ದೇವರ ಮಾತು - ಒಂಬತ್ತನೇ ಅಧ್ಯಾಯ
ಒಳ್ಳೆಯವರಾದ ದೇವರು
ಹೇಳಿದವು
9.1 ಈಗ ಆನು, ಯಾವದರಲ್ಲಿಯೂ ತಪ್ಪಾದ ನೋಟ ಇಲ್ಲದ್ದವನಾದ ನಿನಗೆ
ತುಂಬಾ ಗುಟ್ಟಾಗಿ ಇಪ್ಪ ತಿಳುವಳಿಕೆಯ ಹೇಳಿ ಕೊಡುತ್ತೆ ಆತಾ, ಈ ತಿಳುವಳಿಕೆ ನೀನು ಮಾಡಿ
(ಆಚರಿಸಿ) ಅನುಭವಲ್ಲಿ ಗೊಂತುಮಾಡುವ ಹಾಂಗಿಪ್ಪದುದೇ ಕೂಡಾ. ಈ ಸಂಗತಿ ಕಲುತ್ತರೆ ಒಳ್ಳೆದಲ್ಲದ್ದ
ಎಲ್ಲದರಿಂದಲೂ ನಿನಗೆ ಬಚವಪ್ಪಲಕ್ಕು.
9.2 ಈ ತಿಳುವಳಿಕೆ ಊಪಾಯಂಗೊಕ್ಕೆಲ್ಲಾ ಅರಸನಾದ ಉಪಾಯ, ಹಾಂಗೇ ಆರಿಂಗು
ಹೆಚ್ಚಾಗಿ ಗೊಂತಿಲ್ಲದ್ದದುದೆ, ತುಂಬಾ ಚೊಕ್ಕವಾದ್ದದುದೆ, ಒಳ್ಳೆದುದೆ, ಅನುಭವನ್ದ ಸರಿಯಾಗಿ
ಗೊಂತಪ್ಪಲೆ ಎಡಿವದುದೇ, ಧರ್ಮದ ದಾರಿಲಿ ನಿನ್ನ ನಡೆಸುವಂಥಾದ್ದುದೆ, ಮಾಡುಲೆ ಸುಲಾಭ ಇಪ್ಪದುದೆ
ಹಾಂಗೇ ಒಂದರಿಯುದೇ ಬದಲುಸೆಕ್ಕಾಗದ್ದದುದೇ ಆದ ಉಪಾಯ.
(ಆದರೆ)
9.3 ತುಂಬ ಕಠಿನವಾಗಿ ಶ್ರಮಿಸುವನಾದ ಅರ್ಜುನಾ, ಈ ಉಪಾಯಲ್ಲಿ ಗವನ
ಕೊಡದ್ದ ಮನುಷ್ಯರು ಎನ್ನ ಹೊಂದುಲೆಡಿಯದ್ದೇ ಸಾವು ಹುಟ್ಟುಗಳ ಮಧ್ಯಲ್ಲಿಪ್ಪಂಥಾ ಈ ಲೋಕಕ್ಕೆ
ತಿರುಗಿ ತಿರುಗಿ ಬತ್ತಾ ಇರುತ್ತವು.
9.4 ಹೀಂಗೇ ಹೇಳಿ ವ್ಯಕ್ತವಲ್ಲದ್ದವನಾದ ಎನ್ನಿಂದಲೇ ಈ ಎಲ್ಲಾವುದೇ
ತುಂಬಿಗೊಂಡಿದ್ದು. ಎನ್ನಲ್ಲಿಯೇ ಎಲ್ಲಾ ಜೀವಜಾಲವುದೇ ಇಪ್ಪದು ಹೊರತು ಆನು ಆ ಜೀವಜಾಲಂಗಳ ಒಳಗೆ
ಇಪ್ಪದಲ್ಲ. (ಜೀವಜಾಲಂಗಳ ಒಳಗೆ ಅಥವಾ ಅವಗಳಲ್ಲಿ ದೇವರಿಪ್ಪದಾಗಿ ತೋರುದು ಸಹಜ ಆದರೆ ಹಾಂಗಲ್ಲ
ಸಂಗತಿ ಹೇಳಿ ದೇವರು ಹೇಳುತ್ತವು)
9.5 ಎನಗೆ ಎಲ್ಲಾ ವಸ್ತುಗಳನ್ನುದೇ ವಿಶೇಷವಾದ ರೀತಿಲಿ
ಎತ್ತಿಗೊಂಡಿಪ್ಪಲಿಪ್ಪ ಸಾಮರ್ಥ್ಯ ಇಪ್ಪದರ ನೀನು ಗೊಂತುಮಾಡೆಕ್ಕು. ಅದರಿಂದಲಾಗಿಯೇ ಒಂದು
ಜನ್ತುವುದೇ ಎನ್ನಲ್ಲಿ ತಾಂಗಿ ನಿನ್ದದುಗೊಂಡಿಲ್ಲೆ, ಹಾಂಗೇ ಅದರ ಎಲ್ಲಾ ತಾಂಗಿಗೊಂಡು ಆನಿದ್ಗೆ.
ಅದೇ ಕಾಲ ಆನಾ ಒಂದರನ್ನುದೇ ಎನಗೆ ತಾಂಗಾಗಿ ಮಾಡುತ್ತಾ ಇಲ್ಲೆ.
9.6 ಎಲ್ಲಾ ಜಾಗೆಲಿಯೂ ಬೀಸುತ್ತಾ ಇಪ್ಪ ಗಾಳಿ ಹೇಂಗೆ ಆಕಾಶಲ್ಲಿ
ನಿಂದುಗೊಂಡಿದ್ದೋ ( ಆಕಾಶಕ್ಕೆ ಅಂಟಿಗೊಂಡಿಲ್ಲೆಯೋ) ಹಾಂಗೇ ಎಲ್ಲಾ ವಸ್ತುಗಳುದೇ ಜೀವಜಾಲವುದೇ
ಎನ್ನಲ್ಲಿ ನಿಂದುಗೊಂಡಿಪ್ಪದು ಹೇಳಿ ನೀನು ತಿಳಿಯೆಕ್ಕದ.
9.7 ಕುಂತಿಯ ಮಗನೇ, ಒಂದು ಕಲ್ಪ ಹೇಳಿಪ್ಪ ಕಾಲ ವುಗಿವಗ ಎಲ್ಲಾ
ವಸ್ತುಗಳುದೇ ಎನ್ನಲ್ಲಿ ಕರಡಿದಹಾಂಗಾವುತ್ತು. ಮತ್ತೆ ಸೃಷ್ಟಿಯ ಕಾಲಲ್ಲಿ ಕರಡಿದದ್ದರ ಎಲ್ಲಾ
ತಿರುಗಿ ಅದಾದ್ದರ ರೂಪಲ್ಲಿ ಬದಲುಸಿ ಹೆರತತ್ತೆ.
9.8 ಎನ್ನ ಪ್ರಕೃತಿ ಅಥವಾ ಮಾಯಾ ಶಕ್ತಿಯಿಂದಲಾಗಿ ಮತ್ತು ಮತ್ತು ಈ
ಜೀವಜಾಲಾದಿಗಳ ಸೃಷ್ಟಿ ಮಾಡುತ್ತಾ ಇರುತ್ತೆ.
9.9 ಆದರೆ ಎಂತದುದೇ ಮಾಡದ್ದವನಾಂಗೆ ಇಪ್ಪದರಿಂದ, ಆ ಸಂಗತಿಲಿ
ಮನಸ್ಸಿನ ಅಂಟುಸಿಗೊಳ್ಳದ್ದಿಪ್ಪದರಿಂದ ಎನಗೆ ಆ ಕೆಲಸಂಗಳಿಂದಲಾಗಿ ಎಂತ ತೊಂದರೆಯೂ ಆವುತ್ತಿಲ್ಲೆ.
9.10 ಎನ್ನ ಶಕ್ತಿಯಾದ ಪ್ರಕೃತಿ (ಅಥವಾ ಮಾಯೆ) ಎನ್ನ ಮೇಲ್ನೋಟದಲ್ಲಿ
ಹಂದುದುದೇ ಹಂದದ್ದದುದೇ ಆದ ಎಲ್ಲದರನ್ನುದೇ ಹುಟ್ಟುಸುತ್ತಾ ಬತ್ತು. ಕುನ್ತಿಯಮಗನೇ, ಈ
ಕಾರಣಂದಲಾಗಿಯೇ ಲೋಕ (ಅಥವಾ ಜಗತ್ತು) ಮತ್ತು ಮತ್ತು ಬದಲಾವಣೆ ಹೊಂದುತ್ತಾ ಇಪ್ಪದು.
9.11 ಆನು ಎಲ್ಲಾ ವಸ್ತುಗೊಕ್ಕುದೇ ದೇವರಾಗಿಪ್ಪವ. ಆದರೆ ಸಾಧಾರಣವಾಗಿ
ಬುದ್ದಿ ಕಮ್ಮಿ ಇಪ್ಪವು ಈ ನಿಜ ಗೊಂತಿಲ್ಲದ್ದೆ ಆನೊಂದು ಮನುಷ್ಯನಹಾಂಗೆ ಹೇಳಿ ತಪ್ಪಾಗಿ ವಿಚಾರಿಸುತ್ತವು.
9.12 ಪ್ರಯೋಜನವಿಲ್ಲದ್ದ ಆಸೆಗೊ ಇಪ್ಪವರಾಗಿ, ಪ್ರಯೋಜನವಿಲ್ಲದ್ದ
ಕೆಲಸಂಗಳ ಮಾಡುವವಾಗಿ,ಪ್ರಯೋಜನವಿಲ್ಲದ್ದ ತಿಳುವಳಿಕೆ ಇಪ್ಪವಾಗಿ, ಒಳ್ಳೆ ಗುಣಂಗೊ ಇಲ್ಲದ್ದವಾಗಿ,
ಗುಂಡಂಗಳ ಹಾಂಗುದೇ, ಬಯೋತ್ಪಾದಕರಾಂಗುದೆ ಜೀವಿತ ನಡೆಸಿಗೊಂಡು ಇಪ್ಪವರಾಗಿ ಇಪ್ಪವು ಅವು.
9.13 ಆದರೆ ಲಾಯಕ ಗುಣಂಗೊ ಎಲ್ಲಾ ಇಪ್ಪಂಥಾ ಒಳ್ಳೆ ಜನಂಗೊ, ಭಾರೀ
ಒಳ್ಳೆ ರೀತಿಗಳ ಜೀವನದಲ್ಲಿ ಅವಲಂಬಿಸಿಗೊಂಡು ಎನ್ನನ್ನೇ ಗಟ್ಟಿಯಾಗಿ ಆಶ್ರಯಿಸಿಗೊಂಡು ಎಲ್ಲಾ
ವಸ್ತುಗೊಕ್ಕುದೇ ಸುರುವಾಗಿಪ್ಪವನುದೇ, ಬದಲಾವಣೆ ಆಗದ್ದವನುದೇ, ಆದ ಎನ್ನ ಗೊಂತುಮಾಡಿ
ಸೇವಿಸುತ್ತವು.
9.14 ಎನ್ನ ಮತ್ತು ಮತ್ತು ಹಾಡಿ ಹೊಗಳಿಗೊಂಡು ದೃಢನಿಶ್ಟಯಂಗಳ
ಮಡಿಕ್ಕೊಂಡು ಅಧ್ವಾನಮಾಡಿಗೊಂಡು,ದಿನಸರಿ ಕೆಲವು ನಿಷ್ಠೆಗಳ ಜೀವಿತಲ್ಲಿ ಕೈಗೊಂಡು, ಭಕ್ತಿಯಿಂದ ದೇವರ
(ಎನ್ನ) ಪೂಜೆ ಪುನಸ್ಕಾರಂಗಳ ಮಾಡಿಗೊಂಡು ಬತ್ತವು.
9.15 ಇನ್ನು ಕೆಲವು ಜನ ಎಲ್ಲಾ ರೂಪಲ್ಲಿಯೂ ಇಪ್ಪವನಾದ ಎನ್ನ ಹಲವಾರು
ರೀತಿಯ ತಿಳುವಳಿಕೆಗಳ ಪಡವದು, ಕೊಡುವದು ಅಡಗುವ ಜ್ಞಾನಯಜ್ಞವ ಮಾಡಿ ಆರಾಧನೆ ಮಾಡುತ್ತವು. ಇನ್ನು
ಕೆಲವು ಜನ ದೇವರುದೆ ಭಕ್ತನುದೇ ಲೋಕವುದೇ ಎಲ್ಲಾ ಒಂದೇ ಹೇಳಿಪ್ಪ ರೀತಿಲಿ ಆರಾಧಿಸ್ಸುತ್ತವು,
ಮತ್ತೆ ಕೆಲವು ಜನ ಇದೆಲ್ಲಾ ಬೇರೆ ಬೇರೆ ಹೇಳುವ ರೀತಿಲಿ ಆರಾಧಿಸುತ್ತವು, ಇನ್ನೂ ಕೆಲವರು ದೇವರೇ ಬೇರೆ
ಬೇರೆ ರೂಪಲ್ಲಿ ಬೇರೆ ಬೇರೆ ದೇವರ್ಕ್ಕಳಾಗಿ ಇದ್ದವು ಹೇಳುವ ಸಂಕಲ್ಪಲ್ಲಿ ಪೂಜೆ ಮಾಡುತ್ತವು.
9.16 ಆನೇ ವೇದೋಚ್ಚಾರಣೆಯಿಂದ ಮಾಡುವ ಯಾಗ ಹೋಮಾದಿಗೊ, ಆನೇ ಹಲವಾರು
ಸಾಮುಹಿಕ ಕಾರ್ಯಕ್ರಮಂಗೊ,ಆನೇ ಪಿತೃಗೊಕ್ಕೆ ಮಾಡುವ ತಿಥಿ ಮುಂತಾದ್ದದುದೆ, ಜೀವಿಗೊಕ್ಕೆ
ರೋಗಬಂದರೆ ಬದಲುಸುವ ಮದ್ದುದೇ ಆನೇ, ಮನ್ತ್ರವುದೇ ಆನೇ, ಆನೇ ತುಪ್ಪ, ಆನೇ ಕಿಚ್ಚು, ಹೋಮಸುವ
ದ್ರವ್ಯವುದೇ ಆನೇ (ಎಲ್ಲಾ ವಸ್ತುಗಳುದೆ ಕಾರ್ಯಕ್ರಮಂಗಳುದೇ ಆನೇ ಹೇಳಿ ದೇವರು ತಿಳಿಶುವದು)
9.17 ಈ ಲೋಕದ ಅಪ್ಪ,
ಅಮ್ಮ, ಅಜ್ಜ, ಬೆಳೆಸುವವ, ಎಲ್ಲಾ ಆನೇ. ಆನೇ ತಿಳಿಯೆಕ್ಕಾದ್ದದುದೇ ತುಂಬಾ ಸ್ವಚ್ಚವಾದ್ದದುದೇ
(ಸ್ವಚ್ಚವಾಡುವ ಸೂರ್ಯಕಿರಣ, ನೀರು ಇತ್ಯಾದಿ ವಸ್ತುಗೆ ಎಲ್ಲಾ), ಓಂ ಕಾರವುದೇ, ಋಗ್ವೇದ,
ಯಜುರ್ವೇದ, ಸಾಮವೇದ ಅಥರ್ವ ವೇದ ಇತಿಹಾಸ ಪುರಾಣ ಇದೆಲ್ಲವುದೇ ಆನೇ.
9.18 ಹೋಪ ದಾರಿಯದೇ, ಆಡಳಿತಗಾರನುದೇ,
ಗುರಿಕ್ಕಾರನುದೇ, ನೋಡಿ ನಡೆಶುವವನುದೇ, ಮನೆಯುದೇ, ಆಶ್ರಯವುದ, ದೋಸ್ತುದೇ, ಸುರುವುದೇ,
ಒಡೂಕವುದೇ, ಎಲ್ಲಾ ಹಾಳಾಗಿ ಹೊಪಜಾಗೆಯುದೇ, ಎವಗಳುದೇ ಬದಲದ್ದನ್ಥಾ ಬಿತ್ತುದೇ ಎಲ್ಲಾ ಆನೇ.
9.19 ಆನೇ ಸೂರ್ಯನಾಗಿ ಹೊತ್ತಿಗೊಂಡಿಪ್ಪದುದೇ ಬೆಶಿಮಾಡುದುದೇ, ಮಳೆಯ
ಬರುಸುದುದೇ ಬಾರದ್ದಾಂಗೆ ತಡವದುದೇ ಆನೇ. ಸಾಯದ್ದದುದೇ ಆನೇ ಸಾವುದೇ ಆನೇ, ಲಾಯಕದ್ದುದೇ
ಲಾಯಕಲ್ಲದ್ದದುದೇ ಆನೇ ಅರ್ಜುನಾ
9.20 ಯಾಗಾದಿಗಳ (ಸತ್ಕರ್ಮಂಗಳ) ಮಾಡುವವು ಅದರ ಮಾಡಿದ್ದರಿಂದಲಾಗಿ
ಅವರ ಪಾಪ ಎಲ್ಲಾ ಇಲ್ಲದ್ದೆ ಆಗಿ ದೇವಲೋಕಕ್ಕೆ ಹೋಪಲೆ ಆಗ್ರಹಿಸುತ್ತವು. ಆ ದೇವಲೋಕಕ್ಕೆ ಹೋಗಿ
ಬೇರೆ ಬೇರೆ ತರದ ಸನ್ತೋಷದ ಸಂಗತಿಗಳ ಅನುಭವಿಸುತ್ತವು.
9.20 ಅವು ವಿಶಾಲವಾದ ದೇವಲೋಕಲ್ಲಿಪ್ಪ ಸುಖವ ಎಲ್ಲೆ ಅನುಭವಿಸುವಗ
ಪುಣ್ಯ ಕಮ್ಮಿಯಾವುತ್ತು. ಹಾಂಗೆ ಪುಣ್ಯ ಕಮ್ಮಿ ಅಪ್ಪಗ ಮತ್ತ ಮನುಷ್ಯರ ಲೋಕಕ್ಕೆ ಬತ್ತವು. ಹೀಂಗೆ
ಸತ್ಕರ್ಮಂಗಳ ಮಾಡಿಗೊಂಡು ಹೋಗಿ ಬನ್ದು ಮಾಡುತ್ತಾ ಇರ್ತವು.
9.22 ಇದರ ಎಲ್ಲಾ ಮಧ್ಯಲ್ಲಿ ಆರು ಬೇರೆ ಆರ ಬಗ್ಗೆಯುದೇ ವಿಚಾರ
ಮಾಡದ್ದೆ ಬಿಡುಗಡೆ ಇಲ್ಲದ್ದೆ ಎನ್ನ ಬಗ್ಗೇ ವಿಚಾರಿಸುತ್ತಾ ಉಪಾಸನೆ ಮಾಡುತ್ತವೋ ಹಾಂಗಿಪ್ಪ
ಯಾವಾಗಳುದೇ ಎನ್ನೊಟ್ಟಿಂಗೇ ಇಪ್ಪವಕ್ಕೆ ಧನ ಮಾನ ಪದವಿ ಇತ್ಯಾದಿಗಳ ಕೊಟ್ಟುಗೊಂಡು ಅದರ ಸಂರಕ್ಷಣೆ
ಮಾಡಿಗೊಂಡು ಆನೇ ಇರುತ್ತೆ.
9.23 ಇನ್ನು ಒಂದು ವಿಷಯ ಎಂತಾಳಿದರೆ, ಎನ್ನ ಅಲ್ಲದ್ದೆ ಬೇರೆ
ದೇವರ್ಕ್ಕಳ ಶ್ರದ್ದೆಯಿಂದ ಆರಾಧನೆ ಮಾಡುವವುದೆ ಸೀದ ಆಲ್ಲದ್ದರದೇ ಬಳಂಕಿದ ದಾರಿಲಿ (ಸುತ್ತಿಬಪ್ಪಾಂಗೆ) ಎನ್ನನ್ನೇ ಪೂಜೆ
ಮಾಡುವದು. (ಸರಿಯಾದ ವಿಧಿಯಲ್ಲದ್ದೇ)
9.24 ಎಲ್ಲಾ ವಿಧ ಪೂಜೆ ಪುನಸ್ಕಾರ ಆರಾಧನೆಗಳದ್ದುದೇ ಆಡಳಿತಗಾರ ಆನೇ
ಆ ಪೂಜೆಗಳ ಸ್ವೀಕರಿಸುವದುದೇ ಆನೇ, ಆದರೆ ಸರಿಯಾದ ರೀತಿಲಿ ಎನ್ನ ಗೊಂತಿಲ್ಲದ್ದದರಿಂದಲಾಗಿ
ಅವಕ್ಕೆ ಮೋಕ್ಷದ ದಾರಿನ್ದ ಜಾರಿ ಹೋಗೆಕ್ಕಾಗಿ ಬತ್ತು.
9.25 ಬೇರೆ ಬೇರೆ ದೇವರ್ಕಳ ಪೂಜೆ ಮಾಡುವವಕ್ಕೆ ಅವರ ಸಿಕ್ಕುತ್ತು.
ಸ್ತತುಹೋದವರ (ಪಿತೃಗಳ) ಪೂಜೆ ಮಾಡುವವು ಅವರತ್ತರಂಗೆ ಹೋವುತ್ತವು. ಗಾಳಿ, ನೀರು ಇತ್ಯಾದಿ
ಭೂತಂಗಳ ಪೂಜೆಮಾಡುವವು ಅವರತ್ತರಂಗೆ ಹೋವುತ್ತವು. ಎನ್ನ ಪೂಜೆ ಮಾಡುವವು ಎನ್ನತ್ತರಂಗೆ ಬತ್ತವು.
9.26 ಆರಾದರುದೇ ಎಲೆ, ಹೂಗು, ಹಣ್ಣು, ನೀರು ಇದೆಲ್ಲಾ ಎನಗಾಗಿ
ತೆಕ್ಕೊಂಡು ಬನ್ದು ಕೊಡುತ್ತವೋ ತುಂಬಾ ಪ್ರೀತಿಯಿಂದ ತಂದ ಅದರ ಆನುದೇ ಪ್ರೀತಿಯಿಂದಲೇ
ತೆಕ್ಕೊಳುತ್ತೆ.
9.27 ಕುನ್ತಿಯ ಮಗನೇ, ಎಂತರ ಎಲ್ಲ ಮಾಡುತ್ತೆಯೋ, ಎಂತರ ಎಲ್ಲಾ
ತಿಂತೆಯೋ, ಎಂತರ ಎಲ್ಲಾ ಹೋಮುಸುತ್ತೆಯೋ, ಎಂತರ ಎಲ್ಲಾ ಆರಿಂಗಾದರುದೇ ಕೊಡುತ್ತೆಯೋ ಎಂತೆಲ್ಲಾ
ಕಷ್ಟ ಪಡುತ್ತೆಯೋ ಅದರ ಎಲ್ಲಾ ಎನಗೆ ಸಮರ್ಪಣೆ ಮಾಡಿಬಿಡು.
9.28 ಹೀಂಗೆ ಎನ್ನಲ್ಲಿ ಎಲ್ಲಾ ಸಮರ್ಪೆಣೆ ಮಾಡಿಗೊಂಡು ಜೀವಿಸಿದರೆ,
ಒಳ್ಳೆದೂ ಹಾಳೂಹೇಳಿ ಫಲಕೊಡುವನ್ಥಾ, ಕೆಲಸಂಗಳಿಂದಲಾಗಿ ಕಟ್ಟಿಹಾಕಿದಾಂಗಿಪ್ಪ ಅವಸ್ಥೆಯಿಂದ ನಿನಗೆ
ಬಚವಪ್ಪಲಕ್ಕು. ಬಚವಾದಮೇಲೆ ಅದೇ ರೀತಿಲಿ ಮುಂದೆ ಹೋದರೆ ಎನ್ನಲ್ಲಿಗೆ ಸೇರುಲುದೆ ಎಡಿಗು.
9.29 ಆನು ಎಲ್ಲಾ ಜೀವಿಗಳಲ್ಲಿಯುದೇ ತುಲ್ಯವಾಗಿಯೇ ಇಪ್ಪವ. ಎನಗೆ
ಅಪ್ಪವ ಆಗದ್ದವ ಹೇಳಿ ಇಲ್ಲೆ. ಆರೆಲ್ಲಾ ಎನ್ನ ತುಂಬಾ ಭಕ್ತಿಯಿಂದ ಸೇವಿಸುತ್ತವೋ ಅವು ಇಪ್ಪದು
ಎನ್ನಲ್ಲಿಯೇ, ಹಾಂಗೇ ಆನು ಅವರಲ್ಲಿಯುದೇ ನೆಲೆಸುತ್ತೆ.
9.30 ತುಂಬಾ ಮೋಸವಾದ ರೀತಿಲಿ ಜೀವಿಸಿದವನಾದರೂ ಕೂಡಾ, ಒಬ್ಬ ಬೇರೇ
ಆರನ್ನುದೇ ಆಶ್ರಯಿಸದ್ದೇ ಎನ್ನನ್ನೇ ಸೇವಿಸಿಗೊಂಡಿದ್ದಾ ಹೇಳಿದ್ದರೆ ಅವನ ಒಳ್ಳೆಯವ ಹೇಳಿಯೇ
ಗ್ರೇಶಿಸೆಕ್ಕು. ಎಂತಗೇ ಹೇಳಿದರೆ ಅವ ಈಗ ಸರಿಯಾದ ನಿಶ್ಚಯವನ್ನೇ ಮಾಡಿದ್ದ ಅಲ್ಲದಾ, ಹಾಂಗಾಗಿ.
9.31 ನೋಡು, ಇನ್ನವ ಬೇಗ ಒಳ್ಳೆಯವ (ಧರ್ಮಾತ್ಮ) ಆವುತ್ತಾ. ಅದು
ಮಾಂತ್ರ ಅಲ್ಲ ಶಾಶ್ವತವಾದ ಶಾನ್ತಿಯನ್ನುದೇ ಹೊಂದುತ್ತಾ. ಏ ಕುನ್ತಿಯ ಮಗನೇ ನೀನೊಂದು ಸಂಗತಿ
ಗಟ್ಟಿಯಾಗಿ ತಿಳುಕ್ಕೊ – ಎನ್ನ ಭಕ್ತ ಒಂದರಿಯದೇ ಹಾಳಾಗಿ ಹೋವುತ್ತಾ ಇಲ್ಲೆ.
9.32 ಹೆಮ್ಮಕ್ಕೊ
ಆಗಲೀ, ವ್ಯಾಪಾರಿಗೆ, ಕೃಷಿಕಂಗೋ, ದನವ ಕಟ್ಟಿ ಹಾಲುಮಾರಾಟಮಾಡುದು ಇತ್ಯಾದಿಮಾಡುವವು ಆಗಲೀ, ಬರೇ
ಶೂದ್ರುಗೊ ಆಗಲೀ (ಅಲ್ಲಾ ಇನ್ನು ಹೊಲೆ ಹದಿನೆಂಟು ಜಾತಿಲಿಪ್ಪವೇ ಆಗಲಿ) ಅವಕ್ಕೆಲ್ಲವುದೇ ಎನ್ನ
ಭಕ್ತಿಯಿಂದ ಸೇವಿಸುಲೆ ಅರ್ಹತೆ ಇದ್ದು. ಹಾಂಗೆ ಸೇವಿಸಿ ಅತ್ಯುತ್ತಮವಾದ ಸ್ಥಾನವ ಅಥವಾ ಮೋಕ್ಷವ
ಹೊಂದುಲುದೇ ಎಡಿಗು.
9.33 ಮತ್ತಿದ್ದೋ ಕಲಿವಿಕೆ ಇಪ್ಪ ಶಾಸ್ತ್ರಾರ್ಥಂಗಳಲ್ಲಿ ತಿಳುವಳಿಕೆ
ಇಪ್ಪ ನಿನ್ನಾಂಗಿಪ್ಪವಕ್ಕೆ ಎಡಿಯದ್ದೆ?. ಹಾಂಗಾಗಿ ಎವಗಳೂ ನೆಲೆನಿಂಬ ಸುಖ ಸಿಕ್ಕದ್ದಂಥಾ ಈ
ಲೋಕಕ್ಕೆ ಬನ್ದಂಥಾ ನೀನು ಎನ್ನ ಸೇವಿಸು.
9.34 ಎನ್ನಲ್ಲಿಯೇ ಮನಸ್ಸಿನ ಮಡುಗು. ಎನಗಾಗಿಯೇ ಯಾಗಂಗಳ ಪೂಜೆಗಳ
ಮಾಡು. ಎನ್ನನ್ನೇ ಹೊಡಾಡುತ್ತಾ ಇರು. ಹೀಂಗೆ ಎನ್ನ ಬಗ್ಗೇ ಗ್ರೇಶಿಗೊಂಡು ಜೀವಿಸಿದರೆ ಎನ್ನನ್ನೇ
ಪಡೆತ್ತೆ ನೋಡು.
-ಹೀಂಗೆ ಇಲ್ಲಿಗೆ ಗುರುವಿನ ಹತ್ತರಿದ್ದುಗೊಂಡು ಪಡವ ತಿಳುವಳಿಕೆಗಳಂಥಾ, ದೇವರಬಗ್ಗಿಪ್ಪ
ವಿದ್ಯೆಯಾದಂಥಾ, ದೇವರೊಟ್ಟಿಂಗೆ ಸೇರುಲಿಪ್ಪ ಉಪಾಯವಾದಂಥಾ, ಶ್ರಿಕೃಷ್ಣ ಮತ್ತು ಅರ್ಜುನನ ಸಂವಾದ
ರೂಪಲ್ಲಿಪ್ಪಂಥಾ, ದೇವರ ಮಾತುಗಳಲ್ಲಿ ಒಂಬತ್ತನೇ ಅಧ್ಯಾಯ ಇಡೀ ಆತು-
(ಇದು ಬರದ್ದದು ಕೈಲಂಕಜೆ ಹರಿಹರ ಬಟ್ಟರ ಪುಳ್ಳಿ., ರಮಣ ಬಟ್ಟನ ಮಗ.,
ಪದ್ಯಾಣದ ಶಂಕರಿಯ ಮತ್ತೆ ಮಂಡ್ಯೂರು ಶಂಕರ ನಾರಾಯಣನ ಮಗಳು ವಿಜಯಲಕ್ಷ್ಮಿಯ ಮಗ., ಸಾಯಕ್ಕೆ
ಮದುವೆಯಾಗಿ ಹೋಗಿ ಸಣ್ಣಾಗಿಪ್ಪಗಳೇ ವಿಧವೆಯಾದ ಅಮ್ಮನ ಅತ್ತೆ ಶಾರದಮ್ಮನವರು ಮಹಾಭಾರತ, ರಾಮಾಯಣಾ
ಇತ್ಯಾದಿ ಹಲವಾರು ಕಥೆ ಹೋಳಿ ದೊಡ್ಡವಾಡಿದ ಆಶಾಕಿರಣ. 07.08.2013 ನೇ ಇಸವಿ ಶಿರಸಿಯಿಂದ
ಕೋಯಂಬತ್ತೂರಿಂಗೆ ತಿರುಗಿ ಹೋಪಗ ಕೊಂಕಣ್ ರೈಲಿಲ್ಲಿ ಕೂದುಗೊಂಡು ಬರದ್ದದು. ಈಗ ಸುಮಾರು ಮಂಗಳೂರಿನತ್ತರಂಗೆ
ಎತ್ತಿಯಾತು.)