಲಾ ತಾಪತ್ರಯಂಗಳಿಂದಲೂ ಬಿಡುಗಡೆ
ಸಿಕ್ಕಿದವನಾಗಿ, ತಿಳುವಳಿಕೆಯಲ್ಲಿಯೇ ಮನಸ್ಸಿಟ್ಟು (ಜ್ಞಾನಲ್ಲಿಯೇ ಚೇತಸ್ಸಿನ ಮಡುಗಿಗೊಂಡು)
ಇಪ್ಪ ಒಬ್ಬ ದೇವರಿಂಗೆ ಅರ್ಪಣೆಯಾಗಿ, ಲೋಕಕ್ಕೆ ಒಳ್ಳೆದಪ್ಪಲೆ ಮಾಡುವಂಥಾ ಕೆಲಸಂಗೊಳುದೇ ಆ ಕೆಲಸಂಗಳಿಂದಲಾಗಿ
ಅಪ್ಪ ಸಂಗತಿಗಳುದೆ (ಫಲ) ಇಡೀಯಾಗಿ ಇಲ್ಲದ್ದೆಯೇ ಆವುತ್ತು. (ಅದರಿಂದಲಾಗಿ ಮಾಡುವವಂಗೆ ಎಂತ
ತೊಂದರೆಯುದೇ ಬತ್ತಿಲ್ಲೆ.)
4.24 ಹೋಮಲ್ಲಿ ಹವಿಸ್ಸಿನ ಕಿಚ್ಚಿಂಗೆ ಹಾಕುಲೆ ಉಪಯೋಗಿಸುವ
ಸುರುವೆತಟ್ಟೆ ಇತ್ಯಾದಿ (ಸ್ರುವ, ಸ್ರುಕ್, ಚಮಸ ಇತ್ಯಾದಿ ಸಟ್ಟುಗುಗೊ ಎಲ್ಲಾವುದೇ) ಬ್ರಹ್ಮವೇ,
ಹವಿಸ್ಸು ಅಥವಾ ತುಪ್ಪ, ಅಶನ, ಇದೆಲ್ಲವುದೇ ಬ್ರಹ್ಮವೇ, ಹೋಮಲ್ಲಿಪ್ಪ ಕಿಚ್ಚುದೆ ಬ್ರಹ್ಮವೆ,
ಹೋಮಿಸುವವನುದೆ ಬ್ರಹ್ವವೇ, ಹೋಮಿಸುವದು ಹೇಳುವ ಕೆಲಸವುದೆ ಬ್ರಹ್ಮವೇ, ಹೀಂಗೆ ಬ್ರಹ್ಮವು ಎಂಬ
ಕರ್ತ್ತವ್ಯದಲ್ಲಿ ಒಂದೇರೀತಿ ತನ್ನ ಮನಸ್ಸನ್ನು ನಿಲುಸುವವ ಹೋಪದುದೆ ಬ್ರಹ್ಮಕ್ಕೇ. (ಮಾಡುವ
ಕೆಲಸಂಗೊಕ್ಕೆ ಉಪಯೋಗಿಸುವ ವಸ್ತುಗೊ ಬ್ರಹ್ಮವೇ, ಮಾಡುದು ಎಂಬ ಕ್ರಿಯೆಯುದೆ ಬ್ರಹ್ಮವೇ,
ಮಾಡುವವನುದೆ ಕೆಲಸವುದೇ ಬ್ರಹ್ಮವೇ ಹೇಳಿ ತಿಳಿಯೆಕ್ಕು. ಹಾಂಗೆ ತಿಳುದು ಕೆಲಸಮಾಡಿದರೆ ಮೋಕ್ಷ ಪಡದು
ಬ್ರಹ್ಮಲ್ಲಿ ಲೀನವಪ್ಪಲಕ್ಕು. (ಬ್ರಹ್ವ ಹೇಳುವ ಪದಕ್ಕೆ ಸವಾನ ಪದ ನಮ್ಮ ಭಾಷೆಲಿ ಇಲ್ಲೆ. ದೇವರು
ಹೇಳಿ ಸಾಮಾನ್ಯವಾಗಿ ಹೇಳುಲಕ್ಕು. ಈ ಲೋಕ ಎಲ್ಲಿಂದ ಬತ್ತಾ ಇದ್ದೋ, ಎಂತರಿಂದಲಾಗಿ ಮಾಡುಲೋಯಿದೋ
ಅದು ಬ್ರಹ್ಮ. ದೇವರುದೆ ನಾವುದೆ ಲೋಕವುದೆ ಎಲ್ಲ ಬ್ರಹ್ಮವೇ ಹೇಳಿ ತಿಳಿಯೆಕ್ಕು. ಇದೊಂದೇ ವಸ್ತು
ಇಪ್ಪದು ಬೇರೆ ಎಂತದೂ ಇಲ್ಲೆ ಹೇಳಿ ಆದಿ ಶಂಕರಾಚಾರ್ಯರು ತಿಳಿಶಿದ್ದವು).
4.25 ಕೆಲವು ತಿಳುವಳಿಕೆ ಇಪ್ಪ ಮನುಷ್ಯರು ಇಂದ್ರ ಅಗ್ನಿ
ಇತ್ಯಾದಿಗಳಿಗಾಗಿ ಮಾಡುವ ಯಾಗಾದಿಗಳಲ್ಲಿ ಇದೇ ಭಾವನೆ ಮಡಿಕ್ಕುಂಡು ಮಾಡುತ್ತವು. ಇನ್ನು ಕೆಲವು
ಜನ ಪೂಜೆ ವುನಸ್ಕಾರ ಇದರನ್ನೇ ನಂಬಿಗೊಂಡು ಇದರ ಎಲ್ಲಾ ಮಾಡುತ್ತವು. ಪೂಜೆಯೇ ದೇವರು ಹೇಳುವ ಭಾವನೆಲಿ ಮಾಡುತ್ತವು. ಕೆಲಸವೇ
ದೇವರು ಹೇಳುವ ಭಾವನೆಲಿ ಕೆಲಸ ಮಾಡುತ್ತವು.
4.26 ಇನ್ನು ಕೆಲವು ಜೆನ (ತಪಸ್ಸು ಮಾಡುವವು) ಸಂಯವನವಾದ ಕಿಚ್ಚಿಲ್ಲಿ
(ನಿಯಂತ್ರಿಸುವದು ಹೇಳುವ) ಕೆಮಿ ಇತ್ಯಾದಿಗಳ ಹೋಮಿಸುತ್ತವು. ಇನ್ನು ಕೆಲಾವು ಜೆನ ಮನೆಲಿ ಇದ್ದು
ಯೋಗರೀತಿಲಿ ಜೀವಿಸುವವು ಕೇಳುವ ಶಬ್ದಂಗೊ, ಕಾಂಬ ರೂಪ ಇತ್ಯದಿಗಳ ಅಲ್ಲಿಗೇ ಬಿಡುದು ಎಂಬ ರೀತಿಲಿ ತಪಸ್ಸು
ಮಾಡುತ್ತವು.
4.27 ಇನ್ನು ಕೆಲವು ಜೆನರು ಧ್ಯಾನಾದಿ ಅಭ್ಯಾಸಂಗಳ ಮಾಡುವವು ಆಗಿ
ಎಲ್ಲಾ ಅಂಗಂಗಳ ಕೆಲಸಂಗಳ ಕೂಡಾ ಶ್ವಾಸ ತೆಕ್ಕೊಂಬದು ಊಟವ ಕರಗುಸುದು ಇತ್ಯಾದಿ ಶರೀರಕ್ಕೆ
ನೆಲೆನಿಂಬಲೆ ಬೇಕಾದ ಕೆಲಸಂಗಳ ಕೂಡಾ ತಿಳುವಳಿಕೆಯಿಂದ ಹಿಡಿಶಿದಂಥಾ (ಕಿಚ್ಚಲ್ಲಿ) ಆತ್ಮ
ಸಂಯವನಂದಸಲಾಗಿ ದೇವರೊಟ್ಟಿಂಗೆ ಹೊಂದುದು ಹೇಳುವ ಕಿಚ್ಚಿಲ್ಲಿ ಹೊಮುಸುತ್ತವು. (ದೇವರ ಬಗ್ಗೆ
ತನ್ನ ಬಗ್ಗೆ ಲೋಕದ ಬಗ್ಗೆ ತಿಳುವಳಿಕೆ ಇಪ್ಪವು ಬೇಡದ್ದ ಕೆಲಸಂಗಳ ಮಾಡದ್ದೆ ಇಪ್ಪದು,
ಕರ್ತವ್ಯಂಗಳ ತಿಳುದು ಮಾಡುವದು ಹೇಳಿ ಸ್ವಯಂ ನಿಯನ್ತ್ರಿಸುತ್ತಾ ಜೀವಿಸುತ್ತವು. ಅವಕ್ಕೆ ಮಾಡುವ
ಕೆಲಸಂಗಳಿಂದಾಗಿ ಪಾಪ ಪುಣ್ಯ ಬತ್ತಿಲ್ಲೆ.
4.28 ಇನ್ನು ಬೇರೆ ಜೆನಂಗೊ ಹಣ ಮತ್ತೆ ಇತರ ಸಂಪತ್ತುಗಳ ಬಜವರಿಗೆ
ಅಥವಾ ಅದರ ಆವಶ್ಯಕತೆ ಇಪ್ಪವಕ್ಕೆ ಹಂಚುದು ಹೇಳುವ ಸತ್ಕಾರ್ಯ (ಯಜ್ಞ) ಮಾಡುತ್ತವು. ಕೆಲಸವು ಜೆನ ಉಪವಾಸ , ಸತ್ಯವನ್ನೇ
ಹೇಳುದು, ಇತ್ಯಾದಿ ತಪಸ್ಸಿನ ಯಜ್ಞವಾಗಿ ಮಾಡುತ್ತವು.ಕೆಲಸವು ಜೆನ ಮನಸ್ಸಿನ ಅಡಗುಸುದು ಹೇಳುವ
ಯೋಗದ ರೀತೀಲಿ ಯಜ್ಞವ ಮಾಡುತ್ತವು. ಇನ್ನು ಕೆಲವು ಜೆನ ವೇದ ಶಾಸ್ತ್ರಂಗಳ ನಿತ್ಯ ಅರ್ಥಸಹಿತ
ತಿರುಗಿ ತಿರುಗಿ ತನ್ನನ್ತಾನೇ (ಸ್ವಯಂ) ಕಲಿವದು ಕಲುತ್ತು ತಿಳುವಳಿಕೆಯ ಬೆಳೆಶುದು (ರಾಮಾಯಣ,
ಮಹಾಭಾರತ, ಭಾಗವತ ಇತ್ಯಾದಿಗಳ ಪ್ರವಚನ ಸತ್ಸಂಗ, ಭಜನೆ, ಹರಿಕಥಾ ಕಾಲಕ್ಷೇಪ ಇತ್ಯಾದಿಗಳಲ್ಲಿ
ಭಾಗವಹಿಸುವದು ಸ್ವಾಧ್ಯಾಯ ಜ್ಞಾನಲ್ಲಿ ಬಪ್ಪದೇ) ಹೇಳುವ ಯಜ್ಞವ ಮಾಡುತ್ತವು. ಹೀಂಗೆ ಹಲವಾರು
ರೀತಿಗಳಲ್ಲಿ ಅವಕ್ಕವಕ್ಕೆ ಎಡಿವಾಂಗೆ ಮೋಕ್ಷ ಪಡವಲೆ ಗ್ರೇಶುವವು ಕಠಿನವಾಗಿ ಪ್ರಯತ್ನ
ಮಾಡುತ್ತವು.
4.29 (ಇದೆಲ್ಲ ಅಲ್ಲದ್ದೆ) ಕೆಲವು ಜೆನ ಪ್ರಾಣಾಯಾಮ ಹೇಳುವ ಯಜ್ಞವ
ಮಾಡುತ್ತವು. ಅದು ಹೇಂಗೆ ಮಾಡುವದು ಹೇಳಿದರೆ ಒಳಂಗೆ ಎಳವ ಶ್ವಾಸ ಗಾಳಿಯನ್ನುದೆ ಹೆರಂಗೆ ಬಿಡುವ
ಶ್ವಾಸಗಾಳಿಯನ್ನುದೆ ಕಟ್ಟಿಮಡುಗಿ ಗೊಂಡು ಒಳ ಹೋಪ ಶ್ವಾಸ ಗಾಳಿಯ ಹೆರ ಹೋಪ ಗಾಳಿಲಿಯುದೆ , ಹಾಂಗೆ
ಹೆರ ಹೋಪ ಗಾಳಿಯ ಒಳ ಹೋಪ ಗಾಳಿಲಿಯುದೆ ಹೋಮಿಸುತ್ತವು.(ಪ್ರಾಣ ಹೇಳಿದರೆ ಕಿಚ್ಚು ಹೇಳಿಯೇ
ತಿಳಿಯೆಕ್ಕು. ಒಳಹೋಪದು ಪ್ರಾಣ ಹೇಳುವ ಕಿಚ್ಚು, ಹೆರ ಬಪ್ಪದು ಅಪಾನ ಹೇಳುವ ಕಿಚ್ಚು.)
4.30 ಇನ್ನು ಕೆಲವು ಜೆನ ಆಹಾರವ (ಏಕಾದಶಿ, ಶಿವರಾತ್ರಿ, ಷಷ್ಠಿ
ಇತ್ಯಾದಿ ದಿನಂಗಳಲ್ಲಿ ಮಾಡುವ ಉಪವಾಸ, ಒಪ್ಪತ್ತು, ವ್ರತ) ನಿಯಂತ್ರಿಸಿಗೊಂಡು ಶರೀರಲ್ಲಿಪ್ಪ
ಶಕ್ತಿಗಳ ಅದದಲ್ಲಿಯೇ ಹೋಮಿಸುತ್ತವು. ಇವು ಎಲ್ಲಾರುದೇ ಯಜ್ಞ ಹೇಳಿದರೆ ಎಂತಾಳಿ ತಿಳಿದವುದೆ ಯಜ್ಞಂದಲಾಗಿ
ತಂಗಳ ಪಾಪಂಗಳ ಎಲ್ಲಾ ಬಿಟ್ಟವುದೇ ಸಹ ಆಗಿದ್ದವು.
4.31 ಯಜ್ಞಂಗಳ ಮಾಡಿಕಳುದು ಬಾಕಿಪ್ಪನ್ಥಾ ಅಮೃತದಾಂಗಿಪ್ಪ ಊಟವ ಊಮ್ಬವು
ಸೀದಾ ಯಾವಾಗಳುದೆ ನೆಲೆನಿಂಬನ್ತಾ ಬ್ರಹ್ಮಕ್ಕೆ ಹೋಗಿ ಸೇರುತ್ತವು. (ಲೋಕೋಪಕಾರಕ್ಕಾಗಿ ಮಾಡುವ
ಕರ್ತವ್ಯಂಗಳೇ ಯಜ್ಞಂಗೊ. ಅದು ದೇವಕಾರ್ಯವಾದ ಪೂಜೆ ಪುವಸ್ಕಾರ, ಭೂತ ಯಜ್ಞವಾದ ಗೋರಕ್ಷೆ ,
ವೃಕ್ಷರಕ್ಷೆ ಇತ್ಯಾದಿ, ದಾನ, ವ್ರತ ಇತ್ಯಾದಿಗಳುದೆ ಎಲ್ಲಾ ಯಜ್ಞವೇ). ಯಜ್ಝಂಗಳ ಮಾಡದ್ದವಂಗೆ ಈ
ಲೋಕ ಸುಖವನ್ನೇ ಅನುಭವಿಸುಲೆಡಿಯ, ಮತ್ತಿದ್ದೋ ಅವಂಗೆ ಆಚ ಲೋಕದ ಸುಖಾನುಭವ ಅರ್ಜುನಾ.....
4.32 ಹೀಂಗೆ ಹಲವಾರು ರೀತಿಗಳ ಯಜ್ಞಂಗಳ ವೇದಂಗಳಲ್ಲಿ ಹೇಳಿದ್ದವು. ಆ
ಎಲ್ಲಾದರನ್ನುದೇ ಮನಸ್ಸು, ಶರೀರ, ಮಾತು ಇವಗಳ ಕೆಲಸಂದಲಾಗಿಯೇ ಅಪ್ಪವಗೊ ಹೇಳಿ ನೀನು
ತಿಳಿಯೆಕ್ಕು. ಹೀಂಗೆ ತಿಳುದರೆ, ಜ್ಞಾನಕ್ಕೆ ಮುಖ್ಯತ್ವ ಕೊಟ್ಟು ಜೀವಿಸಿ ಲೋಕಜೀವನದ ಕಷ್ಟಂಗಳಿಂದ ಬಿಟುಗಡೆ ಪಡವಲಕ್ಕು.
4.33 ಏ ಕಠಿನಾಧ್ವಾನ ಮಾಡುವವನಾದ ಅರ್ಜುನಾ, ಪದಾರ್ಥಂಗಳಿಂದ ಮಾಡುವ
ಯಜ್ಞದಿಂದಲೂ ತಿಳುವಳಿಕೆಯ ಬಳಸುವ ಯಜ್ಞ ಶ್ರೇಷ್ಠವಾಗಿಪ್ಪದು. ಏ ಪಾರ್ಥ ಎಲ್ಲಾ ಕೆಲಸಂಗಳುದೆ ಅದರ
ಎಲ್ಲಾ ಫಲವುದೆ ಬ್ರಹ್ಮನಬಗ್ಗೆ, ಆತ್ಮನಬಗ್ಗೆ ಇಪ್ಪನ್ಥಾ ತಿಳುವಳಿಕೆಲಿ ಅಡಗುತ್ತು. (ತಿಳುವಳಿಕೆ
ಹೊಂದಿವಾಗ ಮುಗುದು ಹೋವುತ್ತು.)
4.34 ಆ ತಿಳುವಳಿಕೆಯ ತಲೆಯಿಂದ ಕಾಲುಮುಷ್ಟಇಪ್ಪ ಎಲ್ಲಾ
ಶರೀರಾಂಗಂಗಳನ್ನುದೆ ಭೂಮಿಲಿ ಮುಟ್ಟುಸಿ ಮಾಡುವ ಸಾಷ್ಟಾಂಗವಾಗಿ ಹೊಡಾಡುದರಿಂದಲುದೆ, ಎನಗೆ ಈ ಲೋಕ
ಜೀವಿತ ಹೇಂಗೆ ಬನ್ತು, ಆನು ಇದರಿಂದ ಎಲ್ಲಾ ಹೇಂಗೆ ಹೆರಹೆರಡುದು ಇತ್ಯಾದಿ ಚೋದ್ಯವ
ಕೇಳುವದರಿಂದಲಾಗಿಯುದೇ , ತಿಳುವಳಿಕೆ ಇಪ್ಪವರ ಸೇವೆ ಮಾಡುವದರಿಂದಲಾಗಿಯುದೇ ಗೊಂತುಮಾಡೆಕ್ಕದ.
ದೇವರಬಗ್ಗೆ, ಲೋಕದ ಬಗ್ಗೆ ಮತ್ತೆ ಆತ್ಮನಬಗ್ಗೆ ಎಲ್ಲಾ ತಿಳುದವರಾದ ಜ್ಞಾನಿಗೊ (ಸ್ವನುಭವ ಇಪ್ಪವು
ಆಯೆಕ್ಕು, ಬರೇ ಓದಿ ತಿಳುದವರಲ್ಲ) ನಿನಗೆ ಈ ಸಂಗತಿಯ ಹೇಳಿಕೊಡುಗು. (ಉಪದೇಶಮಾಡುಗು).
4.35 ಏ ಪಾಣ್ಡವಾ,ಹಿಂಗಿಪ್ಪ ತಿಳುವಳಿಕೆಯ ತಿಳುದರೆ ಪುನಾ ನಿನಗೆ ಈಗ
ಇಪ್ಪಾಂಗಿಪ್ಪ ಸಂಶಯ, ಹೆದರಿಕೆ, ಅಜ್ಞಾನ ಇದೆಲ್ಲಾ ಬತ್ತಿಲ್ಲೆ. ಅದು ಮಾಂತ್ರ ಅಲ್ಲ, ಎಲ್ಲಾ
ಜೀವಿಗಳನ್ನುದೇ ನಿನ್ನಲ್ಲಿಯೇ ನೋಡುಲುದೆ ಎಡಿಗು. ಹಾಂಗೆ ನೀನು ಎನ್ನಲ್ಲಿ
ನೆಲೆನಿಂದುಗೊಂಡಿಪ್ಪದರನ್ನುದೆ ನೋಡುಲೆಡಿಗು. (ಹಾಂಗೆ ವೇದಾನ್ತ ಸತ್ಯವಾದ ದೇವರು ನಾವು ಒಂದೇ
ಹೇಳುವ ಸತ್ಯವ ತಿಳಿವಲಕ್ಕು.)
4.36 ನಿನು ಒಂದು ವೇಳೆ ಎಲ್ಲಾ ಪಾಪಿಗಳ್ಲಲಿಯೂ ಕೂಡಾ ಹೆಚ್ಚು
ಪಾಪಿಷ್ಠನಾಗಿದ್ದರುದೇ ಸಹ, ಆ ಎಲ್ಲಾ ಪಾಪ ಸಮುದ್ರವನ್ನುದೆ ಕೂಡಾ ತಿಳುವಿಕೆಯಾದ (ಜ್ಞಾನ)
ದೋಣಿಯಲ್ಲಿಯೇ ದಾಂಟುಲೆಡಿಗು.
4.37 ಏ ಅರ್ಜುನಾ, ಒಳ್ಳೆತ ಹೊತ್ತಿಗೊಂಡಿಪ್ಪ ಕಿಚ್ಚು ಹೇಂಗೆ ಕಾಷ್ಠಂಗಳ
ಹೊತ್ತುಸಿ ಬೂದಿ ಮಾಡುತ್ತೋ ಜ್ಞಾನ ಅಥವಾ ತಿಳುವಳಿಕೆಯಾದ ಕಿಚ್ಚು ಎಲ್ಲಾ ಕೆಲಸಂಗಳನ್ನುದೇ
ಹೊತ್ತುಸಿ ಬೂದಿ ಮಾಡುತ್ತು.
4.38 ರಜ್ಜ ಮದಲೆ ಹೇಳಿಂದ ಹಲವಾರು ಯಜ್ಞಕರ್ಮಂಗಳಲ್ಲಿ ತಿಳುವಳಿಕೆಯ
ಹಾಂಗೆ ಪವಿತ್ರಮಾದದ್ದು ಅಥವಾ ಶುದ್ಧವಾಗಿಪ್ಪದು ಬೇರೆ ಎಂತದೂ ಇಲ್ಲೆ. ತುಂಬಾ ಕಾಲ ಕರ್ಮಯೋಗವೆಂಬ
ರೀತಿಲಿ ಜೀವಿಸಿದವಂಗೆ ತನ್ನಲ್ಲಿಯೇ ಆ ತಿಳುವಳಿಕೆಯ ತಾನಾಗಿಯೇ ಪಡವಲೆಡಿಗು.
4.39 ತಿಳುವಳಿಕೆ ಇಪ್ಪ ಗುರು ಹೇಳಿದಂಥಾ ಉಪದೇಶಂಗಳಲ್ಲಿ ಗಮನವುದೆ,
ಜ್ಞಾನಪಡೇಕು ಹೇಳುವ ತೋರಾಣವುದೆ ಇದ್ದುಗೊಂಡು ಆರು ತನ್ನ ಕಣ್ಣು, ಕೆಮಿ, ಕಾಲು, ಕೈ, ನಾಲಗೆ,
ಚರ್ಮ ಮನಸ್ಸು ಇತ್ಯಾದಿಗಳ ಎಲ್ಲಾ ಅಡಗಿಸಿಗೊಂಡು ಜೀವಿಸುತ್ತಾ ಇರುತ್ತನೋ ಅವಂಗೆ ಜ್ಞಾನ ಖಂಢಿತಾ
ಸಿಕ್ಕಿಯೇ ಸಿಕ್ಕುತ್ತು. ಜ್ಞಾನ ಸಿಕ್ಕಿದಮತ್ತೆ ರಜ್ಜ ಸಮಯಲ್ಲಿಯೇ ಪರಮವಾಗಿಪ್ಪ ಶಾನ್ತಿಯ
(ಮೋಕ್ಷವ) ಅವಂಗೆ ಪಡವಲಾಗುತ್ತು.
4.40 ತಿಳುವಳಿಕೆ ಇಲ್ಲದ್ದವನೂ, ತಿಳುವಳಿಕೆಲಿಯೋ ಅದರ ಪಡವದರ ಬಗ್ಗೋ
ಗಮನ ಕೊಡದ್ದವನೂ (ತಲೆ ಕೊಡದ್ದವ) ಅದರಿಂದಲಾಗಿ ಸಂಶಯ ತೀರದ್ದವನೂ ಆದವ ಹಾಳಾಗಿ ಹೋವುತ್ತ. ಸಂಶಯ
ಇಪ್ಪವಂಗೆ ಈ ಲೋಕವು ಇಲ್ಲೆ ಪರ ಲೋಕವು ಇಲ್ಲೆ, ಹಾಂಗಿಪ್ಪವಂಗೆ ಸುಖವು ಸಮಾಧಾನವು ಇಲ್ಲೆ.
4.41 ಏ ಹಣವ
ಗೆದ್ದವನಾದ (ಧನಂಜಯ) ಅರ್ಜುನಾ, ಕೆಲಸಂಗಳ ದೇವರಿಂಗೆ ಅರ್ಪಿಸಿಗೊಂಡು ಮಾಡುವ ಕರ್ಮಯೋಗದಿಂದ
ಕೆಲಸಂಗಳ ಬಿಟ್ಟುಬಿಟ್ಟವನುದೆ ತಿಳುವಳಿಕೆಯಿಂದಲಾಗಿ ಸಂಶಯಂಗೊ ಎಲ್ಲಾ ತೀರಿದವನುದೇ ಆದ
ಆತ್ನಜ್ಞಾನಿಯ (ತನ್ನಲ್ಲಿಯೇ ನೆಲೆನಿಂಬವನ) ಕೆಲಸಂಗೊ ಕಟ್ಟಿಹಾಕುತ್ತವಿಲ್ಲೆ.
4.42 ಹಾಂಗಾಗಿ ನಿನ್ನ ಎದೆಲಿಪ್ಪ ಅಜ್ಞಾನದಿಂದ ಮೂಡಿದಂಥಾ, ಬೇಜಾರಾದಿಗೊಕ್ಕೆ
ಕಾರಣವಾದ ಈ ಸಂಶಯವ (ದೇಹ ನಶ್ವರ ಆತ್ಮ ಅನಶ್ವರ ಇತ್ಯಾದಿ ತಿಳುವಳಿಕೆ ಹೊಂದಿದಂಥಾ) ಜ್ಞಾನವಾದ
ಬಾಳಿಂದ ಕಡುದು ಇಲ್ಲದ್ದೆ ಮಾಡಿ ಕರ್ಮಯೋಗವನ್ನು ಬೆಳೆಸು, ನಿನ್ನ ಕರ್ತವ್ಯ ಮಾಡುಲಾಗಿ ಎದ್ದು
ನಿಲ್ಲು.
ಹೀಂಗೆ ಒಳ್ಳೆದಾದನ್ಥಾ ಉಪನಿಷ್ತತುಗಳಾದ, ಬ್ರಹ್ಮದ ಬಗೆ ಇಪ್ಪ
ತಿಳುವಳಿಕೆಯಾದ, ದೇವರತ್ತರೆ ಹೇಂಗೆ ಸೇರುವದು ಹೇಳುವ ಶಾಸ್ತ್ರವಾದ, ಶ್ರೀ ಕೃಷ್ಣ ಮತ್ತು ಅರ್ಜುನ
ಮಾಡಿದ ಮಾತುಕತೆಯ ರೂಪಲ್ಲಿಪ್ಪ ದೇವರ ಮಾತುಗಳಲ್ಲಿ ತಿಳುವಳಿಕೆಯಿಂದಲಾಗಿ ಕೆಲಸವನ್ನು ಬಿಡುವದು
ಹೇಳಿ ಹೆಸರಿಪ್ಪ ನಾಲ್ಕನೇ ಅಧ್ಯಾಯ ಮುಗುದತ್ತು. (ಜ್ಞಾನ ಕರ್ಮ ಸಂನ್ಯಾಸ ಯೋಗ)
(ಸಂಸ್ಕೃತ ಮೂಲವಾಗಿಪ್ಪ ಭಗವದ್ ಗೀತಾ ಶಾಸ್ಥ್ರಕ್ಕೆ ದಕ್ಷಿಣ ಹವಿಗನ್ನಡ
ಭಾಷೆಲಿ ಕೈಲಂಕಜೆ ಆಶಾಕಿರಣ ಶರ್ಮ ಹೇಳಿ ಹೆಸರಿಪ್ಪ ಹವೀಕ ಬ್ರಾಹ್ಮಣ ಬರದ ತರ್ಜಮೆಯ ನಾಲ್ಕನೇ
ಅಧ್ಯಾಯ 1934ನೇ ಶಕವರ್ಷ ಮಾರ್ಗಶೀರ್ಷ 21ನೇ ಬುಧವಾರ ದಿವಾಘಂಟೆ 12.43 (12.43 PM,12.12.12). ಬರದ ಜಾಗೆ - ಕೋಯಂಬತ್ತೂರ್-ಕಂಜಿಕ್ಕೋಡ್, ಭಾರತಲ್ಲಿ
ಇಡೀಯಾತು).
No comments:
Post a Comment