Sunday, August 11, 2013

ಭಗವದ್ ಗೀತೆ, ಭಾಗವತ ಮತ್ತೆ ಮಹಾಭಾರತ

          ಕೇಳುಲೆ ಸಾಮ್ಯತೆ ಇಪ್ಪದರಿಂದ ಈ ಮೂರು ಪುಸ್ತಕಂಗಳನ್ನುದೇ ಹಲವಾರು ಜನರು ಒನ್ದಕ್ಕೊಂದು ಬದಲಿ ತಿಳಿವದರ ಆನು ಕಂಡಿದೆ. ಅದಕ್ಕಾಗಿ ಈ ಲೇಖನ ಬರವದು.
ನಮ್ಮ ಸಂಸ್ಕೃತ ಅಧ್ಯಾತ್ಮಿಕ ಸಾಹಿತ್ಯಲ್ಲಿ ಇಪ್ಪ ಎರಡು ಮುಖ್ಯ ಗ್ರನ್ಥಂಗೊ ಮಹಾ ಭಾರತವುದೇ ಭಾಗವತವುದೇ. ಇದರ್ಲಲಿ ಮಹಾ ಭಾರತವ ಇತಿಹಾಸ ಹೇಳಿ ದಿನುಗೋುವ ಕ್ರಮ. ಮಹಾ ಭಾರತಲ್ಲಿ ಹದಿನೆಂಟು ಪರ್ವಂಗೊ ಆಗಿ ಕಥಗಳ ವಿಭಜನೆ ಮಾಡಿದ್ದವು. ಆ ಹದಿನೆಂಟು ಪರ್ವಂಗಳಲ್ಲಿ ಹಲವಾರು ಅಧ್ಯಾಯಂಗೊ ಇದ್ದು. ಎಲ್ಲಾ ಅಧ್ಯಾಯಲ್ಲಿಯೂ ಸೇರಿ ಒಂದು ಲಕ್ಶ ಶ್ಳೋಕಂಗೊ ಬರದ್ದವು. ಈ ಒಂದು ಲಕ್ಷ ಶ್ಳೋಕಂಗಳ್ಲಲಿ 700 ಶ್ಲೋಕಂಗಳೇ ಭಗವದ್ ಗೀತಾ ಹೇಳಿ ಹದಿನೆಂಟು ಅಧ್ಯಾಯಂಗಳಾಗಿ ಇಪಇಪ್ಪದು. ಹಾಂಗಾಗಿ ಭಗವದ್ ಗೀತೆ ಮಹಾಭಾರತದ್ದೇ ಒಂದು ಭಾಗ ಹೇಳಿ ಹೇಳುಲಕ್ಕು.
ವಿಷ್ಣುವಿನ ಸಾವಿರ ಹೆಸರುಗಳ ಜೋಡುಸಿ ಮಾಡಿದ ವಿಷ್ಣು ಸಹಸ್ರನಾಮ ಇದೇ ಮಹಾಭಾರತದ ಒಂದು ಅಧ್ಯಾಯ.
ಭಾಗವತ ಹೇಳಿದರೆ ಪುರಾಣ ಸಾಹಿತ್ಯ ಗ್ರನ್ಥ. ಭಾರತದೇಶಲ್ಲಿ ಸಂಸ್ಕೃತಲ್ಲಿಯೂ ಬೇರೆ ಭಾಷೆಗಳಲ್ಲಿಯೂ ಸೇರಿ ನೂರು ಕಟ್ಳೆಗೆ ಪೂರಾಣ ಪುಸ್ತಕಂಗೊ ಇಪ್ಪದರಲ್ಲಿ ಒಂದು ಮುಖ್ಯವಾದ ಪುರಾಣ ಭಾಗವತ ಪುರಾಣ. ವಿಷ್ಣು ದೇವರ ಬಗ್ಗಿಪ್ಪ ಕಥಗಳುದೇ ಪ್ರಪಞ್ಚದ ಸೃಷ್ಟಿ ಇದೆಲ್ಲಾ ವಿವರಿಸುವದೇ ಭಾಗವತ. ಇದರಲ್ಲಿ ಹನ್ನೆರಡು ಸ್ಕಂದಂಗೊ ಇಪ್ಪದು. ಒಟ್ಟಾರೆ 24 ಸಾವಿರದಷ್ಟು ಶ್ಲೋಕಂಗೊ ಇದರಲ್ಲಿದ್ದು. ಭಾಗವತ ಭಗವದ್ ಗೀತೆಂದ ಎಷ್ಚೋ ದೊಡ್ಡ ಪುಸ್ತಕ. ಭಗವದ್ ಗೀತೆಲಿ ದೇವರ ಸಂದೇಶಂಗೊ ಮಾಂತ್ರ ಇಪ್ಪದು, ಕಥಗೊ ಇಲ್ಲೆ, ಆದರೆ ಭಾಗವತಲ್ಲಿ ಕಥೆಗಳ ಎಡೆ ಎಡೇಲಿ ದೇವರ ಮಾತುಗಳ ಸೇರುಸಿದಾಂಗಿದ್ದು, ಇದುವೇ ಇದೆರಡರ ವ್ಯತ್ಯಾಸ.

3 comments:

  1. Good effort. All the best.
    Make CD / MP3 also
    Make video / Audio also
    Once again All the best
    Dr. Venkatagiri, Kasaragod

    ReplyDelete
    Replies
    1. Thank You Dr.VK. Will surely follow your good suggestions. Please help others also to read this posts.
      Ashakiran

      Delete
  2. ಆತ್ಮೀಯ ಬಂಧೋ!
    ಮಹಾನ್ ಸಂತೋಷಃ| ಶ್ಲಾಘನೀಯ ಕಾರ್ಯ ಇದು. ಹೀಂಗೇ ಮುಂದುವರುಸಿ.

    ಕೆಲವು ಅಕ್ಷರ ತಪ್ಪಿನ ಬಗ್ಗೆ ಜಾಗ್ರತೆ ವಹಿಸಿ.
    ಉದಾ -“ಇಪಇಪ್ಪದು” ``ಪ್ರಪಞ್ಚದ''

    - ಮಹೇಶ

    ReplyDelete